ಸುರಪುರ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟವನ್ನು ತಡೆಯುವಂತೆ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಅಬಕಾರಿ ಇಲಾಖೆ ಜಂಟಿ ನಿರ್ದೇಶಕರಿಗೆ ಒತ್ತಾಯಿಸಿದರು.
ನಗರಕ್ಕೆ ಆಗಮಿಸಿದ ಅಬಕಾರಿ ಇಲಾಖೆಯ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿ,ಗ್ರಾಮದ ಅನೇಕ ಮನೆಗಳಲ್ಲಿ ಮತ್ತು ಕಿರಾಣಿ ಅಂಗಡಿಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ.ಇದರಿಂದ ಗ್ರಾಮದಲ್ಲಿನ ಚಿಕ್ಕ ಚಿಕ್ಕ ಯುವಕರು ಸಹ ಕುಡಿತಕ್ಕೆ ಬೀಳುತ್ತಿದ್ದು, ಗ್ರಾಮದಲ್ಲಿ ನಿತ್ಯವು ಅಶಾಂತಿ ಮೂಡುತ್ತಿದೆ ಅಲ್ಲದೆ ಕುಡುಕರ ಹಾವಳಿಯಿಂದ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಆದ್ದರಿಂದ ಕೂಡಲೆ ಮದ್ಯ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಂಡು ಗ್ರಾಮದಲ್ಲಿ ಶಾಂತಿ ನೆಲೆಸಲು ಮುಂದಾಗುವಮತೆ ಒತ್ತಾಯಿಸಿ ನಂತರ ಕಲಬುರ್ಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಎಸ್.ಕೆ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್ ಹುಸೇನ,ಗೋಪಾಲ ಬಾಗಲಕೋಟೆ ಹಾಗು ಗ್ರಾಮಸ್ಥರಾದ ಚಳಿಗೆಪ್ಪಗೌಡ ಪೊಲೀಸ್ ಪಾಟೀಲ,ಬಸವರಾಜ ಮಾಲಿ ಪಾಟೀಲ,ನಿಂಗಣ್ಣ ನಾಡಗೌಡ,ದೇವಿಂದ್ರಪ್ಪ ನಾಯಕ,ಕಿಷ್ಟಪ್ಪ ದೊರೆ,ಯಂಕೋಬ ನಾಯ್ಕೊಡಿ,ದೊಡ್ಡ ಭೀಮರಾಯಗೌಡ,ಕೆಂಚಪ್ಪ ಮಾಕಣ್ಣೋರ,ಪರಮಣ್ಣಗೌಡ ಮಾಲಿ ಪಾಟೀಲ ಸೇರಿದಂತೆ ಅನೇಕರಿದ್ದರು.