ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ರಾಷ್ಟ್ರಪ್ರೇಮ ಬೆಳೆಸಿ : ಚನ್ನರ್ವೀಶಿವಾಚಾರ್ಯರು

0
42

ಕಲಬುರಗಿ: ವಿದ್ಯೇಯೇ ಬಾಳಿನ ಬೆಳಕು ಎಂಬ ನಾಣ್ಣುಡಿಯಂತೆ ಅಪಾರ ಅಭ್ಯಾಸ ಮಾಡಿ ಜ್ಞಾನ ಹೊಂದುವುದರ ಜೊತೆಗೆ ರಾಷ್ಟ ಪ್ರೇಮ ಹಾಗೂ ರಾಷ್ಟ ಭಕ್ತಿ ಬೆಳೆಸುವುದು ಅವಶ್ಯವಾಗಿವೆ ಎಂದು ಷ.ಬ್ರ.ಡಾ ಚನ್ನವೀರಶಿವಚಾರ್ಯರು ಆರ್ಶೀವಚನ ನೀಡಿದರು.

ರಾಮ ನಗರದ ಶ್ರೀ ಗುರು ಸಂಗಮೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೧೦ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು, ಒಬ್ಬ ಕೋಟ್ಯಾದಿಪತಿಗೆ ಕೇವಲ ತನ್ನ ದೇಶ ಮತ್ತು ರಾಜ್ಯದಲ್ಲಿ ಮಾತ್ರ ಬೆಲೆ ಇರುತ್ತದೆ, ಆದರೆ ಜ್ಞಾನಿಗಳಿಗೆ ದೇಶದಲ್ಲಿ ಅಷ್ಟೆ ಅಲ್ಲ ಹೊರದೇಶದಲ್ಲೂ ಕೂಡ ಬೆಲೆ ಇರುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಮಹಾಶಿಯೋಗಿ ಮ.ನಿ.ಪ್ರ ಗುರುನಂಜೇಶ್ವರ ಅವರು ಮಾತನಾಡಿ, ಸಂಸ್ಥೆಯ ಹತ್ತು ವರ್ಷದ ಸಾಧನೆ ಯಾವ ರೀತಿ ಇದೆ ಎಂದರೆ ೧ ಅಂದರೆ ಪ್ರ ಬ್ರಹ್ಮ ೨ ಅಂದರೆ ಶಿವ ಶಕ್ತಿ ೩ ಅಂದರೆ ಗುರು ಬ್ರಹ್ಮ ವಿಷ್ಣು ೪ ಅಂದರೆ ಚರ್ತ್ರುವೇದ ೫ ಅಂದರೆ ಪಂಚ ಆಚಾರ್ಯಗಳು ೬ ಅಂದರೆ ಘಟಸ್ಥಲಗಳು ೭ ಅಂದರೆ ಸಪ್ತಸಾಗರಗಳು ೮ ಅಂದರೆ ಅಷ್ಟವನಗಳು ೯ ಅಂದರೆ ನವಗ್ರಹಗಳು ೧೦ ಅಂದರೆ ಕೀರ್ತಿ ಶಿಖರವನ್ನೆ ಹತ್ತು ಎನ್ನುವ ಹಾಗೆ ಈ ಸಂಸ್ಥೆಯು ಹತ್ತು ವರ್ಷದಲ್ಲಿ ಸಾದನೆಗಳ ಶಿಖರವನ್ನೆ ಹತ್ತಿ ನಿಂತಿದ್ದು, ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ಬೆಳ್ಳಿ ಮಹೋತ್ಸವ ಆಚರಣೆಮಾಡುವ ಮೂಲಕ ಹಲವಾರು ಸಾಧನೆಗಳು ಮಾಡಲಿ ಎಂದು ಶುಭ ಕೋರಿದರು.

ಪೂಜ್ಯ ಶ್ರೀ. ಮ.ನಿ.ಪ್ರ ಗುರುಪಾದಲಿಂಗ ಶಿವಯೋಗಿಗಳು ಕಾರ್ಯಕ್ರಮ ಉದ್ಘಾಟಿಸಿದರು, ಪೂಜ್ಯ ಶ್ರೀ.ಮ.ನಿ.ಪ್ರ ಗುರುನಂಜೇಶ್ವರ ಮಹಾಶಿಯೋಗಿಗಳು. ಸಂಸ್ಥೆಯ ಅಧ್ಯಕ್ಷ ಭೋಗಪ್ಪ ಎಸ್.ಮನ್ನಳ್ಳಿ, ಶಿವಾನಂದ ಪಾಟೀಲ ಅಷ್ಟಗಿ, ಸೋಮಲಿಂಗ ಕೆರದಳ್ಳಿ ಶರಣುಕುಮಾರ ಮೋದಿ, ಕೈಲಾಸ ಪಾಟೀಲ, ಭಾಸ್ಕರ ನಾಯಕ್, ಮತ್ತು ಮಲ್ಲಿಕಾರ್ಜನ ಹಸುರಗುಂಡಗಿ. ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು.

ಸಂದೀಪ ಪಾಟೀಲ ನಿರೂಪಿಸಿದರು, ಗುಂಡಮ್ಮ ಮುಗಳೆ ಮತ್ತು ಶರಣಬಸಪ್ಪಾ ಮುಲಗೆ ಸ್ವಾಗತಿಸಿದರು, ಗಂಗಾಧರ ಮಿರಕಲ್ ಅವರು ವಾರ್ಷಿಕ ವರದಿ ಓದಿದರು, ಇದೇ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದರು. ಶಾಲೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here