ಬೋನಾಳ ಪಕ್ಷಿಧಾಮದ ಬಗ್ಗೆ ಸರಕಾರದ ನಿರ್ಲಕ್ಷ್ಯ ಸರಿಯಲ್ಲ: ಪರಿಸರ ಪ್ರೇಮಿ ನರೇಂದ್ರ ಪಾಟೀಲ

0
76

ಸುರಪುರ: ಬೋನಾಳ ಕೆರೆ ಪಕ್ಷಧಾಮ ಎಂಬುದು ಈ ನಾಡಿಗೆ ಬಹುದೊಡ್ಡ ಹೆಮ್ಮೆಯ ಮತ್ತು ಗೌರವದ ಸಂಕೇತವಾಗಿದೆ.ಇದನ್ನು ಸರಕಾರ ನಿರ್ಲಕ್ಷ್ಯ ತೋರುವ ಮೂಲಕ ಹಾಳು ಮಾಡುತ್ತಿದೆ.ಇದು ಸರಿಯಲ್ಲ ಎಂದು ಹುಲಿ ತಜ್ಞ ಹಾಗು ಪರಿಸರ ಪ್ರೇಮಿ ನರೇಂದ್ರ ಪಾಟೀಲ ಬೇಸರ ವ್ಯಕ್ತಪಡಿಸಿದರು.

ರಾಜ್ಯಾದ್ಯಂತ ಸೈಕಲಾ ಜಾಥಾ ತಾಲೂಕಿನ ಬೋನಾಳ ಪಕ್ಷಿಧಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು,ನಾನು ಇದುವರೆಗೆ ಸುಮಾರು ಎಂಟು ನೂರು ಕಿಲೋ ಮೀಟರ್‌ಗಳವರೆಗೆ ಸೈಕಲ್ ಜಾಥಾ ನಡೆಸಿ ನಾಡಿನ ಮಹಾರಾಷ್ಟ್ರ ಗಡಿ ಭಾಗದ ಅನೇಕ ಅರಣ್ಯ ಪ್ರದೇಶ ಮತ್ತು ವಿವಿಧ ರೀತಿಯ ಮಣ್ಣಿನ ಪ್ರದೇಶಗಳನ್ನು ನೋಡಿಕೊಂಡು ಬಂದಿರುವೆನು.ಆದರೆ ಇಲ್ಲಿಯ ಗುಡ್ಡಗಾಡು ಪರಿಸರ ತುಂಬಾ ಇಷ್ಟವಾಗುತ್ತದೆ.ನಾನು ಈ ಹಿಂದೆ ಹುಲಿ ಗಣತಿಯ ತಜ್ಞ ಉಲ್ಲಾಸ ಕಾರಂತರೊಂದಿದೆ ಸುಮಾರು ವರ್ಷಗಳ ಕಾಲ ಕೆಲಸ ಮಾಡಿರುವೆನು,ಅಲ್ಲದೆ ದೇಶದ ವಿವಿಧ ಪ್ರದೇಶಗಳ ಅರಣ್ಯಗಳಲ್ಲಿ ಸಂಚರಿಸಿ ವನ್ಯ ಜೀವಿಗಳ ಬಗ್ಗೆ ಅಧ್ಯಾಯನ ನಡೆಸಿದೆ.

Contact Your\'s Advertisement; 9902492681

ಆದರೆ ಇಲ್ಲಿಯ ಅನುಭವ ತುಂಬಾ ವಿಶೇಷ ಎನಿಸುತ್ತಿದೆ.ಏಷ್ಯಾದಲ್ಲಿಯ ಅತಿ ದೊಡ್ಡ ಕೆರೆಗಳ ಸಾಲಿನಲ್ಲಿ ನಿಲ್ಲುವ ಈ ಕೆರೆ ಹಾಗು ಇಲ್ಲಿ ನಿರ್ಮಿಸಿರುವ ಪಕ್ಷಿಧಾಮ ಎಲ್ಲವೂ ಅದ್ಭುತವಾಗಿದೆ.ಆದರೆ ಕಾಟಾಚಾರಕ್ಕೆ ಎಂಬಂತೆ ಪಕ್ಷಿಗಳಿಗೆ ಯಾವುದೆ ರೀತಿಯ ವಾಸದ ಸೌಲಭ್ಯಗಳು ಕಲ್ಪಿಸದೆ ನಿರ್ಲಕ್ಷ್ಯ ತೋರಿರುವುದು ಬೇಸರ ಮೂಡಿಸಿದೆ.ಇದ್ಕಕೆ ಸಾರ್ವಜನಿಕರು ಧ್ವನಿ ಎತ್ತುವ ಮೂಲಕ ಪಕ್ಷಿಧಾಮದ ಅಭಿವೃಧ್ಧಿಗೆ ಮುಂದಾಗುವಂತೆ ಕರೆ ನೀಡಿದರು.ಕೆರೆಯಲ್ಲಿ ಮೀನುಗಾರಿಕೆ ನಡೆಸುವ ಮೂಲಕ ಪಕ್ಷಿಗಳ ವಾಸಕ್ಕೆ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿದ್ದ ಮೀನುಗಾರರು ಮಾತನಾಡಿ,ಈ ಕೆರೆಗೆ ಸುಮಾರು ಏಳು ನೂರು ಎಕರೆ ನಮ್ಮ ಜಮೀನುಗಳು ನೀಡಿದ್ದು ಸರಕಾರ ನಮಗೆ ಬೇರೆ ಕೆರೆಗಳಲ್ಲಿ ಮೀನುಗಾರಿಕೆಗೆ ಅವಕಾಶ ಮಾಡಿಕೊಟ್ಟಲ್ಲಿ ಇಲ್ಲಿಯ ಮೀನುಗಾರಿಕೆ ನಿಲ್ಲಿಸುವುದಾಗಿ ತಿಳಿಸಿದರು.

ಬೋನಾಳ ಕೆರೆ ಪಕ್ಷಿಧಾಮಕ್ಕೆ ಭೇಟಿ ನೀಡಿದ ಇವರನ್ನು ಬೋನಾಳ ಮತ್ತು ಪೇಠ ಅಮ್ಮಾಪುರದ ಜನತೆ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಸಾಹಿತಿ ನಬಿಲಾಲ ಮಕಾಂದಾರ,ಗ್ರಾ.ಪಂ ಸದಸ್ಯ ಮಲ್ಲಿಕಾರ್ಜುನರಡ್ಡಿ ಕೋಳಿಹಾಳ,ಸಾಯಿಬಣ್ಣ ಅಂಬಿಗೇರ,ಹಣಮಂತ್ರಾಯ ನಾಯಕ,ಶಿವಕುಮಾ ಹಿರೇಮಠ,ವಿಶ್ವನಾಥರಡ್ಡಿ ಬೋನಾಳ,ರಾಘವೇಂದ್ರ ಪತ್ತಾರ,ಮೌನೇಶ ಕಲಾಲ,ಮಾನಪ್ಪ ಬಡಿಗೇರ,ವೆಂಕಟೇಶ ಬಡಿಗೇರ,ಪ್ರಕಾಶ ಸಮೇದ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here