ಕಲಬುರಗಿ: ನಗರದ ಅಂಚಚಿನಲ್ಲಿರುವ ಶ್ರೀನಿ ವಾಸ ಸರಡಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ವಾರ್ಷಿಕೋತ್ಸವ ಮತ್ತು ದ್ವಿತೀಯ ಪಿ.ಯು.ಸಿ.ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.
ಚಿಕ್ಕವೀರೇಶ್ವರ ಹಿರೆಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಡಾ.ರೇವಣಸಿದ್ಧ ಶಿವಾಚಾರ್ಯರು ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ನಡುವೆ ಇರುವ ಅನೇಕರು ನಮಗೆ ಗುರುವಾಗುವ ಸಾಧ್ಯತೆ ಇದೆ ಉತ್ತಮ ಮಾರ್ಗ ತೋರಿಸಿದವರೆಲ್ಲರೂ ಗುರುಗಳೇ, ಆದರೆ ಉಪನ್ಯಾಸಕರು ಬಾಳಬುತ್ತಿಗೆ ಮಾರ್ಗತೋರುವರಲ್ಲದೆ ಸಂಸ್ಕಾವನ್ನು ಕಲಿಸುತ್ತಾರೆ. ಜೀವನಕ್ಕೆ ಶಿಕ್ಷಣ ಮತ್ತು ಸಂಸ್ಕಾರ ಎರಡೂ ಮುಖ್ಯ ಎಂದರು.ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಶ್ರೀ ಎಸ್.ಎಲ್ ಪಾಟೀಲ ನಿವೃತ್ ಪ್ರಾಧ್ಯಾಪಕರು,ಮತ್ತು ಪ್ರಗತಿಪರ ಚಿಂತಕರು ಮಾತನಾಡಿ ಶಿಕ್ಷಣ ವು ಮುಖ್ಯವಾಗಿ ಮನುಷ್ಯರಾಗುವುದನ್ನು,ನಾಗರಿಕನಾಗುವುದನ್ನು,ವಿಶ್ವಮಾನವರನ್ನಾಗುವುದನ್ನು,ಮತ್ತು ಪರಿಸರ ಪ್ರೇಮಿಯಾಗುವುದನ್ನು ಕಲಿಸಬೇಕು ಎಂದರು.
ಇನ್ನೋರ್ವ ಅತಿಥಿ ರಾಜೇಶ್ವರಿ ಸಾಹು ತನ್ನ ಹೋರಾಟದ ಬದುಕನ್ನು ತಿಳಿಸುತ್ತ ಧೈರ್ಯದಿಂದ ನುಗ್ಗುವವರಿಗೆ ಅವಕಾಶಗಳು ತಾನೇ ತೆರೆದು ಕೊಳ್ಳುತ್ತವೆ ಎಂದರು. ಗ್ರಾಮ ಪಂಚಾಯತಿಯ ಅದ್ಯಕ್ಷರಾದ ರಾಜೂ ಪವಾರ,ತಾ.ಪಂ ಸದಸ್ಯರಾದ ನಾರಾಯಣಪವಾರ,ಮತ್ತು ನಿಕಟ ಪೂರ್ವ ಗ್ರಾ.ಪಂ ಅಧ್ಯಕ್ಷ ಬಾಬೂರಾವ ರಾಠೋಡ,ಶಿವಕುಮಾರರ ಬ್ಯಾಂಕ್ ಅಧಿಕಾರಿಗಳು,ಅನಂತರಾವ ಕುಲಕರ್ಣಿ ನಿವೃತ್ ಪ್ರಾಂಶುಪಾಲರು,ಇಂದಿರಾ ಗುರುಮಠ, ಧರ್ಮರಾಜ ಜವಳಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶೇಖರಯ್ಯಾ ರುಮಾಲ ಪ್ರಾಚಾರ್ಯರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಎಸ್.ಎಸ್.ಪಾಟೀರ, ಪ್ರಾಸ್ತಾವಿಕವಾಗಿ ಮಾತನಾಡಿದರು,ನಿರುಪಣೆ ಎಸ್.ಸಿ.ತಮ್ಮಾಗೋಳ್, ರಂಗದಾಳ ಸ್ವಾಗತಿಸಿದರು,ಶ್ರೀಮತಿ ಗುಣಾವಂದಿಸಿದರು,ಮೇಹಬೂಬ,ವನಕ್ಯಾಳ್,ಸಂಗನಗೌಡ,ಸುಭಾಸ ಆಡೆ ಮುಂತಾದ ಗಣ್ಯರು,ನಾಗರಿಕರು ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು ,ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.