ಸಾಲೇಗಾಂವ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

0
310

ಕಲಬುರಗಿ/ಆಳಂದ: ತಾಲೂಕಿನ ಸಾಲೇಗಾಂವ ಕ್ರಾಸನಿಂದ ಸಾಲೇಗಾಂವ ಗ್ರಾಮದವರೆಗಿನ ಸುಮಾರ ೧.೪೬ ಕೋಟಿ ವೆಚ್ಚದ ೨.೧೮ ಕೀಮಿ ಡಾಂಬರ್ ರಸ್ತೆ ಕಾಮಗಾರಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಶನಿವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಿಸುವುದರಿಂದ ಉಳಿದ ಮೂಲಭೂತ ವ್ಯವಸ್ಥೆಗಳು ತನ್ನಿಂದ ತಾನೇ ಸುಧಾರಿಸುತ್ತವೆ ಎಂದು ಹೇಳಿದರು. ಉತ್ತಮ ಗುಣಮಟ್ಟದ ಕಾಮಗಾರಿಗಳು ಗುತ್ತಿಗೆದಾರರನ್ನು, ಜನಪ್ರತಿನಿಧಿಗಳನ್ನು ಶಾಶ್ವತ ಹೆಸರು ತಂದು ಕೊಡುತ್ತವೆ ಈ ನಿಟ್ಟಿನಲ್ಲಿ ಗುಣಮಟ್ಟದಲ್ಲಿ ರಾಜಿಯಾಗದೇ ಉತ್ತಮ ಮಟ್ಟದ ರಸ್ತೆ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ತಿಳಿಸಿದರು.

Contact Your\'s Advertisement; 9902492681

ಸಾಲೇಗಾಂವ ಗ್ರಾಮದಲ್ಲಿ ೩೦ ಲಕ್ಷದ ರೂ ವೆಚ್ಚದ ಸಿಸಿ ರಸ್ತೆ, ಶಾಲಾ ಕೋಣೆಗಳ ನಿರ್ಮಾಣಕ್ಕಾಗಿ ೨೫ ಲಕ್ಷ ರೂ. ಗಳ ಕಾಮಗಾರಿ ಪ್ರಗತಿಯಲ್ಲಿದೆ. ಸಾಲೇಗಾಂವ ಗ್ರಾಮಕ್ಕೆ ಈ ಅವಧಿಯಲ್ಲಿ ಒಟ್ಟು ೨.೫೦ ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. ಸಾಲೇಗಾಂವ ಮತ್ತು ತೀರ್ಥ ಗ್ರಾಮಸ್ಥರು ಮಾಡಿಕೊಂಡ ಮನವಿಗೆ ತೀರ್ಥದಿಂದ ಸಾಲೇಗಾಂವ ಗ್ರಾಮದವರೆಗಿನ ನಡುವಿನ ರಸ್ತೆಯನ್ನು ನಿರ್ಮಾಣ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮುಖಂಡರಾದ ಹಣಮಂತರಾವ ಮಲಾಜಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಶ್ರೀಮಂತ ನಾಮಣೆ, ಮಹಿಬೂಬ ಶೇಖ್, ಇಲಾಖೆಯ ಅಧಿಕಾರಿಗಳಾದ ಎಇಇ ಈರಣ್ಣ, ಜೆಇ ಕರಬಸಪ್ಪ, ಜೆಇ ಚಂದ್ರಕಾಂತ, ಶಿವು ಸರಾಟೆ, ಪಿಂಟು ಪಾಟೀಲ, ರಘುನಾಥ ಎಟೆ, ಕಿಶನರಾವ ಪಾಟೀಲ, ಶಿವುಪುತ್ರಪ್ಪ ಗಾಡೆ, ಬಸವರಾಜ ಕೋರೆ, ಬಂಡೆಪ್ಪ ಕೋಟೆ, ಶರಣಬಸಪ್ಪ ಉಜಳಂಬೆ, ಮನೋಹರ ಕೋರೆ, ಅಶೋಕ ಕೊರೆ, ಶೇಖರ ವಾಡೆ, ಧೂಳಪ್ಪ ಬೇಡರ, ಶರಣಬಸಪ್ಪ ಕುಂಬಾರ, ಶಂಕರ ಬೇಡರ ಸೇರಿದಂತೆ ಚಿತಲಿ, ಸಾಲೇಗಾಂವ, ತೀರ್ಥ, ತೇಲಾಕುಣಿ ಗ್ರಾಮದ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಕರಬಸಪ್ಪ ಬೆಳ್ಳೆ ಸ್ಮಾರಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿ, ಸ್ವಾಗತಿಸಿದರು. ಶಿಕ್ಷಕ ಶರಣಬಸಪ್ಪ ವಡಗಾಂವ ನಿರೂಪಿಸಿ, ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here