ಕಲಬುರಗಿ: ದೇಶದಲ್ಲೇ ವಿವಾದಸ್ಪದವಾಗಿರು ಸಿ.ಎ.ಎ ಮತ್ತು ಎನ್.ಆರ್.ಸಿ ವಿರೋಧಿಸಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಕಲಬುರಗಿಯಲ್ಲಿ ಎಡಪಕ್ಷಗಳಿಗೆ ಕಲಬುರಗಿ ಬಂದ್ ಕರೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ಮಾಡಿ, ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಿತು. ಆದರು ಜಿಲ್ಲೆಯಲ್ಲಿ ಎಡ ಪಕ್ಷಗಳಿಂದ ಕಲಬುರಗಿ ಬಂದ್ ಗೆ ಕರೆ ಸರ್ವಜನರಿಂದ ಬೆಂಬಲ ವ್ಯಕ್ತವಾಯಿತು.
ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಕಲಬುರಗಿ ನಗರದಲ್ಲಿ ತರಕಾರಿ ಮಾರುಕಟ್ಟೆ, ಪೆಟ್ರೋಲ್ ಬಂಕ್, ಸೂಪರ್ ಮಾರ್ಕೆಟ್ ಕೀರಾಣ ಬಜಾರ್, ಸೇರಿದಂತೆ ಸೂಪರ್ ಮಾರ್ಕೆಟ್ ಸಂಪೂರ್ಣ ಬಂದ್ ಮಾಡುವ ಮೂಲಕ ಕಲಬುರಗಿ ಬಂದ್ ಗೆ ಬೆಂಬಲ್ ಸೂಚಿಸಿದರು.
ನಗರದ ನೆಹರು ಗಂಜ್ ಪ್ರದೇಶದಿಂದ ಪ್ರಾರಂಭವಾದ ಪ್ರತಿಭಟನೆ ಕಲಬುರಗಿ ಬಂದ್ ಗೆ ಕರೆ ನೀಡಿದ ಮುಖಂಡರು ಪೊಲೀಸರು ವಶಕ್ಕೆ ಪಡೆದ ಬಸ್ ನಲ್ಲಿ ಕರೆದುಕೊಂಡು ಸಾಗಿಸುತ್ತಿದ್ದಾಗ ಪ್ರತಿಭಟನಾಕಾರರು ಬಸ್ ನ ಸುತವರಿದು ಬಸ್ ನ್ನು ತಡೆದು ಪ್ರತಿಭಟನೆ ನಡೆಸಿದರು. ಕೆಲಹೊತ್ತು ಉದ್ವೀಗ್ನವಾತವರಣ ನಿರ್ಮಾಣವಾಗಿದ್ದು, ನಂತರ ಮುಖಂಡರನ್ನು ಬಸ್ ನಿಂದ ಕೆಳಗೆ ಬಿಟ್ಟು ಶಾಂತಿಯುತ ಪ್ರತಿಭಟನೆಗೆ ಸಹಕರಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ ಎಡ ಪಕ್ಷದ ಮುಖಂಡ ಮಾರುತಿ ಮಾನ್ಪಡೆ, ನ್ಯಾಯವಾದಿ ವಾಹಾಜ್ ಬಾಬಾ, ನಾಸೀರ್ ಹುಸೇನ್ ಉಸ್ತಾದ್, ಇಲಿಯಾಸ್ ಸೇಠ್ ಬಾಗಬಾನ್, ನ್ಯಾಯವಾದಿ ಮಜರ್ ಹುಸೇನ್, ಎಸ್.ಡಿ.ಪಿ.ಐ ಜಿಲ್ಲಾ ಮುಖಂಡ ಮೊಹಮ್ಮದ್ ಮೋಹಸಿನ್, ಶೇಖ್ ಎಜಾಜ್ ಅಲಿ, ಅಬ್ದುಲ್ ರಹೀಮ್ ಪಟೇಲ್, ಶಾಹೀದ್ ನಸೀರ್, ಸಾಹಿತಿ ಕೆ. ನೀಲಾ, ರೀಹಾನಾ ಬೇಗಂ, ಶರಬಸಬಸಪ್ಪ ಮಮಶೇಟಿ ಸೇರಿದಂತೆ ಮುತಾಂದ ಎಡ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.