ದೇಶಕ್ಕಾಗಿ ಅಂಬೇಡ್ಕರ್‌ರವರು ತಮ್ಮ ಜೀವನವೇ ಮುಡುಪಾಗಿಟ್ಟಿದ್ದರು: ಡಾ. ಗಿರಿಮಲ್ಲ

0
58

ಕಲಬುರಗಿ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಈ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಉಪನ್ಯಾಸಕ ಡಾ. ಕೆ ಗಿರಿಮಲ್ಲ ಹೇಳಿದರು.

ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ ೬೩ನೇ ಮಹಾಪರಿನಿರ್ವಾಣದ ಅಂಗವಾಗಿ ಶಿವಬಸವ ಸಾಂಸ್ಕೃತಿಕ ಸಂಸ್ಥೆ, ಕಲಬುರಗಿ ವತಿಯಿಂದ ನಗರದ ರಾಜಾಪೂರದ ಪ್ರಿಯದರ್ಶಿನಿ ಇಂದಿರಾಗಾಂಧಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕವಿಗೋಷ್ಥಿ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಅಂಬೇಡ್ಕರ್ ಅವರು ಸಂವಿಧಾನ ರಚನೆಗಾಗಿ ತಮ್ಮ ಜ್ಞಾನ ಬಂಡಾರವನ್ನೇ ಬಳಸಿಕೊಂಡಿದ್ದಾರೆ. ಅಂತಹ ಮಹಾನ್ ನಾಯಕರ ಹಾದಿಯಲ್ಲಿ ನಾವೂ ಕೂಡ ನಡೆದು, ಅವರ ಕನಸ್ಸುಗಳನ್ನು ಸಹಕಾರಗೊಳಿಸುವ ಪ್ರಯತ್ನ ಮಾಡಬೇಕು ಎಂದರು.

Contact Your\'s Advertisement; 9902492681

ಇತ್ತೀಚಿನ ದಿನಗಳಲ್ಲಿ ಡಾ. ಅಂಬೇಡ್ಕರ ಅವರೊಬ್ಬರೇ ಸಂವಿಧಾನ ಬರೆದಿಲ್ಲ ಎಂದು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಾತನಾಡುತ್ತಿವೆ. ಆದರೆ ಸಂವಿಧಾನ ರಚನಾ ಸಮಿತಿಯಲ್ಲಿದ್ದವರು ಒಂದೊಂದು ಕಾರಣಕ್ಕಾಗಿ ಬಿಟ್ಟು ಹೋದರು ಎನ್ನುವ ಸತ್ಯ ಯಾರೂ ಹೇಳುತ್ತಿಲ್ಲ. ಎಲ್ಲರೂ ಬಿಟ್ಟು ಹೋದರೂ ಕೂಡ ಅಂಬೇಡ್ಕರ್ ಅವರೊಬ್ಬರೇ ತಮ್ಮ ಪಾಂಡಿತ್ಯವನ್ನು ಬಳಸಿ ಪವಿತ್ರವಾದ ಸಂವಿಧಾನವನ್ನು ಈ ದೇಶಕ್ಕೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ತೋಟದ್ ಮಾತನಾಡಿ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಈ ದೇಶದ ಕಣ್ಣಾಗಿದ್ದಾರೆ. ಅವರು ರಚನೆ ಮಾಡಿರುವ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಅಂಬೇಡ್ಕರ್ ಅವರನ್ನು ನಾವು ಕಳೆದುಕೊಂಡಿರಬಹುದು, ಆದರೆ ಅವರ ತತ್ವ ಸಿದ್ದಾಂತ, ವಿಚಾರಗಳು ಇನ್ನೂ ಜೀವಂತವಾಗಿವೆ. ಇಡೀ ದೇಶವೇ ಅವರು ಹಾಕಿಕೊಟ್ಟ ಮಾರ್ಗದ ಮೇಲೆ ನಡೆಯುತ್ತಿದ್ದು ನಾವು ಕೂಡ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದು ಯುವಕರಿಗೆ ಸಲಹೆ ನೀಡಿದರು.

ಪೊಟೋಗ್ರಾಫರ್ ಅಶೋಸಿಯಷನ್ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯದರ್ಶಿನಿ ಇಂದಿರಾಗಾಂಧಿ ಕೈಗಾರಿಕಾ ಸಂಸ್ಥೆಯ ಕಾರ್ಯದರ್ಶಿ ಕುಶಾಲ ದರ್ಗಿ ವಹಿಸಿದ್ದರು.

ಸಂಗೀತ ಕಲಾವಿದ ಸಿದ್ದಾರ್ಥ ಡಿ ಚಿಮ್ಮಾಇದ್ಲಾಯಿ, ಅಹಿಂದ ಚಿಂತಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸಾಯಿಬಣ್ಣ ಜಮಾದಾರ, ಕಾಂಗ್ರೆಸ್ ಯುವ ಮುಖಂಡ ಮಂಜುನಾಥ ಹಾಗರಗಿ, ಜಾನಪದ ಕಲಾವಿದ ಶಿವಶಂಕರ ವರ್ಮಾ ವೇದಿಕೆ ಮೇಲಿದ್ದರು. ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಯುವ ಕವಿಗಳಾದ ಹಣಮಂತ ಘಂಟೇಕರ್, ಈಶ್ವರ ಪೂಜಾರಿ, ಕಿರಣ ಕುಮಸಿ, ಸುದೀಪ ಬೆಳಮಗಿ ಕವಿತೆ ವಾಚನ ಮಾಡಿದರು. ಶಿವಬಸವ ಸಾಂಸ್ಥೃತಿಕ ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ ತೋಟ್ನಳ್ಳಿ ಸ್ವಾಗತಿಸಿ, ನಿರೂಪಿಸಿದರು. ಸಿದ್ದಪ್ಪ ಭಾವಿಕಟ್ಟಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here