ಸರಕಾರಿ ಶಿಕ್ಷಕರ ವೇತನ ವಿಳಂಬ: ಶೀಘ್ರ ಬಿಡುಗಡೆಗೆ ಕ್ಯಾಂಪಸ್ ಫ್ರಂಟ್ ಆಗ್ರಹ

0
41

ಬೆಂಗಳೂರು: ಶಾಲೆಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಆದರೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಶಾಲಾ ಶಿಕ್ಷಕರಿಗೆ ಸರಕಾರ ಹಲವು ತಿಂಗಳ ವೇತನ ಬಾಕಿಯಿರಿಸಿರುವುದು ಶಿಕ್ಷಕರನ್ನು ತೊಂದರೆಗೀಡುಮಾಡುತ್ತಿದ್ದು, ಇದು ಸರಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತದೆ.

ಇಲಾಖೆಯಿಂದ ನೇರ ನೇಮಕಾತಿಗೊಂಡ ಶಿಕ್ಷಕರನ್ನು ಈ ರೀತಿ ನಿರ್ಲಕ್ಷಿಸುವ ಕ್ರಮ ಖಂಡನೀಯ ಎಂದು ಕ್ಯಾಂಪಸ್ ಫ್ರಂಟ್ ಅಭಿಪ್ರಾಯ ಪಟ್ಟಿದೆ. ಪ್ರತೀ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಾರೆ. ಸರಕಾರ ಅವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಪ್ರತೀ ಭಾರಿ ವಿಫಲವಾಗುತ್ತಿದೆ.

Contact Your\'s Advertisement; 9902492681

ಸರಕಾರ ವೇತನ ನಿಧಿ ಬಿಡುಗಡೆಗೆ ಅನುಮತಿ ನೀಡುವಲ್ಲಿ ಮೀನಾಮೇಷ ಎಣಿಸುತ್ತಿರವುದೇ ವೇತನ ವಿಳಂಬಕ್ಕೆ ಮುಖ್ಯ ಕಾರಣ. ರಾಜ್ಯದಲ್ಲಿ ಪ್ರತೀ ವರ್ಷ ರಾಜ್ಯ ಸರಕಾರವು ಶೀಘ್ರ ಶಿಕ್ಷಕರಿಗೆ ನೀಡಬೇಕಾದ ವೇತನವನ್ನು ಬಿಡುಗಡೆ ಮಾಡಬೇಕು ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರ ಹಾಗೂ ಶಿಕ್ಷಣ ವಿಭಾಗದ ಉಸ್ತುವಾರಿ ಅಲ್ತಾಫ್ ಹೊಸಪೇಟೆ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here