ಅಂಬೇಡ್ಕರರ ತತ್ವ ಸಿದ್ದಾಂತದಡಿ ಸಂಘಟನೆ ಕಟ್ಟಿ: ಭೀಮರಾಯ ಸಿಂಧಗೇರಿ

0
52

ಸುರಪುರ: ದೇಶದಲ್ಲಿ ದಲಿತ ಶೋಷಿತ ಮತ್ತು ಅಲ್ಪಸಂಖ್ಯಾತರ ಮೇಲೆ ನಿತ್ಯವು ಒಂದಿಲ್ಲೊಂದು ರೀತಿಯ ದಬ್ಬಾಳಿಕೆ ಅನ್ಯಾಯ ಅತ್ಯಾಚಾರಗಳು ನಡೆಯುತ್ತಿವೆ.ಇವುಗಳನ್ನು ತಡೆಯಲು ನಾವೆಲ್ಲ ಅಂಬೇಡ್ಕರರ ಹೇಳಿದ ತತ್ವ ಸಿದ್ಧಾಂತದಡಿಯಲ್ಲಿ ಸಂಘಟನೆ ಕಟ್ಟಿ ದಲಿತ ಶೋಷತರ ಧ್ವನಿಯಾಗಿ ಹೋರಾಟ ಮಾಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಘಟನಾ ಸಂಚಾಲಕ ಭೀಮರಾಯ ಸಿಂಧಗೇರಿ ಮಾತನಾಡಿದರು.

ತಾಲೂಕಿನ ಹುಣಸಗಿಯ ಪ್ರವಾಸಿ ಮಂದಿರದಲ್ಲಿ ಹುಣಸಗಿ ತಾಲೂಕು ಮತ್ತು ಕೊಡೇಕಲ್ ಹೋಬಳಿ ಶಾಖೆಗಳಿಗೆ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯಲ್ಲಿ ಭಾಗವಹಿಸಿದ್ದ ಸಮಿತಿ ಜಿಲ್ಲಾ ಸಂಚಾಲಕ ಶರಣು ದೋರನಹಳ್ಳಿ ಮಾತನಾಡಿ,ಇಂದು ನಾವೆಲ್ಲರು ಸಂಘಟಿತರಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ.ಸರಕಾರಗಳು ನಮ್ಮ ಹಕ್ಕನ್ನು ನಮಗೆ ನೀಡಲು ಹಿಂದೇಟು ಹಾಕುತ್ತವೆ.ಮತ್ತೊಂದೆಡೆ ಕೋಮುವಾದಿಗಳು ಸಂವಿಧಾನವ್ನನು ಬದಲಾಯಿಸುವ ಮಾತನಾಡುತ್ತಾರೆ.ಇವರಿಗೆಲ್ಲ ನಾವು ಪಾಠ ಕಲಿಸಲು ಎಲ್ಲೆಡೆ ಸಂಘಟನೆ ಬೆಳೆಸಬೇಕಿದೆ.ಆ ಮೂಲಕ ಸಂವಿಧಾನ ಮತ್ತು ಬಾಬಾ ಸಾಹೇಬರ ಬಗ್ಗೆ ಮಾತನಾಡುವವರಿಗೆ ಬುದ್ಧಿ ಕಲಿಸೋಣ ಎಂದರು.

Contact Your\'s Advertisement; 9902492681

ಹುಣಸಗಿ ತಾಲೂಕು ಪದಾಧಿಕಾರಿಗಳು: ಪ್ರಭು ಕಚಕನೂರು ತಾಲೂಕು ಸಂಚಾಲಕ, ಮಾನಪ್ಪ ಯಡ್ಡಳ್ಳಿ,ಪರಮಣ್ಣ ವಜ್ಜಲ,ಮಲ್ಲಣ್ಣ,ಚಂದಪ್ಪ ಚಲುವಾದಿ ವಿರೂಪಾಕ್ಷಿ ಅಂಬರಕೋಡ,ರಾಜು ಮಾಳೂರು ಸಂಘಟನಾ ಸಂಚಾಲಕರು ಹಾಗು ಭೀಮರಾಯ ಹೆಬ್ಬಾಳ ಖಜಾಂಚಿಯಾಗಿ ಆಯ್ಕೆಗೊಳಿಸಲಾಯಿತು.ಅದರಂತೆ ಕೊಡೇಕಲ್ ಹೋಬಳಿ ಪದಾಧಿಕಾರಿಗಳನ್ನಾಗಿ ಬಸವರಾಜ ಮ್ಯಾಗೇರಿ ಸಂಚಾಲಕ,ಜಾವೀದ್ ನಾರಾಯಣಪುರ,ಶಾಂತಕುಮಾರ ವಡ್ಡರ,ಮೌನೇಶ ದೊಡ್ಮನಿ,ಹಣಮಂತ್ರಾಯ ಕಡಿಮನಿ,ನಿಂಗಪ್ಪ ದಳವಾಯಿ ಸಂಘಟನಾ ಸಂಚಾಲಕರು ಹಾಗು ದಸ್ತಪ್ಪ ಮೇಲಿನಮನಿ ಖಜಾಂಚಿಯನ್ನಾಗಿ ನೇಮಿಸಲಾಯಿತು.ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಯಮನಪ್ಪ ಚನ್ನೂರು ಹಾಗು ನಾಗರಾಜ ದೊಡ್ಮನಿಯವರನ್ನು ಆಯ್ಕೆಗೊಳಿಸಲಾಯಿತು.

ಸಭೆಯಲ್ಲಿ ಆರ್.ಬಿ.ದೊಡ್ಮನಿ ಮಾಳನೂರು,ಬಸಣ್ಣ ದೋದಿ,ನಿಂಗಪ್ಪ ರಾಮಪ್ಪ ದಳವಾಯಿ,ಚಂದಪ್ಪ ಗುಂಡಲಗೇರಿ,ಮೌನೇಶ ದೊಡ್ಮನಿ,ಜೆಟ್ಟೆಪ್ಪ ಹಾದಿಮನಿ,ವೀರುಪಾಕ್ಷಿ ಅಂಬರಕೋಡ,ಪರಮಣ್ಣ ವಜ್ಜಲ,ಅರಣಕುಮಾರ ದೋರನಹಳ್ಳಿ,ಶರಣು ಹರಸಗುಂಡಗಿ,ಭೀಮಣ್ಣ ದೊಡ್ಮನಿ,ಮಾನಪ್ಪ ಹಳ್ಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here