ಮಹರ್ ಸೈನಿಕರಿಂದ ಆರಂಭವಾಗಿದ್ದು ಭೀಮಾ ಕೋರೆಗಾಂವ್ ವಿಜಯೋತ್ಸವ: ಮೂರ್ತಿ ಬೊಮ್ಮನಹಳ್ಳಿ

0
88

ಸುರಪುರ: ಭಾರತ ಇತಿಹಾಸದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಒಂದು ಅದ್ಭುತವಾದ ಇತಿಹಾಸ ಹೊಂದಿದ್ದು ಮಹರ್ ಸೈನಿಕರು ಮರಾಠ ಪೇಶ್ವೆಗಳೊಂದಿಗೆ ಯುದ್ಧ ಮಾಡಿ ಗೆದ್ದ ಸವಿನೆನಪೆ ಭೀಮಾ ಕೋರೆಗಾಂವ್ ವಿಜಯೋತ್ಸವವಾಗಿದೆ ಎಂದು ದಲಿತ ಚಿಂತಕ ಮೂರ್ತಿ ಬೊಮ್ಮನಹಳ್ಳಿ ಮಾತನಾಡಿದರು.

ನಗರದ ಡಾ: ಬಾಬಾ ಸಾಹೇಬ್ ಅಂಬೇಡ್ಕರ ವೃತ್ತದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿಜಯೋತ್ಸವದ ಕುರಿತು ಮಾತನಾಡಿ, ೧೮೧೮ರಲ್ಲಿ ಮಹಾರಾಷ್ಟ್ರದಲ್ಲಿದ್ದ ಐದು ನೂರು ಜನ ಮಹಾರ್ ಸೈನಿಕರು ಸಿದ್ದಗನಿ ಎಂಬ ದಂಡ ನಾಯಕನ ನೇತೃತ್ವದಲ್ಲಿ ಮರಾಠ ಪೇಶ್ವೆಯಾದ ಎರಡನೆ ಬಾಜಿರಾವನ ನೇತೃತ್ವದ ಸುಮಾರು ಮೂವತ್ತು ಸಾವಿರ ಸೈನಿಕರೊಂದಿಗೆ ಯುದ್ಧ ಮಹರ್ ಸೇನೆ ಯುದ್ಧ ಮಾಡಿ ಮರಾಠ ಸೇನೆಯನ್ನು ಸೋಲಿಸಿದ ಸವಿನೆನಪಿಗೆ ಆಚರಿಸುವ ವಿಜಯೋತ್ಸವ ಭೀಮಾ ಕೋರೆಗಾಂವ್ ವಿಜಯೋತ್ಸವವಾಗಿದೆ ಎಂದರು.

Contact Your\'s Advertisement; 9902492681

ಮತ್ತೋರ್ವ ಉಪನ್ಯಾಸಕ ಸಿದ್ದಯ್ಯಸ್ವಾಮಿ ಸ್ತಾವರಮಠ ಮಾತನಾಡಿ, ಅಂದು ಬ್ರಿಟೀಶರು ತಮ್ಮ ದಬ್ಬಾಳಿಕೆ ನಡೆಸುತ್ತಿರುವ ಸಂದರ್ಭದಲ್ಲಿ ಮಹರ್ ರೆಜಿಮೆಂಟ್ ಸಿದ್ದಗನಿ ನೇತೃತ್ವದ ಸೇನೆ ಮರಾಠರ ಪೇಶ್ವೆ ಸೈನಿಕ್ಕೆ ಬೆಂಬಲ ನೀಡುತ್ತೆವೆಂದು ಎರಡನೆ ಬಾಜಿರಾಯನ ಮನೆಗೆ ಹೋದ ಮಹರ್ ಸೇನೆಯ ಸಿದ್ದಗನಿಗೆ ನೀನು ಶೂದ್ರ ನಿನ್ನನ್ನು ಯಾರು ಮನೆಯೊಳಗೆ ಬಿಟ್ಟರೆಂದು ಅವಮಾನಿಸಿ ಹೊರ ಕಳುಸಿದ್ದಕ್ಕಾಗಿ ಸ್ವಾಭಿಮಾನಿ ಮಹರ್ ಸೈನಿಕರು ತಮಗಾದ ಅಪಮಾನಕ್ಕಾಗಿ ಕೇವಲ ಐದು ನೂರು ಜನ ಮೂವತ್ತು ಸಾವಿರ ಸೈನಿಕರ ಪೇಶ್ವೆಗಳೊಂದಿಗೆ ಯುದ್ಧ ಸಾರಿದಾಗ ಸೋತ ಮರಾಠರ ಸುಮಾರು ಇಪ್ಪತ್ತೈದು ಸಾವಿರ ಜನ ಸೈನಿಕರು ಹತರಾದರೆ ಇನ್ನುಳಿದ ಐದು ಸಾವಿರ ಜನ ದಿಕ್ಕಾಪಾಲಾಗಿ ಓಡಿ ಹೋಗುತ್ತಾರೆ.

ಆಗ ಯುದ್ಧದಲ್ಲಿ ಮಹರ್ ಸೇನೆಯ ಸುಮಾರು ಇಪ್ಪತ್ತೈದು ಜನ ಹತರಾಗಿದ್ದು ಅಂದು ಯುದ್ಧ ನಡೆದಿದ್ದು ಇದೇ ಜನೆವರಿ ೧ನೇ ತಾರೀಖಿನಂದು. ಅಲ್ಲಿ ಹತರಾದ ಮಹರ್ ಸೈನಿಕರ ಸವಿನೆನಪಿಗಾಗಿ ಅಲ್ಲಿ ವಿಜಯೋತ್ಸವ ಸ್ಥಂಭವೊಂದನ್ನು ನಿರ್ಮಿಸಲಾಗಿದ್ದು ಈ ಸ್ಥಳಕ್ಕೆ ಪ್ರತಿವರ್ಷ ಡಾ: ಬಾಬಾ ಸಾಹೇಬ್ ಅಂಬೇಡ್ಕರರು ಭೇಟಿ ನೀಡಿ ಆಚರಣೆ ಮಾಡುತ್ತಿದ್ದರು.ಅದನ್ನೆ ಇಂದು ದೇಶದೆಲ್ಲೆಡೆ ಭೀಮಾ ಕೋರೆಗಾಂವ್ ವಿಜಯೋತ್ಸವವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೋರಾಟಗಾರ ರಾಜು ಕಟ್ಟಿಮನಿ,ದೇವರಾಜ ಕೊಂಬಿನ್,ಪರಶುರಾಮ ಗೋವಾ,ಮಂಜುನಾಥ ಬಡಿಗೇರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here