ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ: ಆಯೋಗಕ್ಕೆ ಮನವಿ

0
157

ಕಲಬುರಗಿ: ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಜನಗಳಿಗೆ ಶೇ. ೩೨ ರಿಂದ ೩೫% ರಷ್ಟು ಮೀಸಲಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ. ೮% ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ರಿಪಬ್ಲಿಕನ್ ಯೂಥ್ ಫೆಡರೇಷನ್ ವತಿಯಿಂದ ನ್ಯಾ. ನಾಗಮೋಹನ್ ದಾಸ್ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಎಸ್ ಎಂ ಪಂಡಿತ ರಂಗಮಂದಿರದಲ್ಲಿ ನಡೆದ ವಿಭಾಗದ ಮಟ್ಟದ ಸಮಾಲೋಚನಾ ಸಭೆಯಲ್ಲಿ ಯೂಥ್ ಫೆಡರೇಷನ್ ಅಧ್ಯಕ್ಷ ಹಣಮಂತ ಇಟಗಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ ಅವರು ಡಾ. ಭೀಮರಾವ ಅಂಬೇಡ್ಕರ್ ಅವರ ಅವಿರತ ಪರಿಶ್ರಮ ಫಲವಾಗಿ ಸಾಂವಿಧಾನಿಕವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಜನರಿಗೆ ಶೇ. ೧೫% ಮತ್ತು ಪರಿಶಿಷ್ಟ ಪಂಗಡದ ಜನಗಳಿಗೆ ಶೇ ೩% ಮೀಸಲಾತಿಯನ್ನು ನೀಡಲಾಗುತ್ತಿದೆ. ಆದರೆ ಪ್ರತಿ ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆ ಹೆಚ್ಚಾಗುತ್ತಾ ಬಂದಿದ್ದರೂ ಇದುವರೆಗೂ ಮೀಸಲಾತಿ ಹೆಚ್ಚಳ ಯಾವ ಸರ್ಕಾರವೂ ಆಯೋಗವನ್ನು ರಚಿಸಿರುವುದಿಲ್ಲ. ಆದರೆ ಇದೀಗ ಸರ್ಕಾರ ತಮ್ಮ ನೇತ್ರತ್ವದಲ್ಲಿ ಆಯೋಗವನ್ನು ರಚಿಸಿದ್ದು, ಬಹಳ ಸಂತೋಷದ ವಿಷಯವಾಗಿದೆ. ಆದರೆ ಸದ್ಯ ಇರುವ ಮೀಸಲಾತಿ ಅಭಿವೃದ್ದಿಗೆ ಸಹಕಾರಿಯಾಗುತ್ತಿಲ್ಲ. ಅವರ ಸರ್ವತೋಮುಖ ಅಭಿವೃದ್ಧಿಗೆ ಶೇ. ೩೨ ರಿಂದ ೩೫% ರವರೆಗೆ ಮತ್ತು ಪರಿಶಿಷ್ಟ ಪಂಗಡ ಜನರ ಶೇ. ೮% ಮೀಸಲಾತಿ ಹೆಚ್ಚಿಸಿ ಈ ಜನರಿಗೆ ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರಬೇಕೆಂದು ತಾವು ನೀಡಿರುವ ಮನವಿಯಲ್ಲಿ ಕೇಳಿಕೊಂಡಿದ್ದಾರೆ.

Contact Your\'s Advertisement; 9902492681

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನರ ಒಟ್ಟಾರೆ ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕ ಪ್ರಗತಿ ಇದುವರೆಗೂ ಅದೋಗತಿಯಲ್ಲಿದೆ. ಕಾರಣ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ೧೦೨ ಜಾತಿಗಳು ಪಟ್ಟಿಯಲ್ಲಿದ್ದು, ಈ ಜಾತಿಗಳ ಜನರು ಶೇ ೧೫% ಮೀಸಲಾತಿ ಲಭಿಸುತ್ತಿರುವುದರಿಂದ ಇವರ ಜೀವನಮಟ್ಟ ಇಲ್ಲಿಯವರೆಗೂ ಸುಧಾರಣೆ ಕಂಡಿಲ್ಲ ಎಂದು ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಚಾಲಕರಾದ ಹನುಮಂತ ಇಟಗಿ, ಮುಖಂಡರಾದ ಸಂತೋಷ ಮೇಲ್ಮನಿ, ನಾಗೇಂದ್ರ ಕೆ ಜವಳಿ, ದಿನೇಶ್ ದೊಡ್ಡಮನಿ, ರಾಣು ಮುದ್ದನಕರ್, ಸತೀಶ್ ಮಾಲೆ, ಸಿದ್ಧಾರ್ಥ ಚಿಂಚನಸೂರ, ಶಿವಕುಮಾರ್ ಜಾಲವಾದ, ರತನ ಕನ್ನಡಗಿ, ರವಿ ಡೋಣಿ, ಅಜಯ ಕೋರಳ್ಳಿ, ನಾಗಭೂಷಣ ಹರಳಕಟ್ಟಿ, ಶ್ರವಣಕುಮಾರ ಖಜನ್ದಾರ್ ವಿನೋದ ಕಾಂಬಳೆ, ಅಂಬರೀಶ್ ಅಂಬಲಗಿ, ಶೀವಾ ನರೋಣ, ಮಂಜುನಾಥ ಹಾದಿಮನಿ, ಶಂಭುಲಿಂಗ ಭರಣಿ, ಬಸವರಾಜ ಬಂಗರಗಾ,ದಯಾನಂದ ಕೋಹಿನೂರಕರ್ ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here