ಸುರಪುರ: ರೈತರು ಬೆಳದ ಭತ್ತ,ತೊಗರಿ,ಹತ್ತಿ ಬೆಳೆಗಳು ನಿಸರ್ಗದ ಕೋಪಕ್ಕೆ ತುತ್ತಾಗಿ ಹಾಕಿದ ಬೆಳೆ ಕೈಗೆ ಬರುವಷ್ಟರಲ್ಲಿ ರೈತರು ಹೈರಾಣಿಹೊಗಿದ್ದಾರೆ ಇತಂಹ ಪರಿಸ್ಥಿತಿಯಲ್ಲಿ ಭತ್ತ ಬೆಳದು ಅಷ್ಟೊ ಹಣವನ್ನು ಮಾಡಿಕೊಂಡು ಸಾಲತೀರಿಸಿಕೊಳ್ಳೋನ ಎನ್ನುವ ರೈತನ ಆಸೆಗೆ ಈಗ ಭತ್ತರಾಶಿ ಮಾಡುವ ಯಂತ್ರೋಪಕರಣದ ದಲ್ಲಾಳಿಗಳು ಹಾಗೂ ಮಾಲಿಕರು ಭತ್ತದ ಯಂತ್ರದ ಬಾಡಿಗೆ ನೆಪದಲ್ಲಿ ಸುಲೀಗೆ ಮಾಡಲು ಮುಂದಾಗಿದ್ದಾರೆ ಸಂಬಂಧಿಸಿದ ಅಧಿಕಾರಿಗಳು ಸುಲೀಗೆ ಮಾಡುವುದನ್ನು ನಿಲ್ಲಿಸಬೇಕು ಎಂದು ಕರ್ನಾಟಕ ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕರ ಒತ್ತಾಯಿಸಿದ್ದಾರೆ.
ಅವರು ಪತ್ರಿಕೆ ಹೇಳಿಕೆ ನೀಡಿ ಮಾತನಾಡಿದ ಅವರು ಭತ್ತದ ಬೇಳೆ ಕೈಗೆ ಬಂದಿದೆ ಇನ್ನು ನಮ್ಮ ಕಷ್ಟ ಸ್ವಲ್ಪ ಮಟ್ಟಿಗೆ ತೀರಿತು ಎನ್ನುವಷ್ಟರಲ್ಲಿ ಭತ್ತ ರಾಶಿ ಮಾಡುವ ಯಂತ್ರೋಪಕರಣದ ಮಾಲೀಕರು ಪ್ರತಿ ಗಂಟೆಗೆ ಎರಡು ಸಾವಿರದ ಎಂಟನೂರು ತೆಗೆದುಕೊಂಡು ಯಂತ್ರದ ಬಾಡಿಗೆ ಕೇಳುತ್ತಿರುವುದ ಯಾವ ನ್ಯಾಯ ಇದು ಸರಿಯಾದುದಲ್ಲ ತಕ್ಷಣವೆ ಪೊಲೀಸ್ ಇಲಾಖೆಂii ಅಧಿಕಾರಿಗಳು ಅಥವಾ ತಹಶಿಲ್ದಾರರು, ಕೃಷಿ ಅಧಿಕಾರಿಗಳಾಗಲಿ ಯಂತ್ರದ ಮಾಲೀಕರನ್ನು ಕರೆಸಿ ತಿಳಿಹೇಳಿ ರೈತರಿಗೆ ಅನುವು ಮಾಡಿಕೊಡಬೇಕೆಂದು ಇಲ್ಲವಾದರೆ ಬರುವ ಡಿ.೨ ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.