ಭಾರತೀಯ ಸಂವಿಧಾನವು ವಿಶ್ವದಲ್ಲಿಯೆ ಬೃಹತ ಹಾಗೂ ಸದೃಢವಾಗಿದ್ದು ಪ್ರತಿಯೋಬ ನಾಗರಿಕನ್ನು ಸಶಕ್ತನಾಗಬೇಕು ಸಮಾನತೆ ಸೋಹದರತೆ ಸಾಮಾಜಿಕ ನ್ಯಾಯವೆ ದೇಶದ ಮಂತ್ರವಾಗಬೇಕು ಎಂಬ ಸಂವಿಧಾನದ ಮೂಲ ಉದೇಶವಾಗಿದೆ ಸಂವಿಧಾನ ಎಂಬುವುದು ಸರ್ವರು ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಸಿದ್ಧಾಂತವನ್ನು ಇಂದಿಗೆ 70ಸಂಭ್ರಮವಾಗಿದೆ. ದೇಶದ ಸಂವಿಧಾನದ ಮುಂದೆ ಯಾವುದೇ ಜಾತಿ ಭೇದ ಲಿಂಗ ತಾರತಮ್ಯವಿಲ್ಲದೆ ಮೇಲು ಕೀಳು ಇಲ್ಲದೆ ಎಲ್ಲರೂ ಒಂದೆ ಎಂಬ ಮನೋಭಾವನೆ ಅಡಗಿದೆ.
ಸಂವಿಧಾನದ ಮುಂದೆ ಪ್ರತಿಯೋಬರು ಸರಿ ಸಮಾನರು ಭಾರತವು ಶಾಂತಿ ಸಮಾನತೆ ಸೌಹರ್ದತೆ ಸ್ವಾಭಿಮಾನ ರಾಷ್ಟವಾಗಲು ಸದೃಢ ನಿರ್ಮಾಣವಾಗಲು ಕಾರಣವಾಗಿದೆ.ನಮ್ಮ ಸಂವಿಧಾನದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಅತಿಹೆಚ್ಚು ಸ್ಥಾನಮಾವಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯ ಮಾತ್ರಇರಬೇಕಾಗಿತ್ತು. ಆದರೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ ಮಹಿಳೆಯರು ಎಲ್ಲಾ ರಂಗದಲ್ಲಿಯೂ ಕೂಡ ಕೆಲಸ ಮಾಡುವ ಹಕ್ಕನ್ನು ಪಡೆದಿದ್ದಾರೆ. ಉದಾಹರಣೆಗೆ ದೇಶದ ಅತ್ಯುನ್ನತ ಹುದ್ದೆ ಯಾಗಿರುವ ರಾಷ್ಟ್ರಪತಿ ಹುದ್ದೆ ಹಿಡಿದು ಬಸ್ ಕಂಡಕ್ಟರ್ ಡ್ರೈವರ್ ಹಿಡಿದು ಎಲ್ಲಾ ರಂಗಗಳಲ್ಲೂ ಕೂಡ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.
ಇದು ಮಹಿಳೆಯರಿಗೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರು ಕೊಟ್ಟ ಬೃಹತ ಕೊಡುಗೆಯಾಗಿದೆ. ಹಾಗೆ ಹಿಂದಿನ ಕಾಲದಲ್ಲಿ ಬ್ರಾಹ್ಮಣರು ಮಾತ್ರ ವಿದ್ಯೆ ಕಲಿಯುವ ಹಕ್ಕಿತ್ತು ಆದರೆ ನಮ್ಮ ಭಾರತ ಸಂವಿಧಾನದಲ್ಲಿ ಎಲ್ಲರೂ ಕೂಡ ವಿದ್ಯೆ ಕಲಿಯುವ ಹಕ್ಕನ್ನು ಕೊಟ್ಟಿದ್ದು ಡಾಕ್ಟರ್ ಬಿ ಆರ್ ಅಂಬೇಡ್ಕರ್. ಅವರು ಇಂಥ ಇಂತಹ ಭವ್ಯವಾದ ಸಂವಿಧಾನವನ್ನು ಕೆಲ ರಾಜಕೀಯ ವ್ಯಕ್ತಿಗಳು ಇದನ್ನು ಬದಲಿಸುತ್ತೇವೆ ಎಂದು ಹೇಳುತ್ತಿದ್ದಾರೆ ಇದು ಸಾಧ್ಯವಿಲ್ಲದ ಮಾತು