ಕುಡಿಯುವ ನೀರಿಗಾಗಿ ಖಾಲಿ ಕೊಡಗಳೊಂದಿಗೆ ಗ್ರಾಮ ಪಂ. ಎದುರು ಪ್ರತಿಭಟನೆ

0
70

ಚಿಂಚೋಳಿ: ಕೋಡ್ಲಿ ಗೇಟ್ ಕಾಲೋನಿಯಲ್ಲಿ ಕುಡಿಯುವ ನೀರು ಹಾಗೂ ವಿವಿಧ ಮುಲಭೂತ ಸೌಲಭ್ಯಕ್ಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ಖಾಲಿ ಕೊಡಗಳೊಂದಿಗೆ ಕೋಡ್ಲಿ ಗ್ರಾಮ ಪಂಚಾಯತ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಉದ್ದೇಶಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಶರಬಸಪ್ಪ ಮಮಶೇಟಿ, ಕಾಲೋನಿಯಲ್ಲಿ ಕುಡಿಯುವ ಹನಿ ನೀರಿಗಾಗಿ ಕೋಡ ಹಿಡಿದುಕೊಂಡು, ಜನರು ಪರದಾಡುವಂತಾಗಿದ್ದು,  ಹಲವಾರು ಬಾರಿ ಗ್ರಾಮ ಪಂಚಾಯತ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

Contact Your\'s Advertisement; 9902492681

ಗ್ರಾಮ ಪಂಚಾಯತಿಗೆ ಕುಡಿಯುವ ನೀರಿಗಾಗಿ ಸಾಕಷ್ಟು ಹಣ ಬಿಡುಗಡೆಯಾಗಿದೆ ಎಂದು ಪತ್ರಿಕೆಯಲ್ಲಿ ನೋಡಿ ಖುಷಿ ಪಡುವಂತಾಗಿದೆ.  ಪೈಪ್ ಒಡೆದು ಹೋಗಿದೆ ಅಲ್ಲಿ ನಿಂತಿರುವ ಚರಂಡಿ ನೀರು ಪುನ: ಅದೇ ಪೈಪಿನಲ್ಲಿ ಸೇರಿ ಜನರು ಅದೇ ನೀರು ಕುಡಿವಂತಾಗಿದೆ ಎಂದರು.

ಗೇಟ್ ಕಾಲೋನಿಯ ನಾಗರಿಕರು ಕುಡಿಯುವ ನೀರಿಗಾಗಿ ಗೇಟಿನಿಂದ ಅಂದಾಜು 1,ಕೀ.ಮೀ, ದೂರದಿಂದ ಎತ್ತಿನ ಬಂಡಿ, ಸೈಕಲ್, ಮೇಲೆ ನೀರು ತಂದು ಜೀವನ ಸಾಗಿಸುತ್ತಿದ್ದು, ಕೂಡಲೇ ಮೂಲ ಭೂತ ಸಮಸ್ಯೆಗಳನ್ನು ಪರಿಹರಿಸಬೇಕೆಂದು ತಾಲ್ಲೂಕು ಪಂಚಾಯತ್, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ಅಗ್ರಹಿಸಿದರು.

ಈ ಸಂದರ್ಭದಲ್ಲಿ ರೇವಣಸಿದ್ದ ಬುಬಲಿ, ಗುರುನಂದೇಶ ಕೋಣಿನ್, ಅಲೀಮ್ ನಾಯ್ಕೋಡಿ, ಶಿವಕುಮಾರ ಪ್ಯಾಟಿಮನಿ, ಕಾಂತು ಉಳ್ಳಾಗಡ್ಡಿ, ಟಿಪ್ಪು ಸುಲ್ಯಾನ ಸಂಘದ ಅಧ್ಯಕ್ಷ ಅಲಿ ನಾಯ್ಕೋಡಿ, ವೀರಣ್ಣ ನಿಂಗದಳ್ಳಿ, ಜಿ ಪರಮೇಶ್ವ ಕಾಂತಾ, ರೇವಣಸಿದ್ದಪ್ಪ ತೆಳಗಿನಡೊಡ್ಡಿ,  ಮಂಗೇಶ ಶೀರೂರು, ಬಂಗಾರಮ್ಮ ಗುತ್ತೇದಾರ, ಶಾಂತಮ್ಮ ಗುತ್ತೇದಾರ, ರಮೇಶ ಕಪ್ಪರಗಿ, ಶರಣು ಹೊಣ್ಣುರು ಸೇರಿದಂತೆ ಗ್ರಾಮದ ನಿವಾಸಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here