ಸುರಪುರ: ಸಗರನಾಡಿನ ಶಕ್ತಿ ದೇವತೆಯಾದ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರೆಯು ಮುಂಬರುವ ಫೆ.೬ ರಂದು ನಡೆಯಲಿದೆ ಜಾತ್ರಾ ಮೊಹೊತ್ಸವದ ಅಂಗವಾಗಿ ದೇವಿಗೆ ವಿಶೇಷ ಪೊಜೆ ಅಲಂಕಾರಗಳು ನೇರವೆರುವವು ನಂತರ ಅಂದಿನ ದಿನವು ದೇವಿಯನ್ನು ಗಂಗಾಸ್ನಾನಾದಿ ಕಾರ್ಯಕ್ರಮವು ಜರುಗುವವು ಎಂದು ದೇವಸ್ಥಾನದ ಅರ್ಚಕರಾದ ಸಂಜೀವಪ್ಪ ಪೂಜಾರಿ ತಿಳಿಸಿದರು.
ತಾಲೂಕಿನ ಚಿಕ್ನಳ್ಳಿ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಆವರ್ಣದಲ್ಲಿ ದೇವಿಯ ಜಾತ್ರಾಮೊಹೊತ್ಸವದ ನಿಮಿತ್ಯ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಫೆ.೭ ರಂದು ಗ್ರಾಮದಲ್ಲಿ ದೇವಿಯ ಪಲ್ಲಕ್ಕಿಯ ಉತ್ಸವ ಹಾಗೂ ಡೊಳ್ಳಿನ ವಾಲಗಾ ಹಾಗು ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.
ಭೀಮಣ್ಣ ಕಟ್ಟಿಮನಿ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ, ಈರಣ್ಣಗೌಡಪೊಲೀಸ್, ವೆಂಕೋಬ ಹುಲಕಲ್, ನಂದನಗೌಡ ಮಾಲಿಪಾಟೀಲ್, ವೆಂಕೋಬ ಹುಣಸಗಿ, ಪರಶುರಾಮ ಬಿರಾದರ, ನಿಂಗಪ್ಪ, ರೇಣಕಪ್ಪ ಹರವಾಳ ಇನ್ನಿತರರಿದ್ದರು.