ಸುರಪುರ: ತಾಲೂಕು ಕೈಗಾರಿಕಾ ವಿಸ್ತೀರ್ಣಾಧಿಕಾರಿಗಳ ಕಚೇರಿ ಸುರಪುರ ತಾಲೂಕಿನಲ್ಲಿ ಇದೇ ಎಂಬುದೆ ಎಷ್ಟೋ ಜನರಿಗೆ ಗೊತ್ತಿಲ್ಲ.ಇದಕ್ಕೆ ಕಾರಣ ಈ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶಿವಲಿಂಗ ಹಸನಾಪುರ ಬೇಸರ ವ್ಯಕ್ತಪಡಿಸಿದರು.
ಗುರುವಾರ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿ,ಈ ಇಲಾಖೆಯ ಅಧಿಕಾರಿಗಳಿಗೆ ಯಾದಗಿರಿ ಮತ್ತು ಸುರಪುರ ಕಚೇರಿ ಜವಬ್ದಾರಿ ನೀಡಲಾಗಿದೆ.ಇದರಿಂದ ಅಧಿಕಾರಿಗಳು ವಾರಕ್ಕೆ ಒಂದು ದಿನ ಬಂದರೆ ಅದೇ ದೊಡ್ಡದೆಂಬಂತಾಗಿದೆ.ಇನ್ನು ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಒಬ್ಬರು ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದು ಅವರುಕೂಡ ಬೇಜವಬ್ದಾರಿ ಸೇವೆ ನಿರ್ವಹಿಸುತ್ತಿದ್ದು,ಬೆಳಿಗ್ಗೆ ಬರುವುದಾಗಲಿ,ಸಂಜೆ ಹೋಗುವುದಾಗಲಿ ಯಾವುದಕ್ಕೂ ಸಮಯದ ಮಿತಿ ಇಲ್ಲದಂತಿದೆ.ಮದ್ಹ್ಯಾನ ಒಂದು ವರೆಗೆ ಊಟಕ್ಕೆ ಹೋಗಬೇಕಾದ ಅಧಿಕಾರಿ ಈಗ ಹನ್ನೆರಡು ಗಂಟೆಯಾಗಿದೆ ಕಚೇರಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.ತಾಲೂಕಿನ ಹತ್ತಾರು ಮೈಲುಗಳ ದೂರದಿಂದ ಬರುವ ಸಾರ್ವಜನಿಕರಿಗೆ ಮುಚ್ಚಿದ ಬಾಗಿಲ ದರುಶನವೇ ಖಾಯಂ ಎನ್ನುವಂತಾಗಿದೆ.ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಈ ಅಧಿಕಾರಿಗಳ ಮೇಲೆ ದಿಟ್ಟ ಕ್ರಮ ಕೈಗೊಳ್ಳಬೇಕು ಮತ್ತು ಸುರಪುರ ಕಚೇರಿಗೆ ಖಾಯಂ ಅಧಿಕಾರಿ ನೇಮಕಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ವೀರಭದ್ರಪ್ಪ ತಳವಾರಗೇರಾ,ಸಂಘಟನಾ ಸಂಚಾಲಕ ಶೇಖರ ಮಂಗಳೂರ,ಆಕಾಶ ಕಟ್ಟಿಮನಿ,ಗೌತಮ್ ಬಡಿಗೇರ,ಖಾಜಾ ಅಜ್ಮೀರ್,ರಮೇಶ ಬಡಿಗೇರ,ಗೋವರ್ಧನ ತೇಲ್ಕರ್,ಗಫಾರ್ ಖುರೇಶಿ ಇತರರಿದ್ದರು.