ಸುರಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಮ್ ಪ್ರೇಮಜೀ ಫೌಂಡೇಷನ್‌ನ ಸಹಯೋಗದಲ್ಲಿ ಭಾಷಾ ಮತ್ತು ಗಣಿತ ಮೇಳವನ್ನು ಸ.ಕಿ.ಪ್ರಾ. ಶಾಲೆ ದೇವಾಪುರ ಹರಿಜನವಾಡದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರಶಿಕ್ಷಣಾಧಿಕಾರಿಗಳಾದ ನಾಗರತ್ನ ಓಲೇಕಾರ ಮತ್ತು ತಾಲೂಕ ಪಂಚಾಯಿತಿ ಸದಸ್ಯರಾದ ನಂದನಗೌಡ ಪಾಟೀಲ್, ಮೇಳವನ್ನು ಉದ್ಘಾಟಿಸಿ ಮಕ್ಕಳ ಕಲಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಶೈಕ್ಷಣಿಕ ಮೇಳಗಳು ಮಕ್ಕಳ ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದಂತೆ ಅನೇಕ ಪರಿಕಲ್ಪನೆಗಳನ್ನು ಕುರಿತು ಉತ್ತಮವಾಗಿ ಅಭಿವ್ಯಕ್ತಿಸಿರುವುದನ್ನು ಅಭಿನಂದಿಸಿದರು. ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಎಪಿಏಫನ ತಾಲೂಕ ಸಂಯೋಜಕ ಸುರೇಶಗೌಡ ಸಮಾರೋಪದಲ್ಲಿ ಮಾತನಾಡುತ್ತಾ ಈ ರೀತಿಯಾದ ಶೈಕ್ಷಣಿಕ ಮೇಳಗಳನ್ನು ಗ್ರಾಮೀಣ ಭಾಗಗಳಲ್ಲಿ ಶೈಕ್ಷಣಿಕ ಮೇಳಗಳನ್ನು ಹಮ್ಮಿಕೊಳ್ಳುವುದರಿಂದ ಈ ಭಾಗದ ಮಕ್ಕಳಲ್ಲಿ ಉತ್ತಮವಾದ ಕಲಿಕೆಯನ್ನುಂಟಾಗುತ್ತದೆ. ಮಕ್ಕಳು ನಿರಂತರವಾಗಿ ಭಾಷೆ ಮತ್ತು ಗಣಿತಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಅನುಭವತ್ಮಾಕವಾಗಿ ಕಲಿತಿರುವುದಕ್ಕೆ ಈ ಮೇಳ ಸಾಕ್ಷಿಯಾಗಿದೆ. ಇಂತಹ ಶೈಕ್ಷಣಿಕ ಮೇಳಗಳಿಂದ ಮಕ್ಕಳಲ್ಲಿ ಯೋಚಿಸುವ, ಪ್ರಶ್ನಿಸುವ, ಹಾಗೂ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯಗಳ ಅಭಿವೃದ್ಧಿಯಾಗುವುದು ಎಂದರು.
ಮಕ್ಕಳು ಭಾಷೆ ಮತ್ತು ಗಣಿತ ವಿಷಯದ ಚಟುವಟಿಕೆಗಳಾದ ಸನ್ನಿವೇಶ ನೋಡಿ ವಿವರಿಸುವುದು, ಚಿತ್ರನೋಡಿ ಕಥೆ ರಚಿಸುವುದು, ಸ್ವಂತ ವಾಕ್ಯ ಬಳಸಿ, ಗಾದೆಮಾತುಗಳು, ಪದರಚನೆ, ಕಥೆಗೆ ಶೀರ್ಷಿಕೆ ಬರೆ, ಗಣಿತದ ಮೂಲಕ್ರಿಯೆಗಳು, ನನ್ನ ಸಮಯ, ಆಕೃತಿಗಳು, ಹಾವು ಏಣಿ ಆಟ ಹೀಗೆ ಅನೇಕ ವಿಷಯಗಳು ಕುರಿತು ಮಕ್ಕಳು ವಿವರಿಸಿದರು, ಈ ಮೇಳದಲ್ಲಿ ಸ.ಕಿ.ಪ್ರಾ.ಶಾಲೆ ಮುಷ್ಠೂರ ದೊಡ್ಡಿ, ಸ.ಕಿಪ್ರಾ.ಶಾಲೆ ಹಂದ್ರಾಳ, , ಸ.ಕಿ.ಪ್ರಾ ಶಾಲೆ ಗೋನಾಲ ಎಸ್.ಡಿ. ಶಾಲೆಗಳು ಚಟುವಟಿಕೆಗಳೊಂದಿಗೆ ಭಾಗವಹಿಸಿದ್ದವು, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ವೆಂಕಟೇಶ ಎಮ್. ಜಾಂಗಿನ ಗ್ರಾಮಪಂಚಾಯಿತಿ ಸದಸ್ಯರಾದ ಅಯ್ಯಪ್ಪ ಗಂಜಾಳ, ರೇಣುಕಾ, ಪ್ರಮುಖರಾದ ಚನ್ನಪ್ಪಗೌಡ, ಚನ್ನಬಸಪ್ಪ ತಳವಾರ, ಮಹಾದೇವ, ಹಸನಪ್ಪ ತಳವಾರ, ಬಿ.ಆರ್.ಪಿ ಕಾಂತೇಶ, ಸಿ.ಆರ್.ಪಿ ಯಂಕಣ್ಣ ಹುಲಕಲ್, ಮು.ಗು, ಕಾಸೀಂ ಬಾಗವಾನ, ಶಿಕ್ಷಕರಾದ ಭೀಮಣ್ಣ ಹುದ್ಧಾರ, ರಾಜಶೇಖg ಭಾಸಗಿ, ಮಲ್ಲಣ್ಣ ಸಜ್ಜನ, ರಾಜಣ್ಣ, ರಾಜಶೇಖರ ಚಿಲ್ಲಾಳ, ಶಿವಶರಣ, ರಾಜಶೇಖರ ಕಲ್ಲೂರಮಠ ರೇಖಾ, ಆರತಿ, ಪವಿತ್ರ, ಎಪಿಎಫನ ಪರಮಣ್ಣ ತೆಳಗೇರಿ, ಅಜೀಮ್, ಶಿವುಕುಮಾರ, ಅನ್ವರ ಜಮಾದಾರ ಭಾಗವಹಿಸಿದ್ದರು.