ಇಂಡಿಯಾ ರಿಸರ್ವ್ ಬಟಾಲಿಯನ್ ಸಿಬ್ಬಂದಿಗಳಿಗೆ ಒತ್ತಡ ರಹಿತ ಮನಸ್ಸು, ರೋಗ ರಹಿತ ದೇಹ ಕಾರ್ಯಾಗಾರ

0
59

ಕಲಬುರಗಿ: ಇಂದಿನ ಒತ್ತಡ ಯುಗದಲ್ಲಿ ಮನಸ್ಸು ಮತ್ತು ದೇಹವನ್ನ ಆರೋಗ್ಯವಾಗಿಟ್ಟುಕೊಳ್ಳುವುದು ಮಹತ್ವದ ಜವಾಬ್ದಾರಿಯಾಗಿದೆ.ಅದರಲ್ಲೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸ್ ಸಿಬ್ಬಂದಿಗಳು ಒತ್ತಡ ರಹಿತ ಮನಸ್ಸು, ರೋಗ ರಹಿತ ದೇಹ ಹೊಂದುವುದು ಅವಶ್ಯಕವಾಗಿದೆ ಎಂದು ನಗರದ ಖ್ಯಾತ ಕಿಡ್ನಿ ತಜ್ಞ ವೈದ್ಯ ಹಾಗೂ ಯಶೋಧ ಆಸ್ಪತ್ರೆ ಅಧ್ಯಕ್ಷ ಡಾ.ರವೀಂದ್ರ ಮದ್ರಿಕಿ ಅವರು ಹೇಳಿದರು.

ವಿಜಯಪುರದ ಅರಕೇರಿಯಲ್ಲಿರುವ ಇಂಡಿಯಾ ರಿಸರ್ವ್ ಬಟಾಲಿಯನ್ ಅಧಿಕಾರಿ ಸಿಬ್ಬಂದಿಗಳಿಗಾಗಿ ನಿನ್ನೆ ಆಯೋಜಿಸಿದ್ದ ಒತ್ತಡ ರಹಿತ ಮನಸ್ಸು, ರೋಗ ರಹಿತ ದೇಹ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ತಮ್ಮ ಕಾರ್ಯದಲ್ಲಿ ಸದಾ ಒತ್ತಡವಿರುತ್ತದೆ.ಪೊಲೀಸ್ ಸಿಬ್ಬಂದಿಗಳು ವೃತ್ತಿಯಲ್ಲಿರುವಾಗಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಮುಂಜಾಗ್ರತೆಯಿಂದ ಇರಬೇಕು.

Contact Your\'s Advertisement; 9902492681

ಆರಕ್ಷಕರು ಸ್ವಸ್ಥವಾಗಿದ್ದರೆ ನಾಗರಿಕರು ಸುರಕ್ಷತೆಯಿಂದ ಇರಲು ಸಾಧ್ಯವಾಗುತ್ತದೆ.ದೇಹ ಆರೋಗ್ಯವಾಗಿದ್ದಾಗ ಮನಸ್ಸೂ ಸಹಿತ ಪ್ರಫುಲ್ಲವಾಗಿ ಉತ್ಸಾಹದಿಂದ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ.ಒಂದು ವೈಜ್ಙಾನಿಕ ಅಧ್ಯನದಲ್ಲಿ ಒತ್ತಡವಿದ್ದಾಗ ತಾಯಿಯೊಂದಿಗೆ ಮಾತನಾಡಿದರೆ ಅತ್ಯಂತ ನಿರಾಳ ಮನೋಭಾವ ಉಂಟಾಗುತ್ತದೆ ಎಂದು ನಿರೂಪಿಸಲ್ಪಟ್ಟಿದೆ.ಮನಸ್ಸು ಮತ್ತು ದೇಹ ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ ಒಂದು ತೊಂದರೆಗೊಳಗಾದರೆ ಇನ್ನೊಂದು ಅನಾರೋಗ್ಯಕ್ಕೀಡಾಗುತ್ತದೆ. ಮನಸ್ಸು ಒತ್ತಡಕ್ಕೊಳಗಾದಾಗ ದೇಹ ಹಲವು ರೋಗಗಳಿಗೆ ತುತ್ತಾಗುವ ಅಪಾಯವಿದ್ದು ಈ ನಿಟ್ಟಿನಲ್ಲಿ ಈ ಒಂದು ಉಪಯುಕ್ತ ಕಾರ್ಯಾಗಾರವನ್ನು ಆಯೋಜಿಸಿದ್ದು ಬಹಳ ಸೂಕ್ತವಾಗಿದೆ.ಈ ನಿಟ್ಟಿನಲ್ಲಿ ಒತ್ತಡ ನಿರ್ವಹಣ ಶಾಸ್ತ್ರ ಹಾಗೂ ಒತ್ತಡದ ಬಗೆಗಿನ ತಪ್ಪು ಪರಿಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳಲು ಈ ಕಾರ್ಯಾಗಾರ ಪೊಲೀಸ್ ಸಿಬ್ಬಂದಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ನುಡಿದರು.

ಒತ್ತಡದ ಬಗೆಗಿನ ತಪ್ಪು ತಿಳುವಳಿಕೆಯಿಂದ ಬಹಳಷ್ಟು ಜನ ಹಾನಿಗೊಳಗಾಗಿದ್ದಾರೆ. ನಮ್ಮ ಭಾವನೆ ಹಾಗೂ ಮನೋಭಾವನೆ ಬದಲಾದರೆ ಒತ್ತಡ ನಿರ್ವಹಿಸುವುದು ಸುಲಭ ಎಂದು ಬೆಂಗಳೂರಿನಿಂದ ಆಗಮಿಸಿದ ತರಬೇತುದಾರ ಮನೋತಜ್ಞ ಭುಜಬಲಿ ಬೋಗಾರ ಕಾರ್ಯಾಗಾರ ನಡೆಸಿಕೊಟ್ಟು ವಿವಿಧ ಪ್ರಾಯೋಗಿಕ ತಂತ್ರಗಳನ್ನು ಹೇಳಿದರು .ಪೊಲೀಸ್ ಸಿಬ್ಬಂದಿಗಳು ತಮ್ಮ ಕಾರ್ಯಕ್ಷೇತ್ರದ ಒತ್ತಡವನ್ನು ಮನೆಗೆ ಕೊಂಡೊಯ್ಯಬಾರದು.ಕುಟುಂಬದ ತೊಂದರೆ ಒತ್ತಡಗಳನ್ನು ಕೆಲಸದಲ್ಲಿ ತರಬಾರದು. ತಮ್ಮ ತಮ್ಮ ಜವಾಬ್ದಾರಿಗಳನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಿದರೆ ಸಂತಸದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಮನೋವಿಜ್ಙಾನಿ ಭುಜಬಲಿ ಮಾರ್ಮಿಕವಾಗಿ ನುಡಿದರು.

ಇಂಡಿಯಾ ಪೊಲೀಸ್ ಬಟಾಲಿಯನ್ ವಿಜಯಪುರ, ಕಮಾಂಡೆಂಟ್ ಎಸ್.ಡಿ.ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಡಿಎಸ್‌ಪಿ ರಾಚಪ್ಪ ಕಾಜಗಾರ,ಡಿಎಸ್‌ಪಿ ಶರಣಬಸವ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಮೌನಯೋಗಿ ಫೌಂಡೇಶನ್ ಅಧ್ಯಕ್ಷ ಶ್ರಾವಣಯೋಗಿ ಹಿರೇಮಠ ಇದ್ದರು. ಕಾರ್ಯಕ್ರಮದಲ್ಲಿ ಇಂಡಿಯಾ ರಿಸರ್ವ ಬಟಾಲಿಯನ್ ವಿಜಯಪುರ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here