ಪ್ರೀತಿಯಿಂದ ಮನುಷ್ಯನ ಮನಸ್ಸನ್ನು ಒಂದುಗೂಡಿಸಿ ಬಲಿಷ್ಠ ರಾಷ್ಟ್ರ ಕಟ್ಟುವ ಕಾರ್ಯವಾಗಬೇಕು: ಹಿರೇಮಠ

0
28

ಕಲಬುರಗಿ: ಪ್ರೀತಿಯಿಂದ ಮನುಷ್ಯನ ಮನಸ್ಸನ್ನು ಒಂದುಗೂಡಿಸಿ ಬಲಿಷ್ಠ ರಾಷ್ಟ್ರ ಕಟ್ಟುವ ಕಾರ್ಯ ನಮ್ಮದಾಗಬೇಕು ಎಂದು ಮಹಾಗಾಂವ ಮಹಾಂತೇಶ್ವರ ಪ್ರೌಢಶಾಲೆಯ ಶಿಕ್ಷಕರಾದ ಗುರುರಾಜ ಹಿರೇಮಠ ಹೇಳಿದರು.

ನಗರದ ಭವಾನಿನಗರದಲ್ಲಿರುವ ಬಬಲಾದ ಶ್ರೀಮಠದಲ್ಲಿ ನಡೆದ ಶಿವಾನುಭವಗೋಷ್ಠಿಯ ೭೮ನೇ ಮಾಲಿಕೆಯಲ್ಲಿ ಉಪನ್ಯಾಸ ನೀಡುತ್ತಾಭಾರತ ದೇಶ ಉತ್ತಮ ಸಂಸ್ಕಾರ ಸಂಸ್ಕೃತಿಯಿಂದ ಪ್ರಪಂಚಕ್ಕೆ ಪಾಠ ಹೇಳುವ ಸಂದರ್ಭ ಒಂದಿತ್ತು. ಸ್ವಾಮಿ ವಿವೇಕಾನಂದರು ಹಲವಾರು ಸತ್ಪುರಷರು ಪ್ರೀತಿಯಿಂದ ಮಾತನಾಡಿ ನಮ್ಮ ರಾಷ್ಟ್ರದ ಗೌರವ ಹೆಚ್ಚಿಸಿದ್ದಾರೆ. ಆದರೆ ಈಗ ದೇಶಿಯ ಸಂಸ್ಕೃತಿ ಮರೆತು ಪಾಶ್ಚಾತ್ಯ ಸಂಸ್ಕೃತಿ ಮೈಗೂಡಿಸಿಕೊಂಡು ತಿರುಗುತ್ತಿರುವದನ್ನು ನೋಡಿದರೆ ಪರದೇಶದವರನ್ನು ಕೈ ಮಾಡಿ ಕರೆಯುತ್ತಿದ್ದೆವೆ ಎಂದು ಭಾಸವಾಗುತ್ತಿದೆ ಎಂದು ವಿಷಾದಿಸಿದರು. ಇಂತಹ ಅಧ್ಯಾತ್ಮಿಕ ಚಿಂತನೆಯ ಕಾರ್ಯಕ್ರಮಗಳಿಂದ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ವೀರಶೈವ ಮಹಾಸಭಾದ ಸದಸ್ಯರಾಗಿ ಆಯ್ಕೆಯಾದ ನ್ಯಾಯವಾದಿ ವಿನೋದಕುಮಾರ ಜನವರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ನಿರೂಸಿದರು, ಶಿಕ್ಷಕರಾದ ದೇವಯ್ಯ ಗುತ್ತೇದಾರಸ್ವಾಗತಿಸಿದರು, ಧನರಾಜ ಸಣಮನಿವಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿಗಳಾದ ಬಸಯ್ಯ ಶಾಸ್ತ್ರೀ, ಸಂಗಮೇಶ ಹೂಗಾರ, ಶಾಂತವೀರಯ್ಯ ಮಠಪತಿ, ಗೌಡಪ್ಪಗೌಡ ಪಾಟೀಲ, ಶಿವಕುಮಾರ ಗಣಜಲಖೇಡ, ಮಹಾಂತೇಶ ಪಾಟೀಲ, ಶರಣಬಸಪ್ಪ ಖ್ಯಾಮಾ, ಅನಿಲ ಲಗಶೆಟ್ಟಿ, ಸುರೇಶ ಮಡಿವಾಳ, ಶರಣಬಸಪ್ಪ ಯಳವಂತಗಿ, ಜಗನ್ನಾಥ ಸಜ್ಜನಸೇರಿದಂತೆ ಶ್ರೀ ಮಠದ ಅನೇಕ ಭಕ್ತರೂ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here