ಅಂಗವಿಕಲತೆ ಶಾಪವಲ್ಲ ಸಾಧನೆಗೆ ಮೆಟ್ಟಿಲಾಗಿಸಿಕೊಳ್ಳಿ: ಅಮರೇಶ ಕುಂಬಾರ

0
73

ಸುರಪುರ: ಅಂಗವಿಕಲತೆ ಎಂಬುದು ಶಾಪವಲ್ಲ ಯಾವುದೆ ಅಂಗವಿಕಲರು ಕೊರಗನ್ನಿಟ್ಟುಕೊಳ್ಳದೆ ಅದೇ ಅಂಗವಿಕಲತೆಯನ್ನು ಸಾಧನೆಗೆ ಮೆಟ್ಟಿಲಾಗಿಸಿಕೊಳ್ಳುವಂತೆ ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ ಕುಂಬಾರ ಮಾತನಾಡಿದರು.

ಕ್ಷೇತ್ರ ಶೀಕ್ಷಣಾಧಿಕಾರಿಗಳ ಕಚೇರಿ ಹಾಗು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ನಗರದ ತಿಮ್ಮಾಪುರದಲ್ಲಿಯ ಸರಕಾರಿ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಅಂಗವಿಕಲತೆ ಅನ್ನುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ.ಇಂದು ಅನೇಕ ಜನ ಅಂಗವಿಕಲರು ವಿಶ್ವ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.ಶಿಖರಗಳನ್ನು ಹತ್ತಿ ಎಲ್ಲರಿಗೂ ಮಾದರಿಯಾಗಿದೆ.ಅಂಗವಿಕಲರಾದವರು ಕ್ರೀಡೆ,ಸಾಂಸ್ಕೃತಿಕ,ಸಾಮಾಜಿಕ ಹೀಗೆ ಅನೇಕ ರಂಗಗಳಲ್ಲಿ ವಿಶಿಷ್ಟ ಕೊಡುಗೆಗಳ ಮೂಲಕ ಸಾಧನೆ ಮಾಡಿದ್ದಾರೆ.ಆದ್ದರಿಂದ ಯಾವುದೆ ಅಂಗವಿಲಕರು ತಾವು ಅಂಗವಿಕಲರೆಂಬ ಕೊರಗನ್ನು ಬಿಟ್ಟು ಸಾಧನೆಗೆ ನಿಂತಲ್ಲಿ ಅದು ತಮ್ಮ ಕಾಲಡಿಯಲ್ಲಿರಲಿದೆ ಎಂದು ಸ್ಪೂರ್ತಿ ತುಂಬಿದರು.

Contact Your\'s Advertisement; 9902492681

ತಾಲೂಕು ಪಂಚಾಯತಿ ಅಧ್ಯಕ್ಷೆ ಶಾರದ ಬಿ.ಬೇವಿನಾಳ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಅಂಗವಿಕಲ ಮಕ್ಕಳಿಗಾಗಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಅಂಗವಿಕರಾಗಿದ್ದು ಸಾಧನೆ ಮಾಡಿದ ವಿಶೇಷ ಚೇತನರಾದ ಅಶೋಕ ಸಿದ್ದಯ್ಯ ಸ್ವಾಮಿ ಕೂಡ್ಲಿಗೆಪ್ಪ ಮಾಳಪ್ಪ ಸುಮಿತ್ರಾ ಅಯ್ಯಮ್ಮ ಹಾಗು ಅಚ್ಚಪ್ಪ ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಪ್ಪ ದರಬಾರಿ,ಸಮನ್ವಯ ಶಿಕ್ಷಣದ ಸಂಪನ್ಮೂಲ ವ್ಯಕ್ತಿ ಶಂಕರ ಬಡಗಾ,ಮಹಾದೇವಪ್ಪ ಗುತ್ತೇದಾರ,ವೀರಣ್ಣಗೌಡ ಓಂ ಪ್ರಕಾಶ,ಬಿಆರ್‌ಪಿ ಖಾದರ ಪಟೇಲ್ ಸಿಆರ್‌ಪಿ ಶಿವಾನಂದ್ ಅರ್ಜುಣಗಿ,ಶಿಕ್ಷಕರಾದ ಮಲ್ಲಣ್ಣ ಸಜ್ಜನ್,ರಾಜಶೇಖರ ಕಲ್ಲೂರಮಠ,ಮುಖ್ಯಗುರು ಮುದ್ದಪ್ಪ ಅಪ್ಪಾಗೋಳ್,ವೀಣಾ ಶಾಂತಾ ಅಜೀಂ ಪ್ರೇಮಜಿ ಪೌಂಡೇಶನ್‌ನ ಅನ್ವರ ಜಮಾದಾರ,ವಿನೋದ್ ಕುಮಾರ ಇದ್ದರು.ಸಿದ್ದನಗೌಡ ಸ್ವಾಗತಿಸಿ ನಿರೂಪಿಸಿದರು,ಅಲ್ಲಿ ಪಟೇಲ್ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here