ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಬೆಳಸಲು ತಾಪಂ ಅಧ್ಯಕ್ಷೆ ಶಾರದಾ ಬೇವಿನಾಳ ಸಲಹೆ

0
94

ಸುರಪುರ: ಮನುಷ್ಯನ ದಿನ ನಿತ್ಯದ ಬದುಕಿನಲ್ಲಿ ವಿಜ್ಞಾನ ಒಂದು ಅವಿಭಾಜ್ಯ ಅಂಗವಾಗಿದ್ದು ಅದು ಮಕ್ಕಳಿಗೆ ಸದುಪಯೋಗವಾಗಬೇಕಾಗಿದೆ. ಮಕ್ಕಳ ವಿಜ್ಞಾನದ ಬಗ್ಗೆ ಆಸಕ್ತಿ ಹುಟ್ಟುವ ಅನೇಕ ಆವಿಷ್ಕಾರಗಳನ್ನು ಮಕ್ಕಳಿಗೆ ತಿಳಿಸುವಮುಖಾಂತರ ಅವರಲ್ಲಿ ಆಸಕ್ತಿ ಹುಟ್ಟಿಸಬೇಕು ಎಂದು ತಾಪಂ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ ಹೇಳಿದರು.

ನಗರದ ತಿಮ್ಮಾಪುರ ಬಡಾವಣೆಯ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ಜಿ ಪೌಂಡೇಶನ್ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಜ್ಞಾನದಿನದ ಅಂಗವಾಗಿ ನಡೆದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ವಿಜ್ಞಾ ಇಲ್ಲದೆ ಜಗತ್ತಿನಲ್ಲಿ ಏನೂ ನಡೆಯುವುದಿಲ್ಲ ಸಮಯಕ್ಕೆ ಮತ್ತು ಮನ್ನಸ್ಸಿಗೆ ಯುವ ಜನಾಂಗ ಹಾಗೂ ವಿದ್ಯಾರ್ಥಿಗಳು ಬೆಲೆ ಕೊಟ್ಟು ಕಠೀಣ ಪರಿಶ್ರಮದಿಂದ ಅಭ್ಯಾಸದಲ್ಲಿ ತೊಡಗಿ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಕ್ಷೇತ್ರಸಮನ್ವಯಾಧಿಕಾರಿ ಅಮರೇಶ ಕುಂಬಾರ ಮಾತನಾಡಿ ಇತಂಹ ಚಟುವಟಿಕೆಗಳು ನಡೆಸುವು ಮೂಲಕ ಮಕ್ಕಳನ್ನು ವಿಜ್ಞಾನ ಹಾಗೂ ವೈಜ್ಞಾನಿಕ ಮನೋಭಾವದ ಕಡೆಗೆ ಕರೆದೊಯ್ಯುವುದೇ ಈ ಹಬ್ಬದ ಸಂದೇಶವಾಗಿದೆ ಮಕ್ಕಳ ಮನಸ್ಸು ಅತಿ ಸೂಕ್ಷ್ಮವಾಗಿರುತ್ತದೆ ಆ ಮಕ್ಕಳ ಪಾಲಕರು, ಶಿಕ್ಷಕರು ಸರಿಯಾದ ಸನ್ಮಾರ್ಗದಲ್ಲಿ ಕರೆದುಕೊಂಡು ಹೋದರೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.
ಇದಕ್ಕು ಮೊದಲು ಮಕ್ಕಳು ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಡೊಳ್ಳುಕುಣಿತ ಮತ್ತು ಲೇಜೀಮ್ ಕುಣಿತದ ಮೂಲಕ ವಿಜ್ಞಾನದ ಕುರಿತು ಜಾಗೃತಿ ಜಾಥ ನಡೆಸಿ ಗಮನ ಸೇಳೆದರು.

ಮುಖಂಡರಾದ ಭೀಮಣ್ಣ ಬೇವಿನಾಳ, ಶಾಲೆಯ ಪ್ರಾಂಶುಪಾಲ ಬಸವರಾಜ ಕೋಡೆಕಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಳ್ಳೆಪ್ಪ ಕಾಜಾಂಜಿ, ತಾಲೂಕು ಘಟಕದ ಅಧ್ಯಕ್ಷ ಸೋಮರೆಡ್ಡಿ ಮಂಗಿಹಾಳ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಂಜೀವ ದರಬಾರಿ, ಬಿಆರ್‌ಪಿ ಖಾದರ ಪಟೇಲ್, ಬಿಸಿಊಟಅಧಿಕಾರಿ ಮೌನೇಶ ಕಂಬಾರ, ಶರಣಬಸವ ಗಚ್ಚಿನಮನಿ, ಆರ್.ಕೆ.ಕೋಡಿಹಾಳ, ಅಜೀಂ ಪ್ರೇiಜೀ ಪೌಂಡೇಶನ ಅನ್ವರ ಜಮಾದರ, ಶಿಕ್ಷಕರಾದ ಕಮಲಾಬಾಯಿ, ಅಬ್ದುಲ್ ಜಬ್ಬಾರ, ರಾಮಪ್ಪ ಗುಂಜಾಳ, ಶಿವುಕುಮಾರ ಕಮತಿಗಿ, ಮೌನೇಶ, ಶಿವಕುಮಾರ ಎಂ, ಸೇರಿದಂತೆ ವಿದ್ಯಾರ್ಥಿಗಳು ಹಾಗು ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here