ಭಾರತ ಬಂದ್ ಮಷ್ಕರಕ್ಕೆ ವಿವಿಧ ಸಂಘಟನೆಗಳಿಂದ ಬೆಂಬಲ

0
164

ಕಲಬುರಗಿ: ಭಾರತ್ ಬಂದ್ ಸಾರ್ವರ್ತಿಕ ಮುಷ್ಕರ ಹಿನ್ನೆಯಲ್ಲಿ ಕಲಬುರಗಿಯಲ್ಲಿ ಬಹುತೇಕ ಶಾಲಾ ಕಾಲೇಜುಗಳಿಗೆ ಸ್ವಯಂ ಪ್ರೇರಿತವಾಗಿ ಬಂದ್ ಘೋಷಿಸಿ ಬಂದ್ ಗೆ ಬೆಂಬಲ ನೀಡಿದ್ದಾರೆ.

ಇಂದು ನಡೆಯುತ್ತಿರುವ ಬಂದ್ ಕರೆಗೆ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸವೆರ ಸಂಘಟನೆ ಹಾಗೂ ಪಿಪಲ್ಸ್ ಪಾರ್ಟಿ ಪಕ್ಷದ ವತಿಯಿಂದ ಬೆಂಬಲ ವ್ಯಕ್ತವಾಗಿದ್ದು ಸಿಪಿಎಂ ಜಿಲ್ಲಾಧ್ಯಕ್ಷರಾದ ಮಾರುತಿ ಮಾನ್ಪಡೆ ಕಾರ್ಯದರ್ಶಿಯಾದ ಮೌಲಾ ಮುಲ್ಲಾ ಅವರ ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದೆ.

Contact Your\'s Advertisement; 9902492681

ಕೇಂದ್ರೀಯ ಬಸ್ ನಿಲ್ದಾಣದ ಹತ್ತಿರ ಎಲ್ಲ ಅಂಗಡಿಗಳು ಬಂದ್ ಮಾಡುವ ಮೂಲಕ ಮುಷ್ಕರವನ್ನು ಪ್ರದರ್ಶಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶರಣಬಸಪ್ಪ ಮಮಶೇಟಿ, ಸವೆರ ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ, ಅಣಬಿ ಶೇಕ್, ಯುನುಸ್ ಅಲಿ, ಶೇಕ್ ಹುಸೇನ್ ಬಾಬಾ, ಸೈಯದ್ ಏಜಾಜ್ ಅಲಿ ಇನಮ್ದಾರ್, ಸಜಿದ್ ಅಲಿ ರಂಜೋಳವಿ, ಶೇಕ್  ಸಿರಾಜ್ ಪಾಶ, ಹೈದರ್ ಅಲಿ ಇನಾಮದಾರ್,  ಖಾಲಿಕ ಅಹ್ಮದ್, ರಜಾಕ್ ಚೌದರಿ, ಮೆಹರಾಜ್ ಕಲ್ಯಾಣ ವಾಲಾ, ಗೀತಾ, ಸಂಗೀತ ಪಾಟೀಲ, ಸೈರಾ ಬಾನು, ರಾಬಿಯಾ ಶಿಕಾರಿ, ಸುಗ್ರ ಬೇಗಂ, ರಾಫಿಯ ಶಿರಿನ್, ಫೌಜಿಯ ಬೇಗಂ, ಆಯಿಷಾ ಶಿಕಾರಿ, ಮುಮ್ತಾಜ್ ಬೇಗಂ, ಶಕೀಲಾ ಬಾನು, ಅಬ್ದುಲ್ ಜಬ್ಬಾರ್ ಕಿಣಗಿ, ಜಾಫರ್ ಪಟೇಲ, ಭಾಷಾ ಪಟೇಲ, ವಿಜಯ್ ಕುಮಾರ್, ಇನ್ನು ಹಲವಾರು ಜನರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here