ಅತ್ಯಾಚಾರ ಪ್ರಕರಣ: ಇಡೀ ಮಾನವ ಕುಲವೇ ತಲೆ ತಗ್ಗಿಸುವಂಹದ್ದು: ಕಠಿಣ ಶಿಕ್ಷೆಗೆ ಎ.ಐ.ಎಮ್.ಎಸ್.ಎಸ್ ಆಗ್ರಹ

0
88

ಕಲಬುರಗಿ: ದೇಶವನ್ನೇ ನಡುಗಿಸಿದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಟನೆಯು ಈ ಕೂಡಲೇ ಆರೋಪಿಗಳನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಜಿಲ್ಲಾಧ್ಯಕ್ಷರಾದ ಗುಂಡಮ್ಮ ಮಡಿವಾಳ, ಮೂರು ದಿನದ ಹಿಂದಷ್ಟೆ ಹೈದಾಬಾದ್ ನಗರದ ಹೊರವಲಯದಲ್ಲಿ ಪಶುವೈದ್ಯಯ ಡಾ. ಪ್ರಿಯಾಂಕ ಅವರ ಮೇಲೆ ನಾಲ್ಕು ಜನ ಕ್ರುರ ಮನಸ್ಸುಳ್ಳ ಪತಾಕಿಗಳು ಘೋರವಾಗಿ ಅತ್ತಾಚಾರ ವೇಸಗಿ ಚಿತ್ರಹಿಂಸೆಕೊಟ್ಟು ಕೊಲೆಮಾಡಿ ದೇಹವನ್ನು ಸುಟುಹಾಕೀರುವ ಪ್ರಕರಣದ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಾಗಿದ್ದು, ಅಪರಾಧಿಗಳ ಮೇಲೆ ಕಠಿಣವಾಗಿ ಶಿಕ್ಷೆಗೆ ಗುರಿಪಡಿಸಿ ದೇಶದಲ್ಲಿ ಆಗುತ್ತಿರು ಅತ್ಯಾಚಾರ ಪ್ರಕರಣಗಳನ್ನು ನಿಲ್ಲುವಂತ ಸಂದೇಶ ರವಾನಿಸಬೇಕ್ಕಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ನಾಲ್ಕು ಆರೋಪಿ ಹಾಗೂ ತಪ್ಪಿಸ್ಥರಿಗೆ ಅತಿ ಉಗ್ರ ಶಿಕ್ಷೆಸಬೇಕಾಗಿ ಎ.ಐ.ಎಮ್.ಎಸ್.ಎಸ್. ಸಂಘಟನೆ ರಾಜ್ಯದ್ಯಾಂತ ಜನ ಸಾಮಾನ್ಯರು, ವಿದ್ಯಾರ್ಥಿ, ಯುವ ಜನರೊಂದಿಗೆ ಸೇರಿ ಹೋರಾಟಗಳು, ಸಭೆಗಳು ನಡೆಸುವ ಮೂಲಕ ಸರಕಾರಕ್ಕೆ ಒತ್ತಾಯಿಸುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಭೀಮಾಶಂಕರ ಪಾಣೆಗಾಂವು ಮಾತನಾಡಿ, ದೇಶದಲ್ಲಿ ಇಂತಹ ಹೀನ ಕೃತ ವೇಸಗಿದ ಕ್ರೂರಿಗಳಿಗೆ ಕ್ರೋರ ಶಿಕ್ಷಿಸಿಬೇಕೆ ಇಂತಹ ಘಟನೆಗಳಿಗೆ ಎ.ಐ.ಎಮ್.ಎಸ್.ಎಸ್. ಸಂಘಟನೆ ಉಗ್ರವಾಗಿ ಖಂಡಿಸುತ್ತದೆ. ಇಲ್ಲದೇ ಈ ಪ್ರಕರಣದಲ್ಲಿ ಕೆಲವೂ ಕೋಮುವಾದಿಗಳು ಜಾತಿ ಹೆಸರು ನೀಡುವ ಮೂಲಕ ರಾಜಕೀಯ ನಡೆಸುತ್ತಿರುವುದು ದುಃಖ ಹಾಗೂ ನಾಚಿಕೆಗೆಡು ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮೂನ್ನ ನಗರದ ಸರದಾರ ವಲ್ಲಾಭಭಾಯಿ ಪಟೇಲ ವೃತಿದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಬೃಹತ ಪ್ರತಿಭಟನಾ ಮೇರವಣೆಗೆ ನಡೆಸುವ ಮೂಲಕ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ನಿಂಗಣ್ಣ ಜಂಬಗಿ, ಹಣಮಂತ ಎಸ್, ಈರಣ್ಣ ಇಸಾಬ, ಜಗನ್ನಾಥ, ಸ್ನೇಹ, ಮಂಜುಳಾ ಶಿಲ್ಪಾ, ರೇವಣಸಿದ್ದ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿಸ ತಮ್ಮ ಬೆಂಬಲ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here