ಕಲಬುರಗಿ: ಇಂದು ಕಲಬುರ್ಗಿ ನಗರದಲ್ಲಿ ರಿಪಬ್ಲಿಕನ್ ಯೂತ್ ಫೆಡರೇಷನ್ ಸಂಘಟನೆಯ ಮುಖ್ಯ ಕೇಂದ್ರ ಕಛೇರಿಯನ್ನು ಬಾಮಸೆಫ್ ನ ರಾಷ್ಟ್ರಾಧ್ಯಕ್ಷರಾದ ಮಾನ್ಯವರ್ ವಾಮನ ಮೇಶ್ರಾಮ್ ರವರ ಮೂಲಕ ಉದ್ಘಾಟನೆ ಮಾಡಲಾಯಿತು.
ಕಛೇರಿ ಉದ್ಘಾಟಿಸಿ ಮಾತನಾಡಿದ ವಾಮನ ಮೇಶ್ರಾಮ್ ರವರು, ಅಂಬೇಡ್ಕರ್ ರವರ ಗುರಿ ಮತ್ತು ಉದ್ದೇಶಗಳನ್ನು ಸಹಕಾರ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡೋಣ ಮತ್ತು ರಿಪಬ್ಲಿಕನ್ ಯೂತ್ ಫೆಡರೇಷನ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳಿಗೆ ಎಲ್ಲಾ ಸಹಕಾರ ಬೆಂಬಲ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಈ ವೇಳೆ ಹಿಂದುಳಿದ ವರ್ಗಗಳ ಮೊರ್ಚಾದ ರಾಷ್ಟ್ರಾಧ್ಯಕ್ಷರಾದ ಮಾನ್ಯವರ್ ವಿಕಾಸ ಚೌಧರಿ, ಬಾಮಸೆಫ್ ರಾಜ್ಯಾಧ್ಯಕ್ಷ ಮಾನ್ಯವರ್ ಸುಭಾಷ್ ಶೀಲವಂತ, ಬಿಎಸ್ಪಿ ರಾಜ್ಯ ಮುಖಂಡರಾದ ಶ್ರೀ ಸೂರ್ಯಕಾಂತ ನಿಂಬಾಳಕರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶ್ರೀ ಸುರೇಶ್ ಬಡಿಗೇರ್ ರವರಿಗೆ ಫೇಡರೇಶನ್ ಅಧ್ಯಕ್ಷರಾದ ಹನುಮಂತ ಇಟಗಿ ರವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಫೇಡರೇಶನ್ ನ ಸಂತೋಷ ಮೇಲ್ಮನಿ, ಮಾಜಿ ಮಹಾಪೌರರಾದ ಸೋಮಶೇಖರ್ ಮೇಲಿನಮನಿ, ರುಕ್ಮೇಶ ಭಂಡಾರಿ, ಮಿಲಿಂದ ಸನಗುಂದಿ, ದಿನೇಶ್ ದೊಡ್ಡಮನಿ, ಅನೀಲ ಟೆಂಗಳಿ, ನಾಗೇಂದ್ರ ಕೆ ಜವಳಿ, ರಾಣು ಮುದ್ಧನಕರ್, ಸತೀಶ ಮಾಲೆ, ಸಿದ್ಧು ಚಿಂಚನಸೂರ, ಅಂಬರೀಷ ಅಂಬಲಗಿ, ವಿಜಯ ಸಿಂಧೆ, ಸಂಜುಕುಮಾರ ಮೇಲಿನಮನಿ, ಮಲ್ಲು ಹೊಸಮನಿ, ವಿಜಯಕುಮಾರ ಜಿಡಗಿ, ರಾಹುಲ್ ಸಂಘ, ಅಜಯ್ ಕೋರಳ್ಳಿ ವಿನೋದ ಕಾಂಬಳೆ, ಬಾಮಸೆಫ್ ನ ಹಿರಿಯ ಮುಖಂಡರಾದ ಸುಭಾಷ್ ನಾಟೇಕರ ಅಲ್ಲದೇ ಪ್ರಮುಖ ಮುಖಂಡರು ಹಾಗು ನೂರಾರು ಸಂಖ್ಯೆಯಲ್ಲಿ ಫೆಡರೆಷನ್ ನ ಕಾರ್ಯಕರ್ತರು ಉಪಸ್ಥಿತರಿದ್ದರು.