ಕೋಲಿ ಸಮಾಜ ಎಸ್‌ಟಿಗೆ ಸೇರಿಸಿದರೆ ನಮ್ಮ ತೊಡೆ ಚರ್ಮದಿಂದ ಸಿಎಂಗೆ ಪಾದರಕ್ಷೆ ಮಾಡಿಸಿಕೊಡ್ತೀವಿ: ಚಿಂಚನಸೂರ್

0
56

ಹಾವೇರಿ: ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಿದರೆ ನನ್ನ ಮತ್ತು ನನ್ನ ಪತ್ನಿಯ ತೊಡೆ ಚರ್ಮದಿಂದ ಸಿಎಂಗೆ ಪಾದರಕ್ಷೆ ಮಾಡಿಸಿಕೊಡ್ತೀವಿ ಎಂದು ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಪುನರುಚ್ಛರಿಸಿದ್ದಾರೆ.

ಹಾವೇರಿ ತಾಲೂಕಿನ ನರಸೀಪುರದಲ್ಲಿ ನಡೆಯುತ್ತಿರುವ ಅಂಬಿಗರ ಚೌಡಯ್ಯನವರ ಜಯಂತ್ಶುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಅಂಬಿಗರು ನಂಬಿಕಸ್ಥರು. ಹೊಳೆ ದಾಟಿಸುತ್ತೇವೆ. ಅಂಬಿಗರು ಯಾರನ್ನೂ ಮುಳುಗಿಸೋದಿಲ್ಲ. ಕೋಲಿ ಸಮಾಜವನ್ನು ಎಸ್.ಟಿಗೆ ಸೇರಿಸಿದರೆ ಮುಂದಿನ ಐದು ವರ್ಷವೂ ನೀವೇ ಮುಖ್ಶಮಂತ್ರಿ ಎಂದರು. ಕೂಡಲೇ ದೆಹಲಿಗೆ ಹೋಗಿ ಪ್ರಧಾನಿ ಮತ್ತು ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಎಸ್‌ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು.

Contact Your\'s Advertisement; 9902492681

ನಂತರ ಮಾತನಾಡಿದ ಬಿಎಸ್ ವೈˌ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದಷ್ಟೆ ಹೇಳಿ ನುಣುಚಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here