ಹುದ್ದೆಗೆ ಪ್ರಾಮಾಣಿಕ ಸೇವೆ ಸಲ್ಲಿಸಿ ಬಿ.ಆರ್.ಪೊಲೀಸ್ ಪಾಟೀಲ್ ಸಲಹೆ

0
38

ಸುರಪುರ: ಸರ್ಕಾರಿ ಹುದ್ದೆಗೆ ಆಯ್ಕೆಯಾಗಿ ಸಮಾಜಕ್ಕೆ ಮತ್ತು ಹುದ್ದೆಗೆ ನ್ಯಾಯ ಒದಗಿಸಲು ಸಹ ನಮ್ಮ ಪ್ರಾಮಾಣಿಕತೆ ಎನ್ನು ಬಿಡಬಾರದು ಎಂದು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್.ಪೊಲೀಸ್ ಪಾಟೀಲ್ ಹೇಳಿದರು.

ನಗರದ ಸರಕಾರಿ ಮಾದರಿ ಕನ್ಯಾ ಪ್ರಾಥಮಿಕ ಶಾಲೆ ದರಬಾರದಲ್ಲಿ ತಾಲೂಕು ದೈಹಿಕ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರಿ ನೌಕರರು ಇಂದು ಅನೇಕ ಯೋಜನಗಳನ್ನು ಜನರಿಗೆ ತಲುಪಿಸುವಲ್ಲಿ ತಮ್ಮ ಕೆಲಸವನ್ನೆ ಮರೆತಿದ್ದಾರೆ ಹೀಗಾದರೆ ಮಾತ್ರು ಇಲಾಖೆಗೆ ದ್ರೊಹ ಬಗೆದಂತಾಗುತ್ತದೆ ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಇದಕ್ಕು ಮುಂಚೆ ಮಾತನಾಡಿದ ಕಲಬುರ್ಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಮಾತನಾಡಿ ಯಾದಗಿರ ಜಿಲ್ಲೆಯಲ್ಲಿ ಮೊದಲಿಗೆ ದೈಹಿಕ ಶಿಕ್ಷಣದೊಂದಿಗೆ ಯೋಗ ಶಿಕ್ಷಣವನ್ನು ತಂದು ಯೋಗದಿಂದಾಗುವ ಲಾಭಗಳನ್ನು ಮಕ್ಕಳಿಗೆ ತಿಳಿಸಿದವರಲ್ಲಿ ಮೊದಲಿಗರು ಬಿ.ಆರ್.ಪೊಲೀಸ್ ಪಾಟೀಲರು ಅವರ ಸೇವೆಯು ಅನೇಕ ಯುವ ದೈಹಿಕ ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ ಎಂದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪರಂಗಯ್ಯ ಅವರು ಮಾತನಾಡಿ ಪಾಟೀಲರು ಸೌಮ್ಯ ಸ್ವಭಾವದೊಂದಿಗೆ ಗಟ್ಟಿತನದೊಂದಿ ತಾಲೂಕಿನ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಭಾಗ ಮಟ್ಟದ ಕ್ರೀಡಾಕೋಟವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ್ದಾರೆ ಇವರಲ್ಲಿರುವ ನಾಯಕತ್ವದ ಗುಣದಿಂದ ಹಲವು ಮಕ್ಕಳನ್ನು ಕ್ರೀಡೆಗಳಲ್ಲಿ ಸಾಧನೆ ಮಾಡಲು ದಾರಿಮಾಡಿಕೊಟ್ಟಿದ್ದಾರೆ ಇವರು ತಮ್ಮ ನಿವೃತ್ತಿ ಜೀವನದಲ್ಲೂ ಇದೆ ರೀತಿಯಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತರಬೇತಿ ನೀಡಲು ಮುಂದಾಗಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಒಲೇಕಾರ, ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಸಂಜೀವ ದರಬಾರಿ ಮಾತನಾಡಿದರು.

ಅಮರೇಶ ಕುಂಬಾರ, ಯಲ್ಲಪ್ಪ ಕಾಡ್ಲೂರ, ಹಳ್ಳೆಪ್ಪ ಕಾಂಜಾಜಿ, ಶಾಂತಗೌಡ ವಜ್ಜಲ್, ಚÀಂದ್ರಶೇಖರ ಹೊಕ್ರಾಣಿ, ಬಸನಗೌಡ ವಠಾರ, ಸಿದ್ದನಗೌಡ ಚೌದ್ರಿ ವೇದಿಕೆಯಲ್ಲಿದ್ದರು ಸೋಮರೆಡ್ಡಿ ಮಂಗಿಹಾಳ, ದೈಹಿಕ ಶಿಕ್ಷಕರಾದ ಪ್ರಭುಗೌಡ, ಸತ್ಯನಾರಾಯಣ ದರಬಾರಿ, ಮಹೇಶ ಜಹಗೀರದಾರ್, ಶರಣಗೌಡ ದೇವರಗೋನಾಲ, ನಿಂಗಣ್ಣ ಪೂಜಾರಿ, ಜೋಗಪ್ಪ, ಭೀಮರಾಯ ಗೋನಾಲ, ಕಲ್ಯಾಣಿಗಿರಿ, ಗುರುರಾಜ, ಶ್ರೀಕಾಂತ, ಈಶ್ವರ ದೇವರಗೋನಾಲ ಸೇರಿದಂತೆ ಇನ್ನಿತರರಿದ್ದರು ಲಕ್ಷ್ಮಣ ನಿರೋಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here