ಕಲಬುರಗಿ: ದೇಶದಲ್ಲಿ ಸಿಎಎ ಮತ್ತು ಎನ್.ಆರ್.ಸಿ ಕಾಯ್ದೆಯಿಂದ ದೇಶದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ಮುಸ್ಲಿಂ ಸಮುದಾಯ ನಾಗರಿಕರು ದೇಶದಲ್ಲಿ ಸೃಷ್ಠಿಯಾಗಿರುವ ಸಂಗಷ್ಟ ನಿವಾರಣೆಗಾಗಿ ಒಂದು ದಿನದ ರೋಜಾ (ಉಪವಾಸ ವೃತ) ಹಾಗೂ ವಿಶೇಷ ನಮಾಜ್ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು.
ನಗರದ ಮುಸ್ಲಿಂ ಚೌಕ್ ಹತ್ತಿರದ ಮಸಿದಿಯಲ್ಲಿ ನಫೀಲ್ ನಮಾಜ್ ನಿರ್ವಹಿಸಿ, ಬೆಳಿಗ್ಗೆ ಸಾಹೇರಿ ಮಾಡಿ ನಗರದ ವಿವಿಧ ಬಡವಾಣೆಯಲ್ಲಿ ಇಸ್ತೇಮಾ ನಡೆಸಿ ದುವಾ ಮಾಡಲಾಯಿತು. ಅಲ್ಲದೇ ಒಂದು ದಿನದ (ರೋಜಾ) ಉಪವಾಸ ವೃತ ಬಿಡುವ ಮೂಲಕ ದೇಶದ ಪರಿಸ್ಥತಿ ಸುಧಾರಣೆಗೆ ಪ್ರಾರ್ಥನೆ ಸಲ್ಲಿಸಿದರು.
ಅಲ್ಲದೇ ನಗರದ ಟಿಪ್ಪು ಸುಲ್ತಾನ ಚೌಕ್ ನಲ್ಲಿ ಸಿಎಎ ಹಾಗೂ ಎನ್.ಆರ್.ಸಿ ವಿರೋಧಿಸಿ ಸತ್ಯಗ್ರಹ ನಡೆಸುತ್ತಿದ್ದು, ಪ್ರತಿಭಟನಾಕಾರರು ಸತ್ಯಗ್ರಹದಲ್ಲಿ ಇಫತೇಯಾರ್ ಕೂಟ ನಡೆಸಿದರು.
ಸತ್ಯಗ್ರಹದಲ್ಲಿ ಸಮಾಜಿಕ ಕಾರ್ಯಕರ್ತ ನಾಜೀರ್ ಅಹ್ಮದ್, ಅಲಿಂ ಇಲಾಯಿ, ಮೊಹಮದ್ ಮೊಹಸೀನ್ ಸೇರಿದಂತೆ ಮುಂತಾದವರು ಇದ್ದರು.