ಪುರಸಭೆ ಮುಖ್ಯಾಧಿಕಾರಿ ಮತ್ತು ಮಾಜಿ ಅಧ್ಯಕ್ಷರ ಮೇಲೆ ಕ್ರಮದ ಭರವಸೆ, ಧರಣಿ ಅಂತ್ಯ

0
219

ಜೇವರ್ಗಿ: ತಾಲ್ಲೂಕಿನ ವಿವಿಧ ಬಡಾವಣೆಯಲ್ಲಿರುವ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರಿ ಜಾಗವನ್ನು ಪುರಸಭೆ ವಾಪಸ್ ತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸುಮಾರು 65 ದಿನಗಳವರೆಗೆ ನಡೆಸಿದ ಪ್ರತಿಭಟನೆ ಇಂದು ಮುಕ್ತಾಯಗೊಂಡಿತು.

ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನದ ಸ್ಥಳವನ್ನು ಕೆಲವು ಪ್ರಭಾವಿಗಳು ಸ್ಥಳವನ್ನು ಕಬಳಿಸಿದ್ದಾರೆ ಎನ್ನುವ ಆರೋಪವಿದೆ. ಅದರ ವಿರುದ್ಧ ಆಮ್ ಆದ್ಮಿ ಪಕ್ಷವು ಸುಮಾರ 65 ದಿನಗಳವರೆಗೆ ಪ್ರತಿಭಟನೆ ಮಾಡುವುದರ ಮುಖಾಂತರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು .

Contact Your\'s Advertisement; 9902492681

ಪಟ್ಟಣದ ಎಲ್ಲ ಸರಕಾರಿ ಜಾಗವನ್ನು ಪುರಸಭೆಯು ಮತ್ತೆ ವಾಪಸ್ ಪಡೆದುಕೊಂಡು ಕಬಳಿಕೆಯಾದ ಜಾಗವನ್ನು ಉದ್ಯಾನವನವನ್ನಾಗಿ ಮಾರ್ಪಡಿಸಬೇಕೆಂದು ಧರಣಿ ಕೈಗೊಳ್ಳಲಾಗಿತ್ತು. ಸರ್ಕಾರಿ ಜಾಗವನ್ನು ಕಬಳಿಕೆ ಮಾಡುವವರಿಗೆ ಸಹಾಯ ಮಾಡಿದಂತಹ ಮುಖ್ಯ ಅಧಿಕಾರಿಗಳಿಗೆ ಮತ್ತು ಮಾಜಿ ಅಧ್ಯಕ್ಷರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಳೆದ ಅರವತ್ತೈದು ದಿನಗಳಿಂದ ನಿರಂತರವಾಗಿ ನಡೆಸಿದ ಪ್ರತಿಭಟನೆ ಇಂದು ಮುಕ್ತಾಯಗೊಂಡಿತು.

ಭೂ ಕಬಳಿಕೆಗೆ ಸಹಾಯ ಮಾಡಿದಂತಹ ಮಾಜಿ ಅಧ್ಯಕ್ಷರುಗಳು ಹಾಗೂ ಮುಖ್ಯ ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಹಾಗೂ ಒಂದು ತಿಂಗಳಿನಲ್ಲಿ ಒತ್ತುವರಿಯಾದ ಉದ್ಯಾನವನ್ನು ಹಾಗೂ ಅಲ್ಲಿ ಕಟ್ಟಿದ ಕಟ್ಟಡಗಳನ್ನು ನೆಲಸಮಗೊಳಿಸಿ ಮತ್ತೆ ಉದ್ಯಾನವನವನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆ ಮುಕ್ತಾಯದ ವೇಳೆಯಲ್ಲಿ ಆಮ್ ಆದ್ಮಿ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಈರಣಗೌಡ ಗುಳ್ಳಾಳ ಮಾತನಾಡಿದರು. ಈ ಪ್ರತಿಭಟನೆಗೆ ಬೆಂಬಲಿಸಿದಂತಹ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಮಾಜದ ಸಂಘಟನೆಗಳಿಗೆ ಅಭಿನಂದನೆ ತಿಳಿಸಿದರು.

ಒಂದು ತಿಂಗಳಿನೊಳಗೆ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸದಿದ್ದರೆ ಮತ್ತು ಸ್ಥಳವನ್ನು ಕಬಳಿಕೆ ಮಾಡುವವರಿಗೆ ಸಹಾಯ ಮಾಡಿದಂತಹ ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷರಾದ ಶಂಕರ ಕಟ್ಟಿಸಂಗಾವಿ, ಜೇವರ್ಗಿ ಪೀಪಲ್ಸ್ ಫೋರಂನ ಮುಖಂಡರಾದ ಡಾಕ್ಟರ್ ಮಹೇಶ್ ರಾಠೋಡ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here