ಕಲಬುರಗಿ: ಕಳೆದ ಅನೇಕ ವರ್ಷಗಳ ನಂತರ ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿಯ ಸಂಗಮೇಶ್ವರ ಮಹಿಳಾ ಮಂಡಳದ ಆವರಣದಲ್ಲಿ ಸಹೃದಯಿ ಸ್ನೇಹ ಬಳಗದ ವತಿಯಿಂದ ಮತ್ತೆ ಆಯೋಜಿಸಿರುವ *ಹರಟೆ* ಕಾರ್ಯಕ್ರಮದ ಕುರಿತಾದ ಪ್ರಚಾರಾಂದೋಲನಕ್ಕೆ ಇಂದು ಬಸವಣ್ಣನ ಪುತ್ಥಳಿ ಆವರಣದಲ್ಲಿ ಜಿಪಂ ನ ಅಧ್ಯಕ್ಷೆ ಸುವರ್ಣಾ ಮಲಾಜಿ ಹಾಗೂ ಉಪಾಧ್ಯಕ್ಷೆ ಶೋಭಾ ಸಿರಸಗಿ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು.
ಪ್ರಮುಖರಾದ ವಿಜಯಕುಮಾರ ತೇಗಲತಿಪ್ಪಿ, ಸುರೇಶ ಬಡಿಗೇರ, ನಾಗಲಿಂಗಯ್ಯಾ ಮಠಪತಿ, ರಾಜಕುಮಾರ ಉದನೂರ, ಹಣಮಂತರಾಯ ಅಟ್ಟೂರ, ರವಿ ಶಹಾಪುರಕರ್, ಅಣವೀರಯ್ಯ ಪ್ಯಾಟಿಮನಿ, ಶಿವರಂಜನ್ ಸತ್ಯಂಪೇಟೆ, ಸವಿತಾ ನಾಸಿ, ಶಿವಾನಂದ ಮಠಪತಿ, ಸಂಗಯ್ಯ ಹಿರೇಮಠ, ಸಂತೋಷ ಆಡೆ, ಸಂತೋಷ ಜಾಧವ, ಶಿವಶರಣ ಕುಸನೂರ, ಮನೋಹರ ಪೊದ್ದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.