ಕಲಬುರಗಿ: ಸಂಸದ ಕಚೇರಿಯ ಮುಂದೆ ಕಳೆದ 9 ದಿನಗಳಿಂದ ತೊಗರಿ ಬೆಳೆಗೆ 7500 ಹೆಚ್ಚಿಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತಿದ್ದ ಹೋರಾಟಗಾರರನ್ನು ಇಂದು ಸಂಜೆ ಪೊಲೀಸರು ಬಂಧಿಸಲಾಗಿದ್ದು, ಎರಡು ಗಂಟೆಯ ನಂತರ ಹೋರಾಟಗಾರರನ್ನು ಬಿಡುಗಡೆ ಮಾಡಲಾಯಿತು.
ಬಿಡುಗಡೆಯಾದ ರೈತ ಹೋರಾಟಗಾರರು ತೊಗರಿ ಸಮಸ್ಯೆ ಬಗೆ ಹರಿಸುವವರೆಗೆ ತಮ್ಮ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯಾದಲ್ಲಿ ಬಿಜೆಪಿ ಸರಕಾರ ವಿದ್ದರು ಸಂಸದರು ರೈತರ ಬೇಡಿಕೆಗಳಲ್ಲಿ ಈಡೇರಿಸಕ್ಕಾಗದೇ ಹೋರಾಟಗಾರರನ್ನು ಬಂಧಿಸಿ ಹೋರಾಟ ಹತ್ತಿಕುವ ಯತ್ನಿಸುತಿದ್ದು ಇದು ಖಂಡನಿಯ, ಕೇಂದ್ರ ಮತ್ತು ರಾಜ್ಯ ಸರಕಾರದೊಂದಿಗೆ ಚರ್ಚಸಿ ರೈತರಿಗೆ ನ್ಯಾಯ ಒದಗಿಸಬೇಕು.
– ಮಾರುತಿ ಮಾನ್ಪಡೆ, ರೈತ ಮುಖಂಡ
ತೊಗರಿ ಖರೀದಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಇದರಿಂದ ಸಮಸ್ಯೆ ಬಗೆ ಹರಿವುದಿಲ್ಲ, ಬೆಳೆ ರಾಶಿಯಾಗಿ ಒಂದು ತಿಂಗಳು ಕಳೆದರು ಇದುವರೆಗೆ ಖರೀದಿ ಮಾಡುತಿಲ್ಲ, ರೈತರಿಂದ 10 ಕ್ವೀಂಟಲ್ ಮಾತ್ರ ತೊಗರಿ ಖರೀದಿಸುವ ಪ್ರಕ್ರಿಯೆ ನಡೆಯುತಿದೆ. ಕನಿಷ್ಠ 25 ಕ್ವೀಂಟಲ್ ತೊಗರಿ ಖರೀದಿಸಬೇಕೆಂದು ಹೋರಾಟಗಾರರ ಬೇಡೆಕೆಯಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪೀಪಲ್ಸ್ ಫೋರಂ ಸಂಸ್ಥಾಪಕ ಡಾ. ಅಜಗರ್ ಚುಲಬುಲ್, ಜೆ.ಡಿ.ಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್, ಪ್ರಾಂತ್ಯ ರೈತ ಮುಖಂಡ ಶರಣಬಸಪ್ಪ ಮಮಶೇಟಿ, ಸೇರಿದಂತೆ ಇತರ ರೈತ ಹೋರಾಟಗಾರರು ಇದ್ದರು.