ಅವಮಾನ ಸಹಿಸಿ ಶಿಕ್ಷಣ ನೀಡಿದ ಮಹಾತಾಯಿ ಫುಲೆ: ಜಿಪಂ ಸದಸ್ಶ ಮರೆಪ್ಪ ಬಡಿಗೇರ

0
95

ಜೇವರ್ಗಿ: ಸಾವಿತ್ರಿಬಾಯಿ ಫುಲೆ ಅನೇಕ ಅವಮಾನಗಳನ್ನು ಎದುರಿಸಿ ಶಿಕ್ಷಣ ನೀಡಿ ಮಹಾನ್ ಕ್ರಾಂತಿ ಮಾಡಿದ್ದಾರೆ. ಮಹಾರಾಷ್ಟ್ರದ ಪೂನಾದಲ್ಲಿ ಜನಿಸಿದ ಸಾವಿತ್ರಿ ಫುಲೆ ದೇಶದ ಮಹಿಳೆಯರಿಗಾಗಿ ಸಲ್ಲಿಸಿದ ಸೇವೆ ಅವಿಸ್ಮರಣಿಯ ಎಂದು ಜಿಪಂ ಮಾಜಿ ಸದಸ್ಶ ಮರೆಪ್ಪ ಬಡಿಗೇರ ಅಭಿಪ್ರಾಯಪಟ್ಟರು.

ಜೇರಟಗಿ ಗ್ರಾಮದ ರೇಣುಕಾಂಬೆ ವಿದ್ಯಾಸಂಸ್ಥೆಯ 10ನೇ ವಾರ್ಷಿಕೋತ್ಸವ ಹಾಗೂ ಅಕ್ಷರದವ್ವ ಜ್ಯೋತಿ ಸಾವಿತ್ರಿಬಾಯಿ ಪುಲೆಯವರ 189 ಜಯಂತ್ಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳು ಸಹ ನಿರಂತರ ಓದಿನ ಕಡೆಗೆ ಗಮನ ಹರಿಸುವುದರ ಮೂಲಕ ಜ್ಞಾನ ಸಂಪತ್ತು ಮಾಡಬೇಕು. ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂಬುದನ್ನು ಅರಿಯಬೇಕು. ಇಂದಿನ ಮಕ್ಕಳಿಗೆ ಶಿಕ್ಷಕರು ದೇಶದ ನೈಜ ಇತಿಹಾಸ ತಿಳಿಸಬೇಕು ಎಂದರು.

Contact Your\'s Advertisement; 9902492681

ನಂತರ ಮಾತನಾಡಿದ ಸೊನ್ನ ಕಾಲೇಜಿನ ಉಪನ್ಶಾಸಕ ನಿಜಲಿಂಗ ದೊಡ್ಮನಿˌ ಸಾವಿತ್ರಿಬಾಯಿ ಫುಲೆ ಮಹಾರಾಷ್ಟ್ರದ ಪ್ರತಿಯೊಂದು ಮನೆಮನೆಗೆ ಹೋಗಿ ದೀನದಲಿತರ, ಮಹಿಳೆಯರ ಉದ್ಧಾರಕ್ಕಾಗಿ ಅಕ್ಷರ ಕಲಿಸಿದ ಮೊದಲ ಶಿಕ್ಷಕಿ ಈ ಮಹಾತಾಯಿ. ಇವರ ಸಾಧನೆ ಇಡೀ ದೇಶವೇ ಕೊಂಡಾಡುವಂಥದ್ದು ಎಂದು ಹೇಳಿದರು.

ಸರ್ವಜನರಿಗೂ ಶಿಕ್ಷಣ ನೀಡುವ ಆಸೆಯನ್ನಿಟ್ಟುಕೊಂಡ ಈ ಮಹಾತಾಯಿ ಮಹಾರಾಷ್ಟ್ರದ ಮನೆ ಮನೆಗೂ ಹೋಗಿ ಅಕ್ಷರವನ್ನು ಕಲಿಸಿದ್ದಾರೆ. ಅನೇಕರು ಇವರನ್ನು ಅವಮಾನಿಸಿದರೂ ಅದನ್ನು ಲೆಕ್ಕಿಸದೆ ಶಾಲೆಗೆ ಹೋಗಿ ಶೂದ್ರಾತಿಶೂದ್ರರಿಗೆ ಶಿಕ್ಷಣ ನೀಡಿದಂತಹ ಪುಣ್ಯ ಇವರಿಗೆ ಸಲ್ಲುತ್ತದೆ.

ಮಹಿಳೆಯರ ಸಬಲೀಕರಣಕ್ಕಾಗಿ ಫುಲೆ ದಂಪತಿ ಬಹಳಷ್ಟು ಕಷ್ಟಪಟ್ಟಿದ್ದಾರೆ. ಮಹಿಳೆಯು ಪುರುಷನಷ್ಟೇ ಸಮಾನಳು ಎಂದು ಈ ಸಮಾಜಕ್ಕೆ ತೋರಿಸುವ ಕೆಲಸವನ್ನು ಮೊಟ್ಟ ಮೊದಲ ಬಾರಿಗೆ ಮಾತೆ ಸಾವಿತ್ರಿಬಾಯಿ ಫುಲೆ ಅವರು ಮಾಡಿದ್ದಾರೆ. ವಿದ್ಶಾರ್ಥಿಗಳ ಮನಸ್ಸು ವಿಜ್ಞಾನದ ಕಡೆ ನಡೆಯಬೇಕೇ ಹೊರತು ಅಜ್ಞಾನದ ಕಡೆಯಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಖಾಪುರದ ಸಿದ್ಧರಾಮ ಶಿವಾಚಾರ್ಯˌ ಜೇರಟಗಿಯ ಮಹಾಂತಶ್ರೀ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಲ್ಲಿಕಾರ್ಜುನ್ ಕೆಲ್ಲೂರ್, ದೌಲಪ್ಪ ಮದನ್, ಭಾಗಣ್ಣ ಕೋಳಕೂರ, ಬಸವರಾಜ್ ಕಟ್ಟಿ, ರೇಣುಕಾಂಬೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿಂಗಣ್ಣ ಮಯೂರˌ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಲಕ್ಕಮ್ಮ ಮಯೂರ್ˌ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here