ಸಿಎಎ ಕಾಯ್ದೆಯಿಂದ ಸಮಸ್ಯೆ ಉಂಟಾದರೆ ಪಕ್ಷ ತೊರೆಯುತೇನೆ: ಸಂಸದ ಡಾ. ಜಾಧವ್

0
247

ಕಲಬುರಗಿ: ಸಿಎಎಯಿಂದ ಯಾರಿಗೂ ತೊಂದರೆ ನೀಡಲ್ಲ ವೇಳೆ ಹಾಗಾದರೆ ನಾನು ಪಕ್ಷ ತೋರೆದು ಜನರ ಪರವಾಗಿ ನಿಲ್ಲೂತೇನೆ ಎಂದು ಸಂಸದ ಡಾ. ಉಮೇಶ್ ಜಾಧವ್ ಹೇಳಿದ್ದಾರೆ.

ಇಂದು ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಹೈದರಾಬಾದ್ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ಸಂಸ್ಥಾಪನ ದಿನದ ಅಂಗವಾಗಿ ಸಾಧಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು.

Contact Your\'s Advertisement; 9902492681

ನಾನು ಎಲ್ಲಾ ಧರ್ಮದ ಹಿರಿಯರ ಆಶಿರ್ವಾದಿಂದ ಸಂಸದನಾಗಿ ಆಯ್ಕೆಯಾದ್ದು, ಸಿಎಎ ಕಾಯ್ದೆಯಿಂದ ಯಾರುಗೂ ಸಮಸ್ಯೆ ಆಗಲ್ಲ, ಜನರಲ್ಲಿ ಗೊಂದಲ ಶೃಷ್ಠಿಸಿ ಗೊಂದಲ ಉಂಟುಮಾಡುತ್ತಿದ್ದಾರೆ. ಯಾರಿಗೂ ಇದರಿಂದ ತೊಂದರೆ ಆದರೆ ನಾನು ಸರಕಾರದಿಂದ ಹೊರಬಂದು ಜನರ ಪರ ನಿಲ್ಲುತೇನೆ ಎಂದರು.

ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕ  ಶ್ರೀ ಶ್ರೀ ಶ್ರೀ ರವಿಶಂಕರ ಗುರುಜಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಶರಣಬಸಪ್ಪ ಅಪ್ಪಾ, ಖಾಜಾ ಬಂದಾನವಾಜ್ ದರ್ಗಾದ ಪಿಠಾಧಿಪತಿ ಡಾ. ಸೈಯದ್ ಶಾ ಖುಸ್ರೂ ಹುಸೈನಿ, ದಕ್ಷಿಣ ಮತಕ್ಷೇತ್ರ ಶಾಸಕ ದಾತ್ರೇಯ ಪಾಟೀಲ ಸಿ ರೇವೂರ್, ಬಸವರಾಜ್ ಮತ್ತಿಮೂಡ ಸೇರಿದಂತೆ ಮುತಾಂದವರು ಇದ್ದರು.

ಕೆ.ಬಿ.ಎನ್ ದರ್ಗಾದ ಪಿಠಾಧಿಪತಿ, ಖಾಜಾ ಬಂದಾ ನವಾಜ್ ವಿಶ್ವ ವಿದ್ಯಾಲಯದ ಕುಲಪತಿ ಡಾ.ಸೈಯದ್ ಶಾ ಖೂಸ್ರು ಹುಸೈನಿ ಅವರಿಗೆ  ಹೈದರಾಬಾದ್ ಕರ್ನಾಟಕ ಚೆಂಬರ್ ಆಫ್ ಕಾಮರ್ಸ್ ವತಿಯಿಂದ ಶ್ರೇಷ್ಠ ಶಿಕ್ಷಣ ಸಂಸ್ಥೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಹಲವು ಸಾಧಕರಿಗೆ ವಿವಿಧ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಗಣ್ಯರಿಗೂ ಸನ್ಮಾನಿಸಿ ಪ್ರಶಸ್ತಿ ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here