ಜಿಲ್ಲೆಗೆ ಶೈಕ್ಷಣಿಕ ಗುಣಮಟ್ಟದ ಪ್ರಗತಿಯ ಸಂಕಲ್ಪ: ನೀರಡಗಿ

0
460

ಆಳಂದ: ಜಿಲ್ಲೆಯಲ್ಲೇ ಶೈಕ್ಷಣಿಕ ಗುಣಮಟ್ಟದ ಪ್ರಗತಿಗೆ ಪ್ರಸಕ್ತ ಸಾಲಿನಲ್ಲಿ ಕೈಗೊಂಡ ಸಂಕಲ್ಪವನ್ನು ಈಡೇರಬೇಕಾದರೆ, ಶಾಲೆಗಳ ಶಿಕ್ಷಕರು ಮತ್ತು ಪಾಲಕರ ಸಹಕಾರ ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರಪ್ಪ ನೀರಡಗಿ ಅವರು ಇಂದಿಲ್ಲಿ ಹೇಳಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಹೊಸ ವರ್ಷಾಚರಣೆ ನಿಮಿತ್ತ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕಿಗೆ ಬಂದಾಗಿನಿಂದಲೂ ವಿಶ್ರಮಿಸದೆ ಎಲ್ಲ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ಗುಣಮಟ್ಟ, ಸಮಸ್ಯೆ ಬೇಡಿಕೆಗಳ ಮಾಹಿತಿ ಕಲೆಹಾಕಿ ಶಾಸಕರ, ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಒಟ್ಟಾರೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜಿಡ್ಡು ಗಟ್ಟಿದ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾದಾಗ ಅನೇಕ ಆರೋಪ, ಪ್ರತ್ಯಾರೋಪಗಳು ಬರುವುದು ಸಹಜವಾಗಿದೆ. ಆದರೆ ಇವೆಲ್ಲವನ್ನೂ ಲೆಕ್ಕಸಿದೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಸೇರಿ ಒಳ್ಳೆಯ ಕೆಲಸ ಮಾಡಲು ಸಂಘಟನೆಗಳು, ಪಾಲಕರು ಒತ್ತು ನೀಡಬೇಕು ಎಂದು ಅವರು ಹೇಳಿದರು.

Contact Your\'s Advertisement; 9902492681

ರಾಜ್ಯ ಸರ್ಕಾರಿ ಪ್ರೌಢಶಾಲೆಗಳ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮರೆಪ್ಪ ಎನ್. ಬಡಿಗೇರ ಅವರು ಮಾತನಾಡಿ, ಕ್ಷೇತ್ರಕ್ಕೆ ಒಳ್ಳೆಯ ಶಿಕ್ಷಣಾಧಿಕಾರಿಗಳ ಅಧಿಕಾರ ವಹಿಸಿಕೊಂಡಾಗಿನಿಂದಲೂ ಖುದ್ದಾಗಿ ಶಾಲೆಗಳಿಗೆ ಭೇಟಿ ನೀಡಿ ತಪ್ಪು ಒಪ್ಪುಗಳನ್ನು ಪರಿಶೀಲಿಸಿ ಸಲಹೆ, ಸೂಚನೆ ಹಾಗೂ ಎಚ್ಚರಿಕೆಗಳನ್ನು ನೀಡಿ ಶೈಕ್ಷಣಿಕ ವ್ಯವಸ್ಥೆ ಸುಧಾರಣೆಗೆ ಮುಂದಾಗಿದ್ದಾರೆ. ಇಂಥ ಶಿಕ್ಷಣಾಧಿಕಾರಿಗಳು ಈ ತಾಲೂಕಿಗೆ ಅಗತ್ಯವಾಗಿದೆ. ಒಳ್ಳೆಯ ಕೆಲಸ ಮಾಡುವ ಶಿಕ್ಷಣಾಧಿಕಾರಿಗಳಿಗೆ ತಮ್ಮ ತಪ್ಪುಗಳ ಮುಚ್ಚಿಕೊಳ್ಳಲು ಅಧಿಕಾರಿಗಳ ಮೇಲೆ ವಿನಹ ಕಾರಣ ಆರೋಪ ಹೊರಿಸಿದರೆ ಶಿಕ್ಷಕ ಸಮುದಾಯ ಸಹಿಸುವುದಿಲ್ಲ. ಎಲ್ಲರೂ ಸೇರಿ ಶೈಕ್ಷಣಿಕ ವಾತಾವರಣ ನಿರ್ಮಿಸುವ ಮೂಲಕ ಕೀರ್ತಿಗೆ ಪಾತ್ರವಾಗಲು ಶ್ರಮಿಸೋಣಾ ಎಂದರು.

ಇದೇ ವೇಳೆ ಹೊಸ ವರ್ಷದ ಅಂಗವಾಗಿ ಪರಸ್ಪರ ಶುಭಾಷಯ ಕೋರಿಕೊಂಡರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ| ರಾಜಕುಮಾರ ಪಾಟೀಲ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿಲಕಂಠಪ್ಪ ಸುಂದರಕರ್, ಶಿಕ್ಷಣ ಸಂಯೋಜಕ ರೌಫ್, ಎಫ್‌ಡಿಸಿ ಮಹಾಂತೇಶ ಜಮಾದಾರ, ಸಂಗಣ್ಣಾ, ದ. ಬ್ರೀಜ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ ಕೋರೆ, ಕಲ್ಯಾಣಪ್ಪ ಬಿಜ್ಜರಗಿ, ಸಂದೀಪ ಕಾರಬಾರಿ, ಶಿವಾನಂದ, ವಿಕ್ರಂ, ಮನ್ಸೂರ ಮತ್ತಿತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here