ಜನೆವರಿ 6,7 ಮತ್ತು 8ರಂದು ಮತದಾರರ ಮಿಂಚಿನ ನೋಂದಣಿ.

0
65

ಚಿತ್ತಾಪುರ: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತಾಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ಜನವರಿ 6, 7 ಮತ್ತು 8ರಂದು ಮಿಂಚಿನ ನೋಂದಣಿ ಹಮ್ಮಿಕೊಳ್ಳಲಾಗಿದ್ದು ಕರಡು ಮತದಾರರ ಪಟ್ಟಿಯಲ್ಲಿ ಇನ್ನೂ ಸೇರ್ಪಡೆಯಾಗದೆ ಇರುವ ಅರ್ಹ ಯುವಕ-ಯುವತಿಯರು, ನಾಗರಿಕರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಎಂದು ಚುನಾವಣಾ ನೋಡಲ್ ಅಧಿಕಾರಿ ಮಂಜುನಾಥ್ ಸೂಚಿಸಿದರು.

Contact Your\'s Advertisement; 9902492681

ಪಟ್ಟಣದ ತಹಸಿಲ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಮಿಂಚಿನ ನೊಂದಣಿ ಸಭೆ ಕುರಿತು ಮಾತನಾಡುತ್ತಾ ಕಾಲೇಜುಗಳಿಗೆ ಭೇಟಿ ನೀಡಿ ಯುವ ಮತದಾರರ ನೋಂದಣಿ ಮಾಡಿಕೊಳ್ಳಬೇಕು ಈ ಕುರಿತಂತೆ ಜಾಗೃತಿ ಮೂಡಿಸಬೇಕು. ಕಳೆದ ಜನವರಿ 1ಕ್ಕೆ 18ವರ್ಷ ಪೂರೈಸಿದ ಯುವಕ- ಯುವತಿಯರು ಅಥವಾ ಅರ್ಹ ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರು ಸ್ಥಳಾಂತರ ಹೊಂದಿದಲ್ಲಿ, ಮೃತ ಹೊಂದಿದಲ್ಲಿ, ಹೆಸರು ಪುನರಾವರ್ತನೆಯಾಗಿದ್ದಲ್ಲಿ ಹೆಸರನ್ನು ತೆಗೆದು ಹಾಕಲು ನಮೂನೆ-7ರಲ್ಲಿ, ಹೆಸರು ಇತ್ಯಾದಿ ತಿದ್ದುಪಡಿ ಬಯಸಿದಲ್ಲಿ ನಮೂನೆ-8ರಲ್ಲಿ ಮತ್ತು ಹೆಸರು ವರ್ಗಾವಣೆ ಮಾಡಬೇಕಾದಲ್ಲಿ ನಮೂನೆ-8ಎ ರಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಗಳನ್ನು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ (ಬಿ.ಎಲ್.ಓ)ಗಳಿಗೆ ಸಲ್ಲಿಸಬಹುದು ಎಂದು ತಹಸಿಲ್ದಾರ ಉಮಾಕಾಂತ್ ಹಳ್ಳೆ ತಿಳಿಸಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಗ್ರೇಟ್ 2 ರವಿಂದ್ರ ಧಾಮಾ, ಶಿರಸ್ತೇದಾರ ಸಿದ್ರಾಮಪ್ಪ ನಾಚವಾರ, ಪುರಸಭೆ ಅಧಿಕಾರಿ ಮನೋಜಕುಮಾರ ಗುರಿಕಾರ್, ಕಂದಾಯ ನಿರೀಕ್ಷಕರು ದಶರಥ ಮನತಟ್ಟಿ, ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here