ಹಡಪದ ಸಂಘಟನೆಯ ಜಿಲ್ಲಾ ತಾಲೂಕು ಅಧ್ಯಕ್ಷರ ನೇಮಕ

0
20

ಸುರಪುರ: ಹಡಪದ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದೆ. ಸಂಘಟನೆಯಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದು ಹಡಪದ ಸಮಾಜದ ಹಿರಿಯ ಮುಖಂಡ ಶರಣಪ್ಪ ಅಮ್ಮಾಪುರ ಹೇಳಿದರು.

ನಗರದ ಟೇಲರ್ ಮಂಜಿಲ್‌ನಲ್ಲಿ ಸಮಾಜದ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದ ಎಲ್ಲರೂ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಮಕ್ಕಳು ಸಾಕ್ಷರರಾದರೆ ಸಮಾಜ ತನ್ನಿಂದ ತಾನೆ ಅಭಿವೃದ್ಧಿಯಾಗುತ್ತದೆ. ಈ ದಿಸೆಯಲ್ಲಿ ಸಮಾಜದ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಡಾ. ಮಲ್ಲಿಕಾರ್ಜುನ ಹಡಪದ ಮತನಾಡಿ, ಜಿಲ್ಲೆಯಲ್ಲಿ ಹಡಪದ ಸಮಾಜದ ೫೦೦ ಕ್ಕೂ ಹೆಚ್ಚು ಕುಟುಂಬಗಳು ಇವೆ. ನಾವು ಸಂಘಟಿತರಾದಾಗ ರಾಜಕೀಯವಾಗಿ ಪ್ರಬಲರಾಗಲು ಸಾಧ್ಯ ಎಂದರು. ತಾಲ್ಲೂಕು ಘಟಕದ ಅಧ್ಯಕ್ಷರಾದ ನಿಂಗಣ್ಣ ಹಡಪದ ಯಾಳಗಿ ಮಾತನಾಡಿ, ಸಮಾಜದ ಏಳಿಗೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಘಟಕದ ಪದಾಧಿಕಾರಿಗಳು ಶ್ರಮಿಸುತ್ತಾರೆ. ಸಮಾಜ ಬಾಂಧವರ ಸಮಸ್ಯೆಗೆ ಸ್ಪಂಧಿಸಲಾಗುವುದು ಎಂದರು.

ನಗರ ಘಟಕದ ಅಧ್ಯಕ್ಷ ದೇವಿಂದ್ರಪ್ಪ ರುಕ್ಮಾಪುರ ಮಾತನಾಡಿದರು. ತಾಲ್ಲೂಕು ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ ಯಕ್ತಾಪುರ ಸ್ವಾಗತಿಸಿದರು. ನಗರ ಘಟಕದ ಕಾರ್ಯದರ್ಶಿ ನಿಂಗಣ್ಣ ಸಿದ್ದಾಪುರ ನಿರೂಪಿಸಿದರು. ಆದೇಶ ಹೆಮನೂರ ವಂದಿಸಿದರು. ದೇವಿಂದ್ರ ಹಡಪದ, ಹಣಮಂತ ಸುರಪುರ, ಸಣ್ಣಶರಣಪ್ಪ ಅಮ್ಮಾಪುರ, ಮಲ್ಲಣ್ಣ ಚಿಕ್ಕನಳ್ಳಿ, ತಿರುಪತಿ ಚಿಕ್ಕನಳ್ಳಿ, ಹಂಪಣ್ಣ ಕೆಂಭಾವಿ, ನೀಲಕಂಠ ಕಕ್ಕೇರಾ, ಮಲ್ಲಿಕಾರ್ಜುನ ಜಾಲಿಬೆಂಚಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here