ಕಲಬುರಗಿ: ಎಂಭತ್ತೈದನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕಳೆದ ಜನವರಿ ೫ ರಂದು ಬಿಡುಗಡೆ ಮಾಡಲಾದ ಲಾಂಛನದಲ್ಲಿ ಸಾರ್ವಜನಿಕರಿಗೆ ಕವಿರಾಜ ಮಾರ್ಗ ಕೃತಿ ಓದುವ ರೀತಿಯಲ್ಲಿರುವಂತೆ ಮುದ್ರಿಸಲಾಗಿತ್ತು.
ತದನಂತರ ವಿವಿಧ ಸಮ್ಮೇಳನ ಸಮಿತಿ ಸದಸ್ಯರು ಸಾರ್ವಜನಿಕರಿಗೆ ಕೃತಿ ಓದುವ ಬದಲು ಕವಿ ಕೃತಿ ಬರೆಯುವ ರೀತಿಯಲ್ಲಿ ಲಾಂಛನ ಪರಿಷ್ಕರಿಸಬೇಕು ಎಂದು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಕವಿ ಕೃತಿ ಬರೆಯುವ ರೀತಿಯಲ್ಲಿ ಕಾಣುವಂತೆ ಪರಿಷ್ಕೃತ ಲಾಂಛನ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಪ್ರಚಾರ ಸಮಿತಿ ಅಧ್ಯಕ್ಷ ವೀರಭದ್ರ ಸಿಂಪಿ ಸ್ಪಷ್ಟನೆ ನೀಡಿದ್ದಾರೆ.