ಯಾದಗಿರಿ: ಶಹಾಪುರ ತಾಲ್ಲೂಕಿನ ಎ.ಪಿ.ಎಮ್.ಸಿ.ಕಚೇರಿಗೆ ಲೊಕಾಯುಕ್ತ ಡಿ.ಎಸ್ಪಿ.ವಿ.ಬಿ.ಚಿಕ್ಕಮಠ ಹಾಗೂ ಪಿ.ಐ.ಗುರುರಾಜ ಕಟ್ಡಿಮನಿ ತಂಡ ಧೀಡರನೆ ಭೇಟಿ ನೀಡಿ ಪರೀಶೀಲನೆ ಕಾರ್ಯಕೈಗೊಂಡರು.
ತಾಲ್ಲೂಕಿನಲ್ಲಿ ಅನಧಿಕೃತ ಹತ್ತಿ ಖರೀದಿ ಕೆಂದ್ರಗಳು ಹೆಚ್ಚಾಗಿದ್ದು ರೈತರು ವಂಚಿತರಾಗುತ್ತಿದ್ದಾರೆ.ಈ ವಿಷಯ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಅಲ್ಲದೆ ರೈತಭವನ ಮತ್ತು ಮಳಿಗೆ ಸುತ್ತಮುತ್ತಲಿನಲ್ಲಿ.ಕಸದ ಕೊಂಪೆಗಳಿದ್ದು ಸ್ವಚ್ಚತೆ ಮಾಡುವಲ್ಲಿ ನಿರ್ಲಕ್ಷತೊರಿದ್ದಿರಿ ಎಂದು ಇಲ್ಲಿನ. ಕಾರ್ಯದರ್ಶಿಗಳಿಗೆ ತರಾಟೆಗೆ ತೆಗೆದುಕೊಂಡರು.
ಅಲ್ಲದೆ ಒಂದೆ ಕಡೆ ಹತ್ತಿ ಖರಿದಿ ಮಾಡುತ್ತಿದ್ದು ರೈತರಿಗೆ ತೊಂದರೆ ಉಂಟಾಗುತ್ತಿದೆ.ಕಚೇರಿಯಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರ ಅಳವಡಿಸಬೇಕು.ಎಂದು ಸೂಚಿಸಿದ ಲೊಕಾಯುಕ್ತರು.ಕಚೇರಿಯ ಕಡತಗಳನ್ನು ಅಪಡೆಟಾಗೊಳಿಸಿಲ್ಲವೆಂದು ಪ್ರಶ್ನಿಸಿದರು.
ಪರವಾನಿಗೆ ಇಲ್ಲದ ಹತ್ತಿ ಕಾಟಗಳನ್ನು ಕೂಡಲೆ ವಶಕ್ಕೆ ಪಡೆಯಲು ಅವರು ಕಟ್ಟುನಿಟ್ಟಿನ ಆದೇಶ ಮಾಡಿದರು. ಹತ್ತಿಗೂಡೂರ ಲಕ್ಷಂಪೂರ ಅನೇಕ ಗ್ರಾಮಗಳ ರೈತರು ಹಾಜರಿದ್ದರು.