ಮುಂಜಾಗೃತೆ ವಹಿಸಲು ವಿದ್ಯಾರ್ಥಿನಿಯರಿಗೆ ಪಿಎಸ್‌ಐ ಬಾಪುಗೌಡ ಕರೆ

0
74

ಆಳಂದ: ಸಮಾಜದಲ್ಲಿ ವಿದ್ಯಾರ್ಥಿನಿಯರ ಹಾಗೂ ಮಹಿಳೆಯರ ಎದುರಿಸುತ್ತಿರುವ ದೌರ್ಜನ್ಯ ಹಾಗೂ ಅತ್ಯಾಚಾರ, ಕಿರುಕುಳ ತಡೆಯಲು ಪೊಲೀಸ್ ಇಲಾಖೆಯಿಂದ ಓಬ್ಬವ್ವ ಪಡೆ ರಚಿಸಲಾಗಿದ್ದು, ಈ ನಡುವೆ ಮುಂಜಾಗೃತ ಕ್ರಮವಾಗಿ ಜಾಗೃತಿ ಹೊಂದಬೇಕು. ಏನೇ ಸಮಸ್ಯೆಗಳಿದ್ದರೆ ಪೊಲೀಸರ ಗಮನಕ್ಕೆ ತಂದರೆ ಸುರಕ್ಷತೆ ಒದಗಿಸಲು ಎಲ್ಲ ರೀತಿಯಿಂದಲೂ ಕ್ರಮಕೈಗೊಳ್ಳಲಾಗುವುದು ಎಂದು ಸ್ಥಳೀಯ ಪೋಲಿಸ್ ಠಾಣೆಯ ಪಿಎಸ್‌ಐ ಬಾಪುಗೌಡ ಪಾಟೀಲ ಅವರು ಹೇಳಿದರು.

ಪಟ್ಟಣದ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡ ಓಬವ್ವ ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಹುಟುವ ಮೊದಲೇ ಹೆಣ್ಣು ಭ್ರೂಣ ಹತ್ಯೆ, ಹಾಗೂ ಅಪಹರಣ ತಡೆಯಲು ಮುಂಜಾಗೃತ ಕ್ರಮ ವಹಿಸಬೇಕು. ಬಾಲ್ಯವಿಹವಾ ಕಾನೂನಿಗೆ ಅಪರಾಧವಾಗಿದೆ. ರಸ್ತೆಯಲ್ಲಿ ಡ್ರಾಫ್ ಕೊಡುವ ನೆಪದಲ್ಲಿ ಅಪರಿಸುವ ಸಾಧ್ಯತೆ ಇರುತ್ತದೆ. ಶಂಕ್ಯವ್ಯಕ್ತವಾದಲ್ಲಿ ಉಡಾಳರ ಕಿರುಕುಳ ತೊಂದರೆ ಸಹಿಸದೆ ಗಮನಕ್ಕೆ ತರಬೇಕು. ಕಾಲೇಜು ಓದುವಿನೊಂದಿಗೆ ಕಾನೂನು ಅರಿತು ಉನ್ನತ ಗುರಿ ತಲುಪಬೇಕು ಎಂದು ಅವರು ಸಲಹೆ ನೀಡಿದರು.

ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸೇರಿ ಕಾಲೇಜಿನ ಆವರಣದಲ್ಲಿ ಉಡಾಳರ ಉಪಟಳ ಹೆಚ್ಚಾಗಿದೆ. ಈ ಕುರಿತು ನಿಯಂತ್ರಿಸಬೇಕು ಎಂದು ಪಿಎಸ್‌ಐ ಅವರ ಗಮನಕ್ಕೆ ತಂದರು. ಈ ಕುರಿತು ಸಮಸ್ಯೆ ನಿವಾರಿಸಲು ಪೊಲೀಸ್ ಗಸ್ತು ಮೂಲಕ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಬಾಪುಗೌಡ ಅವರು ಭರವಸೆ ನೀಡಿದರು.

ಕಾಲೇಜಿನ ಹಿರಿಯ ಉಪನ್ಯಾಸಕ ಮಹಾದೇವಪ್ಪ ಮುರಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಎಎಸ್‌ಐ ಪ್ರಭಾವತಿ ಘಂಟೆ, ಪೋಲಿಸ್ ಪದೇ ಚಂದ್ರಶೇಖರ ಕಾರಬಾರಿ, ಮಶಾಕ್ ನದಾಫ್, ಸಿದ್ಧರಾಮ ಬಿರಾದಾರ, ತುಳಜಮ್ಮ, ರಮಂಮಾ, ಶರಣಮ್ಮಾ, ಉಪನ್ಯಾಸಕ ಮಂಜುನಾಥ, ಸುಮಂಗಲಾ ನಾಟಿಕರ್, ಅಭಿಯಾ ಬೇಗಂ, ಅಂಬಾದಾಸ ಜಾಧವ, ಮಹಾನಂದ ಮತ್ತಿತರರು ಉಪಸ್ಥಿತರಿದ್ದರು.

ಸ್ವಾಗತ ಗೀತೆ ವಿದ್ಯಾರ್ಥಿನಿ ಕಾವೇರಿ ಮತ್ತು ವೈಷ್ಣವಿ ಹಾಡಿದರು. ಆಂಗ್ಲ ಉಪನ್ಯಾಸಕ ಶ್ರೀಶೈಲ ಮಾಳಗೆ ನಿರೂಪಿಸಿದರು. ಜಟಿಂಗರಾಯ ಶಖಾಪೂರೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here