ಪೌರತ್ವ ಕಾಯ್ದೆ ವಿರುದ್ಧ ಹಂತ ಹಂತವಾಗಿ ಹೋರಾಟ: ಡಾ. ಅಜಗರ್ ಚುಲಬುಲ್

0
46

ನವದೆಹಲಿ: ಧರ್ಮ, ಧರ್ಮಗಳಲ್ಲಿ ವಿಷಬೀಜ ಬಿತ್ತುವ ಮೂಲಕ ದೇಶದಲ್ಲಿ ಅಜಾಗುರತೆ ಉಂಟು ಮಾಡುತ್ತಿರುವ ಕೇಂದ್ರ ಸರಕಾರದ ಈ ಹೊಸ ಸಿಎಎ, ಎನ್.ಅರ್.ಸಿ. ಹಾಗೂ ಎನ್.ಪಿ.ಅರ್. ಕಾಯ್ದೆ ವಿರುದ್ಧ ಹೋರಾಟ ಮಾಡಿದ್ದರೆ ಮಾತ್ರ ಈ ಕೋಮುಶಕ್ತಿಯ ಷಡ್ಯಂತ ವಿಫಲವಾಗುತ್ತದೆ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಅಸಗರ್ ಚುಲ್‌ಬುಲ್ ಅವರು ಹೇಳಿದ್ದಾರೆ.

ನವದೆಹಲಿಯಲ್ಲಿ ನಡೆದ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಕಾರ್ಯಕಾರಿ ಸಮಿತಿಯ ತುರ್ತು ಸಭೆಯಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ದೇಶದಲ್ಲಿ ಕೇಂದ್ರ ಸರಕಾರ ನಿರಂತರವಾಗಿ ಅಲ್ಪಸಂಖ್ಯಾತರ ಹಕ್ಕನ್ನು ಮೊಟಕುಗೊಳಿಸಲು ನಿರಂತರ ಪ್ರಯತ್ನ ಮಾಡುತ್ತಿದೆ, ಮೇಲಿಂದ ಮೇಲೆ ಅಸಂವಿಧಾನಿಕ ಕಾಯ್ದೆ, ಶರಿಯತ್‌ನಲ್ಲಿ ಹಸ್ತಕ್ಷೇಪ ಮಾಡುವುದರ ಮೂಲಕ ಸಂವಿಧಾನಕ್ಕೆ ಹಾಗೂ ಹಿಂದು ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ತರುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತುರ್ತುಸಭೆಯಲ್ಲಿ ಒಮ್ಮತದ ಮೂಲಕ 9 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ತೀರ್ಮಾನಿಸುವುದಾಗಿದ್ದು, ಸಮಿತಿಯ ಮುಖ್ಯ ಉದ್ದೇಶ ದೇಶದಲ್ಲಿ ಆಗಂತಕಂತಹ ಪ್ರತಿಭಟನೆಗಳು, ಮೆರವಣಿಗೆಗಳಲ್ಲಿ ಯಾವುದೇ ರೀತಿಯ ದೊಂಬಿ ಗಲಾಟೆ ಆಗದಂತೆ ಶಾಂತಿಯಿಂದ ಕಾನೂನು ಬದ್ಧವಾಗಿ ನಡೆಯುವಂತೆ ಸಲಹೆ ನೀಡುವುದಾಗಿದೆ ಎಂದು ತಿಳಿಸಿದರು.

ಸಂವಿಧಾನ ರಕ್ಷಣೆ, ಎಲ್ಲ ಧರ್ಮದ ಗುರುಗಳಿಗೆ ಸೇರಿಸಿ, ಹಿಂದು ಮುಸ್ಲಿಂ ಭಾವೈಕ್ಯತೆಗೆ ಹೆಚ್ಚಿನ ಶಕ್ತಿ ತುಂಬಬೇಕು, ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿವಿಧ ರಾಜ್ಯದಲ್ಲಿ ಪೋಲಿಸರು ಬಂಧಿಸಿ, ಅವರ ಮೇಲೆ ಹೂಡಿದ ಮೊಕ್ಕದ್ದಮೆಗಳನ್ನು ಹಿಂಪಡೆಯಲು ಮನವಿ ಹಾಗೂ ನ್ಯಾಯವಾದಿಗಳು ಹಾಗೂ ಬುದ್ದಿ ಜೀವಿಗಳು ಸೇರಿ ಜೇಲಿನಲ್ಲಿರುವ ಅಮಾಯಕರ ಬಿಡುಗಡೆಗೊಳಿಸುವುದು ಸೇರಿದಂತೆ ಇನ್ನು ಹಲವಾರು ವಿಷಯಗಳ ಬಗ್ಗೆ ನಿರ್ಣಯಿಸಿ, ಜವಾಬ್ದಾರಿ ನೀಡಲಾಯಿತು.

ಕೊನೆಯಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಪ್ರದಾನ ಕಾರ್ಯದರ್ಶಿ ಡಾ. ಮಂಜೂರ ಆಲಂ ಈ ಸಮಿತಿಯ ಸದಸ್ಯರ ಹೆಸರುಗಳನ್ನು ಈ ಮುಂದಿನಂತೆ ಘೋಷಿಸಿದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು ಹಾಗೂ ಪೀಪಲಸ್ಸ ಯುನಿಯನ್ ಫಾರ್ ಸಿವಿಲ ಲೀಬರಟೀಸ್ ನವದೆಹಲಿಯ ಸಂಚಾಲಕರಾದ ಶ್ರೀ ಎನ್. ಡಿ. ಪಂಚೋಲಿ ಅವರನ್ನು ಈ ಸಮಿತಿಯ ಸಂಚಾಲಕರನ್ನಾಗಿ ಮಾಡಲಾಯಿತು.

ಜಾಮಿಯಾ ವಿವಿಯ ಪ್ರೋ. ಹಸೀನಾ ಹಾಸಿಯಾ ಅವರನ್ನು ಸಹ ಸಂಚಾಲಕರನ್ನಾಗಿ, ಉಳಿದ ಏಳು ಜರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಯಿತು. ಸರದಾರ ಗುರದೀಪಸಿಂಗ್ ಅಧ್ಯಕ್ಷರು, ಯುನೈಟೆಡ್ ಅಕಾಲಿದಳ, ಶ್ರೀ ಅರುಣ ಮಾಜಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಪೀಪಲ್ಸ್ ಫ್ರಂಟ್ ಅಗೆನ್ಸ್ ಎನ್.ಅರ್.ಸಿ. ಹಾಗೂ ಫಾಸಿಂಜಂ, ಡಾ. ವಿದ್ಯಾಭೂಷಣ ರಾವತ್ ಅಧ್ಯಕ್ಷರು ಡೆಮಾಕ್ರಟಿಕ್ ಬಹುಜನ್, ಡಾ. ಮಹ್ಮದ ಅಸಗರ್ ಚುಲ್‌ಬುಲ್ ಪೀಪಲ್ಸ್ ಪೋರಂ ಸಂಸ್ಥಾಪಕ ಅಧ್ಯಕ್ಷರು, ಇಸಾಯಿ ಧರ್ಮದ ಗುರು ಡಾ. ಎಂ. ಡಿ. ಥಾಮಸ್ ಸಂಸ್ಥಾಪಕ ನಿರ್ದೇಶಕರು ಇನ್ಸಿಟಿಟ್ಯೂಟ್ ಆಫ್ ಹಾರ್ಮೊನಿ ಮತ್ತು ಪೀಸ್ ಸ್ಟಡೀಸ್, ಶ್ರೀ ಕೆ. ಕೆ ಕಠಾರಿಯಾ ನಿವೃತ್ತ ಕಂದಾಯ ಆಯುಕ್ತರು, ಹಾಗೂ ಪರ್ವೇಜ್ ಮೀಯಾ ನವದೆಹಲಿ ಇದ್ದರು.

ಈ ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಉಪಾಧ್ಯಕ್ಷರು, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಶ್ರೀ ಮೌಲಾನಾ ಅನೀಸುರ ರಹೆಮಾನ್ ಖಾಸ್ಮಿ ಅವರು ವಹಿಸಿದ್ದರು. ಬಾಬರಿ ಮಜೀದದ ಮೊಕದ್ದಮೆಯ ಸವೋಚ್ಚ ನ್ಯಾಯಲಯದ ನ್ಯಾಯವಾಧಿ ಶ್ರೀ ಜಫರಯಾಬ ಜೀಲಾನಿ, ಶಹಾ ಮುಸ್ತಫಾ ರೀಫಾಯಿ, ಹಾತೀಮ ಮುಛಾಲಾ, ಪ್ರದೀಪಸಿಂಗ್ ಸೇರಿದಂತೆ ಹಲವಾರು ಧರ್ಮದ ಗುರುಗಳು, ಬುದ್ದಿ ಜೀವಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಹಲವಾರು ಧರ್ಮದ ಬುದ್ದಿ ಜೀವಿಗಳು, ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳು ಪಾಲ್ಗೊಂಡು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸಿಎಎ, ಎನ್.ಅರ್.ಸಿ. ಹಾಗೂ ಎನ್.ಪಿ.ಅರ್. ಕಾಯ್ದೆ ಬಗ್ಗೆ ಕೇಂದ್ರ ಸರಕಾರದ ಕ್ರಮಕ್ಕೆ ಖಂಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here