ಸುರಪುರ ಉಪ ವಿಭಾಗದಲ್ಲಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ: ಶಿವನಗೌಡ ಪಾಟೀಲ

0
111

ಸುರಪುರ: ಕಳೆದ ಒಂದು ವರ್ಷದಿಂದ ಇಲ್ಲಿಯ ಉಪ ವಿಭಾಗದ ಉಪ-ಅಧೀಕ್ಷಕನಾಗಿ ನನಗೆ ಸಾಧ್ಯವಾದ ಮಟ್ಟಿಗೆ ಉತ್ತಮವಾಗಿ ಸೇವೆ ಸಲ್ಲಿಸಿದ್ದೆನೆ ಎಂಬ ತೃಪ್ತಿಯಿದೆ ಎಂದು ಬೆಂಗಳೂರಿಗೆ ಭ್ರಷ್ಟಾಚಾರ ನಿಗ್ರಹ ದಳ ವಿಭಾಗಕ್ಕೆ ವರ್ಗಾವಣೆಗೊಂಡ ಶಿವನಗೌಡ ಪಾಟೀಲ ಮಾತನಾಡಿದರು.

ಕರ್ನಾಟಕ ಪೊಲೀಸ್ ಇಲಾಖೆ ಯಾದಗಿರಿ ಜಿಲ್ಲೆಯ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಸನ್ಮಾನ ಸ್ವೀಕರಿಸಿ ಮಾತನಾಡಿ,ಇಲ್ಲಿಗೆ ಬರುವ ಮುನ್ನ ಜನರು ಹೇಗೊ ಏನೊ ಎನ್ನುವ ಭೀತಿಯಿತ್ತು,ಆದರೆ ಸೇವೆ ಸಲ್ಲಿಸುತ್ತಾ ಇಲ್ಲಿಯ ಜನರು ತುಂಬಾ ಸಂಭಾವಿತ ಮತ್ತು ಸ್ವಾಭಿಮಾನಿಗಳು. ಅನೇಕರು ನನ್ನ ಸೇವೆ ಸಹಕಾರ ಮತ್ತು ಸಲಹೆಗಳನ್ನು ನೀಡಿದ್ದಾರೆ.ಅವರನ್ನು ಮರೆಯಲಾರೆ ಹಾಗು ಸೇವೆಗೆ ಸಹಕರಿಸಿದ ಉಪ ವಿಭಾಗದ ಎಲ್ಲಾ ಸಹಪಾಠಿ ಪೊಲೀಸ್ ಅಧಿಕಾರಿಗಳಿಗೆ ಮತ್ತು ಕಚೇರಿಯ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು.ನಂತರ ಹೊಸದಾಗಿ ಬಂದಿರುವ ಡಿವಾಯ್‌ಎಸ್‌ಪಿಯವರಾದ ವೆಂಕಟೇಶ ಹೊಗಿಬಂಡಿಯವರಿಗೂ ನನ್ನಂತೆ ಸಹಕಾರ ನೀಡುವಂತೆ ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ಡಿವಾಯ್‌ಎಸ್‌ಪಿ ವೆಂಕಟೇಶ ಹೊಗಿಬಂಡಿಯವರು ಮಾತನಾಡಿ,ಮೊದಲಬಾರಿಗೆ ಡಿವಾಯ್‌ಎಸ್‌ಪಿಯಾಗಿ ಸುರಪುರ ಉಪ ವಿಭಾಗಕ್ಕೆ ಬಂದಿರುವೆ ಶಿವನಗೌಡ ಪಾಟೀಲ ಸರ್ ಅವರಿಗೆ ನೀಡಿದಂತೆ ಸಹಕಾರ ನೀಡಿ,ಸಾಧ್ಯವಾದ ಮಟ್ಟಿಗೆ ಕಾನೂನು ಪಾಲನೆಯನ್ನು ಜಾರಿಗೊಳಿಸುವೆನು ಹಾಗು ಸಾರ್ವಜನಿಕರಿಗೆ ನಮ್ಮ ಅಧಿಕಾರಿಗಳಿಂದ ಸರಿಯಾದ ಸಹಕಾರ ಸಿಗದಿದ್ದಲ್ಲಿ ನೇರವಾಗಿ ಬಂದು ಭೇಟಿ ಮಾಡಿ ನಿಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ಶಿವನಗೌಡ ಪಾಟೀಲ ದಂಪತಿಗಳನ್ನು ಹಾಗು ನೂತನ ಡಿವಾಯ್‌ಎಸ್‌ಪಿ ವೆಂಕಟೇಶ ಹೊಗಿಬಂಡಿಯವರನ್ನು ಕರ್ನಾಟಕ ಜರ್ನಲಿಸ್ಟ್ಸ್ ಯೂನಿಂiiನ್ ಸುರಪುರ ತಾಲೂಕು ಘಟಕ ಹಾಗು ಕಾರ್ಯನಿರತ ಪತ್ರಕರ್ತರ ಸಂಘದ ಹುಣಸಗಿ ತಾಲೂಕು ಅಧ್ಯಕ್ಷ ರಾಘವೇಂದ್ರ ಕಾಮನಟಿಗಿ ಸೇರಿದಂತೆ ಅನೇಕ ಜನ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು.ಹಾಗು ಶಿವನಗೌಡ ಪಾಟೀಲರ ಕುರಿತು ಮೆಚ್ಚುಗೆಯ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಸುರಪುರ ಠಾಣೆ ಪಿಐ ಆನಂದರಾವ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರಾಜು ಕುಂಬಾರ ನಿರೂಪಿಸಿದರು, ಶಹಾಪುರ ಸಿಪಿಐ ಶ್ರೀನಿವಾಸ ಅಲ್ಲಾಪುರ ವಂದಿಸಿದರು.

ಕಾರ್ಯಕ್ರಮದಲ್ಲಿಸಿಪಿಐಗಳಾದ ವೀರಭದ್ರಯ್ಯಸ್ವಾಮಿ,ಹನುಮರಡ್ಡೆಪ್ಪ ಸೇರಿದಂತೆ ಅನೇಕ ಜನ ಪೊಲೀಸ್ ಅಧಿಕಾರಿಗಳು ಹಾಗು ಮುಖಂಡರಾದ ಬಲಭೀಮ ನಾಯಕ ಬೈರಿಮಡ್ಡಿ,ಶಂಕರ ನಾಯಕ,ಹಣಮಂತ್ರಾಯ ಮಕಾಶಿ,ವಿರುಪಾಕ್ಷಿಗೌಡ ಕೋನಾಳ,ಶ್ರೀಕಾಂತ ಸುಬೇದಾರ,ವೆಂಕೋಬದೊರೆ ಬೊಮ್ಮನಹಳ್ಳಿ,ಉಸ್ತಾದ ವಜಾಹತ್ ಹುಸೇನ,ಮಲ್ಲಿಕಾರ್ಜುನ ಕ್ರಾಂತಿ,ಅಬ್ದುಲ ಅಲಿಂ ಗೋಗಿ,ನಾಸೀರ ಕುಂಡಾಲೆ,ಮಂಜುನಾಯಕ ಬೈರಿಮಡ್ಡಿ,ಚೆನ್ನು ದೇಸಾಯಿ, ರವಿನಾಯಕ ಬೈರಿಮಡ್ಡಿ,ಮಲ್ಲು ಬಿಲ್ಲವ್,ರಾಹುಲ್ ಹುಲಿಮನಿ,ಅಬ್ದುಲಗಫೂರ ನಗನೂರಿ,ಸೂಗುರೇಶ ವಾರದ,ಚಂದದ್ರಶೇಖರ ಹಸನಾಪುರ,ಕೆ.ಎಂ.ಪಟೇಲ, ಮಂಜುನಾಥ ಸ್ವಾಮಿ,ಬಸ್ಸಯ್ಯ ಸ್ವಾಮಿ ಸೇರಿದಂತೆ ಸುರಪುರ ಠಾಣೆಯ ಎಲ್ಲಾ ಪೇದೆಗಳು ಮತ್ತು ನೂರಾರು ಜನ ಸಾರ್ವಜನಿಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here