ಯಾದಗಿರಿ: ಇಲ್ಲಿನ ಶಹಾಪುರನಲ್ಲಿ ಇಂದು ವಿವಾದಸ್ಪದ ಪೌರತ್ವ ಕಾಯ್ದೆ ವಿರೋಧಿಸಿ ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರು ನಗರದ ಐಬಿ ಬಡಾವಣೆಯಿಂದ ಬಸವೇಶ್ವರ ವೃತ್ತದ ವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.
ಕೇಂದ್ರ ಬಿಜೆಪಿ ಸರ್ಕಾರ ಪೌರತ್ವದ ನೆಪದಲ್ಲಿ ಅನೀತಿ ಹಾಗೂ ಸಂವಿಧಾನ ವಿರೋಧಿ ಕಾಯ್ದೆ ಜಾರಿಗೊಳಿಸಿ ದೇಶವನ್ನು ಒಡೆಯುವ ಹುನ್ನಾರ ನಡೆಸುತಿದೆ ಎಂದು ಪ್ರತಿಭಟನೆಯ ನೇತೃತ್ವವಹಿಸಿದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಎಸ್ಪಿ ಮುಖಂಡ ಸಯದ್ ಸೈದೋದ್ದಿನ್ ಖಾದ್ರಿ, ಯುತ್ ಕಾಂಗ್ರೆಸ್ ಮುಖಂಡ ಸಯದ್ ಶಫಿಯೋದ್ದಿನ್ ಶರಮಸ್ತ್, ವಿಶಕಂಠ ಬಡಿಗೇರ್, ಮಹಾದೇವಪ್ಪ ಸಾಲಿಮನಿ, ತಾಲ್ಲೂಕು ಸಮಿತಿಯ ಸದಸ್ಯ, ಮುಸ್ತಾಫಾ ವಾರದ, ಬಿಎಸ್.ಪಿ ಜಿಲ್ಲಾಧ್ಯಕ್ಷ ಅಜಯ ಯಳಸಂಗಿ, ಮಹಮ್ಮದ್ ರಫೀಚೌದರಿ, ನಸಿರೋದ್ದಿನ್, ಸಯದ್ ಖಾಲೀದ್ ಹಸನ್ ಮಹಮ್ಮದ್ ಮುಸ್ತಫ, ನವಾಜ್ ಪಟೇಲ್, ಸದ್ದಾಂ ದಾದುಲ್ಲಾಹ, ಯುವ ನೇತಾ ನೀಜಾಮೋದ್ದಿನ್ ಜಮಖಂಡಿ, ತಲತ್ ಚಾಂದ,ಕರೀಂ ಇಫ್ತೆಕಾರ ಅಹ್ಮದ್ ಸಂಗ್ರಮ, ಅಬ್ದುಲ್ ಬಾಷಾ ಶಿರವಾಳ, ಅಬ್ದುಲ್ ಸಮದ್, ಸಯದ್ ಅಫರೋಜ್ ದರಬಾನ್ ಸೇರಿದಂತೆ ನೂರಾರು ದಲಿತ ಸಂಘಟನೆ ಮುಖಂಡರು, ಎಸ್.ಡಿ.ಪಿ.ಐ.ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.