ಕಲಬುರಗಿ: ಅಂಕಗಳ ಭರಾಟೆಯಲ್ಲಿ ಕೇವಲ ಶಿಕ್ಷಣ ನೀಡುವುದರತ್ತ ಎಲ್ಲರ ಚಿತ್ತ ಹರಿಯುತ್ತಿದೆ. ಶಿಕ್ಷಕರು ವಿದ್ಯಾಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳು ಮತ್ತು ಮತ್ತೊಬ್ಬರ ಮೇಲೆ ಅವಲಂಬಿತವಾಗದೆ, ಸ್ವಾವಲಂಬನೆಯುತ ವಾಗಿ ಬದುಕುವ ಕಲೆಯನ್ನು ಕಲಿಸಿಕೊಟ್ಟರೆ, ಖಂಡಿತವಾಗಿಯೂ ಅಂತಹ ಶಿಕ್ಷಕರನ್ನು ವಿದ್ಯಾಥಿಗಳು ಎಂದಿಗೂ ಮರೆಯುವುದಿಲ್ಲ. ಅಂತಹ ಶಿಕ್ಷಕರು ಸಮಾಜಕ್ಕೆ ಗುರುವಾಗಲು ಸಾಧ್ಯವಾಗುತ್ತದೆಯೆಂದು ಚಿತ್ತಾಪುರ ತಾಪಂ ಇಒ ಅನಿತಾ ಕೆ. ಶಿಕ್ಷಕರಿಗೆ ಸಲಹೆ ನೀಡಿದರು.
ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಜರುಗಿದ ’ಜ್ಞಾನ ಸಂಸ್ಥೆಯ ೧೪ನೇ ವಾಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಕರು ವಿದ್ಯಾಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಗುರುವಿನ ಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು.ತಾಳ್ಮೆ, ಶಾಂತಚಿತ್ತದಿಂದ ಮಕ್ಕಳ ಮಟ್ಟಕ್ಕೆ ಪರಿಣಾಮಕಾರಿಯಾಗಿ ಬೋಧಿಸಬೇಕು. ವಿದ್ಯಾರ್ಥಿಗಳು ಕೂಡಾ ಗುರು-ಹಿರಿಯರು, ಪಾಲಕ-ಪೋಷಕರಿಗೆ ಗೌರವ ನೀಡಬೇಕು. ಟಿ.ವಿ, ಮೋಬೈಲ್‌ಗಳಿಂದ ದೂರವಿರಿ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದ್ದು, ಅದನ್ನು ಸುಂದರವಾಗಿ ರೂಪುಗೊಳಿಸಿಕೊಳ್ಳಿ. ೩೭೧ನೇ ಕಲಂನ ಸದುಪಯೋಗಪಡಿಸಿಕೊಂಡು ಉನ್ನತವಾದ ಸಾಧನೆಯನ್ನು ಮಾಡಿರೆಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ವಿದ್ಯಾನಿಕೇತನ ಸಂಸ್ಥೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಮಾತನಾಡಿ, ವಿದ್ಯಾಥಿಗಳು ಸ್ವಯಂ ಪ್ರಯತ್ನವಾದಿಗಳಾಗಬೇಕು. ಪಾಲಕರು ತಮ್ಮ ಮಕ್ಕಳ ಭಾವನೆ, ಆಸಕ್ತಿ, ಗುರಿಯನ್ನು ಅರ್ಥಮಾಡಿಕೊಳ್ಳಬೇಕು. ಅವರು ಏನಾಗಬೇಕೆಂದು ನೀವೆ ನಿರ್ಧರಿಸಬೇಡಿ. ಇಂಜಿನೀಯರ್, ಡಾಕ್ಟರ್ ಕೋರ್ಸಗಳ ಬಗ್ಗೆ ಅತಿ ವ್ಯಾಮೋಹ ಬೇಡ. ಇನ್ನೂ ಅನೇಕ ಉತ್ತಮ ಕೋರ್ಸುಗಳತ್ತ ಗಮನಹರಿಸಿ. ಬಾಲ್ಯದಿಂದಲೆ ಅವರಲ್ಲಿ ಮೌಲ್ಯಗಳನ್ನು ಬಿತ್ತಿ ಹೊರತು ಮೂಢನಂಬಿಕೆಯನ್ನಲ್ಲ. ಮಕ್ಕಳು ನಿಮ್ಮನ್ನು ಅನುಕರಣೆ ಮಾಡುವುದರಿಂದ ಮಾದರಿಯುತವಾಗಿ ನಡೆದುಕೊಳ್ಳಿಯೆಂದು ನುಡಿದರು.
ಸಂಸ್ಥೆಯ ಸಂಸ್ಥಾಪಕ ಸಂಗಮೇಶ ಸರಡಗಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಬೇಕು. ಮಾದರಿಯುತ ಬದುಕು ನಮ್ಮದಾಗಬೆಕು. ತಮ್ಮ ವಿದ್ಯಾರ್ಥಿಗಳನ್ನು ತಮಗಿಂತಲೂ ಉನ್ನತ ಮಟ್ಟಕ್ಕೆ ಬೆಳೆಸಬೇಕು. ಗಣಿತ ಸೇರಿದಂತೆ ಯಾವುದೇ ವಿಷಯ ಆಸಕ್ತಿಯಿಂದ ಕಲಿತರೆ ಸರಳವಾಗುತ್ತದೆ. ನಮ್ಮ ಭಾಗದ ಪ್ರತಿಭೆಗಳ ಸಂಖ್ಯೆ ಹೆಚ್ಚಾಗಬೇಕಾಗಿದೆಯೆಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಸಂಸ್ಥೆ ಸಂಗಮೇಶ ಸರಡಗಿ ರಚಿಸಿದ ವತಿಯಿಂದ ೯ ಮತ್ತು ೧೦ನೇ ತರಗತಿಯ ವಿಜ್ಞಾನ, ಗಣಿತ ಪುಸ್ತಕಗಳನ್ನು ಬಿಡುಗಡೆಗೊಳಿಸಿಲಾಯಿತು. ಇದೇ ಸಂಸ್ಥೆಯಿಂದ ಕಳೆದ ಸಾಲಿನಲ್ಲಿ ಅತಿ ಹೆಚ್ಚಿನ ಅಮಕಗಳೊಂದಿಗೆ ಉತ್ತೀರ್ಣರಾದ ೮೩ ವಿರ್ದ್ಯಾಗಳಿಗೆ ಸತ್ಕರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸಧೀರ ಜಗತಿ, ಶ್ರೀನಿವಾಸ ಪಾಟೀಲ, ಸಂತೋಷ ಕೆ., ವಿನೋಧ, ಸಂಜೀವಕುಮಾರ ಹೇರೂರ, ಅನುರಾಧಾ, ಮಳಯ್ಯ, ಮಂಜುನಾಥ, ಲೋಹಿತ, ಲಕ್ಷ್ಮೀಕಾಂತ, ಸಯ್ಯದ್, ಎಸ್.ಎಂ.ಕಂಬಾರ, ಸತೀಶ, ರಾಮಮ್ಮ, ಪ್ರೊ.ಎಚ್.ಬಿ.ಪಾಟೀಲ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾಥಿಗಳು, ಪಾಲಕ-ಪೋಷಕರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಜಾವೇದ ಸ್ವಾಗತಿಸಿದರು. ರಾಜು, ಶಿವಕಾಂತ ಚಿಮ್ಮಾ ನಿರೂಪಿಸಿದರು. ವೀರೇಶ ಬೋಳಶೆಟ್ಟಿ ನರೋಣಾ ವಂದಿಸಿದರು.