ಕಲಬುರಗಿ: ರಾಜ್ಯದ ಎರಡು ಕ್ಷೇತ್ರದ ಉಪಚುನಾವಣೆ ನಾಮ ಪತ್ರ ಸಲ್ಲಿಸುವ ಇಂದು ಕೊನೆದಿನವಾಗಿದ್ದು, ಚಿಂಚೋಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ್ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಂಕಡ ಕೈಲಾಸನಾಥ ಪಾಟೀಲ್, ವೈಜುನಾಥ್ ಪಾಟೀಲ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಮ್ಮುಖದಲ್ಲಿ ಚಿಂಚೋಳಿ ತಾಲೂಕು ಕಚೇರಿಗೆ ತೆರೆಳಿ ನಾಮ ಪತ್ರಸಿಲ್ಲಿಸಿದ್ದರು.
ಇದಕ್ಕೂ ಮುನ್ನ ಚಿಂಚೋಳಿ ಕ್ಷೇತ್ರ ರಟಕಲ್ ರೇವಗ್ಗಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆಸಲ್ಲಿಸಿ ಆಶೀರ್ವಾದ ಪಡೆದ ನಂತರ ಕಚೇರಿಗೆ ಆಗಮಿಸಿದ್ದರು.