ಸಂವಿಧಾನ ಅರ್ಥಮಾಡಿಕೊಳ್ಳದಿದ್ದರೆ ದೇಶಕ್ಕೆ ಗಂಡಾಂತರ: ಡಾ.ಅಪ್ಪುಗೇರೆ

0
151

ಜೇವರ್ಗಿ: ಸಂವಿಧಾನ ರಚಿಸುವಾಗ ಪ್ರತಿಯೊಂದು ವಿಷಯವನ್ನು ಕುಲಂಕಷವಾಗಿ ಚರ್ಚಿಸಿ, ಸಾವಿರಾರು ಪ್ರಶ್ನೆಗಳಿಗೆ ಉತ್ತರ ನೀಡುವುದರ ಮೂಲಕ ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ರಚಿಸಿದ್ದಾರೆ ಎಂದು ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪುಗೇರೆ ಸೋಮಶೇಖರ ಅಭಿಪ್ರಾಯಪಟ್ಟರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕ ದಲಿತ ಸಮನ್ವಯ ಸಮಿತಿ ವತಿಯಿಂದ ಸಂವಿಧಾನ ಜಾರಿಯಾದ ದಿನ ಹಾಗೂ ಬೌದ್ಧ ಧಮ್ಮ ಪ್ರಚಾರ ಅಭಿಯಾನ ಕುರಿತು ರವಿವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶದ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ದೇಶದ ಜನರ ಮೇಲೆ ಧ್ವೇಷವನ್ನು ಭಿತ್ತಲಾಗುತ್ತಿದೆ. ಸಮಸ್ತ ಭಾರತಿಯರು ಸಂವಿಧಾನವನ್ನು ಓದುವುದರ ಮೂಲಕ ಡಾ.ಬಾಬಾ ಸಾಹೇಬರ ಚಿಂತನೆಗಳು ಮತ್ತು ಅವರ ಕಲ್ಪನೆಯ ಭಾರತವನ್ನು ಅರ್ಥಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಸಂವಿಧಾನವನ್ನು ಹಂತ ಹಂತವಾಗಿ ನಾಶ ಮಾಡಲಾಗುತ್ತಿದೆ. ಮೀಸಲಾತಿ, ದೌರ್ಜನ್ಯ ಕಾಯ್ದೆಗಳು, ಸಮಾನತೆಯನ್ನು ನಾಶ ಮಾಡಲು ಹೊರಟಿರುವುದು ಕಳವಳಕಾರಿ ಎಂದರು. ಈಗಾಗಲೇ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳ ಶಿಷ್ಯವೇತನಗಳಿಗೆ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದರು. ನಂತರ ಮಾತನಾಡಿದ ಪ್ರಾಚಾರ್ಯ ಡಾ. ವಿಜಯಕುಮಾರ ಸಾಲಿಮನಿ, ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಮಾಡುವುದರ ಮೂಲಕ ಪ್ರಭುದ್ಧ ಭಾರತ ನಿರ್ಮಾಣ ಮಾಡಬೇಕು. ಬಾಬಾ ಸಾಹೇಬರ ಚಿಂತನೆಗಳು ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.

ನಂತರ ಮಾತನಾಡಿದ ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ, ಭಾರತದಲ್ಲೇ ಹುಟ್ಟಿದ ಮಾನವೀಯ ಧರ್ಮವಾದ ಬೌದ್ಧ ಧಮ್ಮವನ್ನು ಜಗತ್ತಿನ ನಾನಾ ದೇಶಗಳಾದ ಚೀನಾ, ಜಪಾನ, ಬ್ಯಾಂಕಾಕ್, ಹಾಂಕಾಂಗ್, ಟಿಬೆಟ್, ಥೈಲ್ಯಾಂಡ, ಶ್ರೀಲಂಕಾ, ಇತ್ಯಾದಿ ರಾಷ್ಟ್ರಗಳು ಜಾತಿ ರಹಿತ, ವರ್ಗರಹಿತ, ವರ್ಣರಹಿತ, ಸಮಾಜವನ್ನು ಸ್ಥಾಪಿಸಿ ಮುಂದುವರೆದ ರಾಷ್ಟ್ರಗಳಾಗಿವೆ. ಹಾಗಾಗಿ ಭಾರತೀಯರಾದ ನಾವು ಕೂಡಾ ಹಿಂದೂ ಧರ್ಮದಿಂದ ಶೋಷಿತರಾದ ನಾವು ಬೌದ್ಧ ಧಮ್ಮವನ್ನು ಅನುಸರಿಸುವುದರ ಮೂಲಕ ಬುದ್ಧನ ಚಿಂತನೆಗಳನ್ನು ಮೈಗೂಡಿಸಿಕೊಂಡು ಭಾರತವನ್ನು ಪ್ರಭುದ್ದ ರಾಷ್ಟ್ರವನ್ನಾಗಿ ನಿರ್ಮಾಣ ಮಾಡುವುದಕ್ಕೆ ಪಣ ತೊಡುವ ಉದ್ದೇಶದಿಂದ ಬೌದ್ಧ ಧಮ್ಮ ಪ್ರಚಾರ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮವನ್ನು ಜಿಪಂ ಸದಸ್ಯ ಕಮಲಾಬಾಯಿ ಮರೆಪ್ಪ ಬಡಿಗೇರ ಅವರು ಸಂವಿಧಾನದ ಪುಸ್ತಕವನ್ನು ನೆರೆದಿದ್ದ ಜನರತ್ತ ತೋರಿಸುವುದರ ಮೂಲಕ ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ ಅಧ್ಯಕ್ಷತೆ ವಹಿಸಿದ್ದರು. ಮಲ್ಲಣ್ಣ ಕೊಡಚಿ ಸ್ವಾಗತಿಸಿದರು. ದವಲಪ್ಪ ಮದನ ಪ್ರಾಸ್ತಾವಿಕ ಮಾತನಾಡಿದರು. ಶರಣು ಬಡಿಗೇರ ನಿರೂಪಿಸಿದರು. ಶ್ರೀಹರಿ ಕರಕಿಹಳ್ಳಿ ವಂದಿಸಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮರೆಪ್ಪ ಬಡಿಗೇರ, ದಲಿತ ಮುಖಂಡರಾದ ಭೀಮರಾಯ ನಗನೂರ, ಶಾಂತಪ್ಪ ಯಲಗೋಡ, ಬಾಬು ಹಿಪ್ಪರಗಿ, ಪ್ರಧಾನಿ ಅಂಬರಖೇಡ, ಸುಭಾಸ ಚನ್ನೂರ, ನಿಜಲಿಂಗ ದೊಡ್ಡಮನಿ, ಪುಂಡಲೀಕ ಗಾಯಕವಾಡ, ರವಿ ಕುಳಗೇರಿ, ಮರೆಪ್ಪ ಬೇಗಾರ, ಡಾ. ಅಶೋಕ ದೊಡ್ಡಮನಿ, ರಮೇಶ ಆಲೂರ, ರೇವಣಸಿದ್ದ ಎಸ್ ಹೆಗಡೆ, ಮಲ್ಲಿಕಾರ್ಜುನ ಕಟ್ಟಿ ಕೆಲ್ಲೂರ, ಗುರಣ್ಣ ಕಾಚಾಪೂರ, ಶಿವಯೋಗಿ ಯಾಳವಾರ, ಗುರಣ್ಣ ಐನಾಪೂರ, ಬೆಣ್ಣೆಪ್ಪ ಕೊಂಬಿನ, ರಾಜಶೇಖರ ಶಿಲ್ಪಿ, ಶಾಂತಪ್ಪ ಕಟ್ಟಿಮನಿ, ಗೊಲ್ಲಾಳಪ್ಪ ಕಡಿ, ಶ್ರೀಮಂತ ಧನಕರ್, ಚಂದ್ರು ಕೊಡಚಿ, ಮಲ್ಲಪ್ಪ ಹೊಸಮನಿ ಮಾರಡಗಿ, ಶಿವುಬಾಯಿ ಕೊಂಬಿನ, ಮಲ್ಲಮ್ಮ ಕೊಂಬಿನ್, ಜಗದೇವಿ ಜಟ್ನಾಕರ, ದೊಡ್ಡೇಶ ಕೊಂಬಿನ, ಸಂಗಮೇಶ ಕೊಂಬಿನ, ದೊಡ್ಡೇಶ ಬಾರಿಗಿಡ, ಮರೆಪ್ಪ ಕೂಡಲಗಿ, ಯಶವಂತ ಆಂದೊಲಾ, ಚನ್ನಪ್ಪ ಮಂದೇವಾಲ, ಶ್ರೀಶೈಲ ಮಂದೇವಾಲ, ಚಿದಾನಂದ ಇಟಗಾ, ಹೈಯಾಳಪ್ಪ ಗಂಗಾಕರ, ಬಸವರಾಜ ಹೆಗಡೆ, ಮಹಾದೇವ ಕೋಳಕೂರ, ಮಲ್ಕಣ್ಣ ಶಿಡ್ಲಿ, ಸೈದಪ್ಪ ಇಜೇರಿ, ಸಿದ್ದಪ್ಪ ಆಲೂರ, ಭಾಗಣ್ಣ ಸಿದ್ನಾಳ, ರಾಯಪ್ಪ ಬಾರಿಗಿಡ, ವಿಶ್ವರಾಧ್ಯ ಮಾಯಿ ಗಂವ್ಹಾರ, ಸೋಮಶೇಖರ ಗೋಪಾಲಕರ್, ಸಿದ್ರಾಮ ಕಟ್ಟಿ, ಬಾಲಣ್ಣ ಕೊಬ್ಬಿನ, ಬಸಣ್ಣ ಸರಕಾರ, ಸಂಗಣ್ಣ ಗುಡೂರ, ಗುರಲಿಂಗಪ್ಪ ಗುಡೂರ, ಶಂಕರಲಿಂಗ ಕಟ್ಟಿ, ಸಿದ್ರಾಮ ಯಳಸಂಗಿ, ಗಂಗುಬಾಯಿ ಮಂದ್ರವಾಡ, ಭಾಗಣ್ಣ ರದ್ದೇವಾಡಗಿ, ಭೀಮರಾಯ ಬಳಬಟ್ಟಿ, ಶಾಂತಕುಮಾರ ಜಮಖಂಡಿ, ಗೌತಮ ಇಟಗಾ, ಭೀಮಶಾ ಸಾಗರ, ಮಲ್ಲಿಕಾರ್ಜುನ ಹಂದನೂರ, ಕಾಂತು ಮುರಗಾನೂರ, ಮರೆಪ್ಪ ರಂಜಣಗಿ, ಶರಣಬಸವ ಬೊಮ್ಮನಳ್ಳಿ ಸೇರಿದಂತೆ ಅನೇಕರು ಇದ್ದರು. ಶಿವಶರಣಪ್ಪ ಮಾರಡಗಿ, ಮಹೇಶ ಕೋಕಿಲೆ, ಭಾಗಣ್ಣ ಕಟ್ಟಿ, ಶರಣಬಸಪ್ಪ ಲಖಣಾಪೂರ, ಶಿವಕುಮಾರ ಗೋಲಾ, ದೇವಿಂದ್ರಪ್ಪ ವರ್ಮಾ, ಅಮೀನಪ್ಪ ಮಂದೇವಾಲ, ಬಸವರಾಜ ಇಜೇರಿ, ನಿಂಗಪ್ಪ ಗೂಗಿಹಾಳ, ಭೀಮಾಶಂಕರ ಹರನಾಳ, ಡಾ. ಪ್ರಕಾಶ ಬಡಿಗೇರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here