ಪರಿಸರ ಜಾಗೃತಿಗಾಗಿ ಮಾಸೂರಿನಿಂದ ಭಾಲ್ಕಿವರೆಗೆ ಶರಣಧ್ವಜಾ ಯಾತ್ರೆ: ಮಂಜಪ್ಪ ಬುರಡೆಕಟ್ಟೆ

0
70

ಸುರಪುರ: ಎಲ್ಲರು ಪರಿಸರ ಕಾಳಜಿವಹಿಸಬೇಕಿದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಸಂಕಷ್ಟ ಎದುರಾಗಲಿದೆ.ಅದಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ಮಿಟ್ಲಕಟ್ಟೆ ವೀರಾಚಾರಿಯವರೊಂದಿಗೆ ಸರ್ವಜ್ಞನ ಜನ್ಮಸ್ಥಳ ಮಾಸೂರಿನಿಂದ ಕುಂಬಾರ ಗುಂಡಯ್ಯನವರ ಜನ್ಮಸ್ಥಳ ಭಾಲ್ಕಿಯವರೆಗೆ ಶರಣಧ್ವಜಾ ಜಾಥಾ ನಡೆಸುತ್ತಿರುವುದಾಗಿ ಖ್ಯಾತ ಸಂಶೋಧಕ ಮಂಜಪ್ಪ ಬುರೆಡೆಕಟ್ಟೆ ಮಾತನಾಡಿದರು.

ಜಾಥಾದ ಅಂಗವಾಗಿ ಸುರಪುರದ ರಂಗಂಪೇಟೆಯ ಸರ್ವಜ್ಞ ವೃತ್ತದ ಬಳಿ ಕುಂಬಾರ ಸಮುದಾಯದಿಂದ ನೆರವೇರಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ವೀರಾಚಾರಿಯವರು ಸುಮಾರು ಐದು ಸಾವಿರ ಮರಗಳನ್ನು ನೆಟ್ಟು ಬೆಳೆಸುವ ಮೂಲಕ ನಮಗೆಲ್ಲ ಮಾದರಿಯಾಗಿದ್ದಾರೆ.ಇವರ ಸೇವೆಯನ್ನು ಅರಿತ ಸರಕಾರ ಈಬಾರಿ ರಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.ಅಲ್ಲದೆ ಸರ್ವಜ್ಞನ ಬಗ್ಗೆ ಅನೇಕರು ಹಲವಾರು ಕಟ್ಟು ಕತೆಗಳನ್ನು ಹೇಳುತ್ತಿದ್ದು,ಸರ್ವಜ್ಞನ ತಂದೆ ತಾಯಿ ಇಬ್ಬರು ಕುಂಬಾರ ಸಮುದಾಯದವರು ಹಾಗು ಸರ್ವಜ್ಞನ ಜನ್ಮ ಸ್ಥಳ ಹಿರೇಕೆರೂರು ತಾಲೂಕಿನ ಮಾಸೂರು ಎಂಬುದು ದೃಢಪಟ್ಟಿದೆ,ಇದನ್ನು ಪರಿಸರ ಜಾಗೃತಿಯೊಂದಿಗೆ ಎಲ್ಲರಲ್ಲಿಯೂ ಸರ್ವಜ್ಞನ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಜಾಥಾ ನಡೆಸಲಾಗುತ್ತಿದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಪರಿಸರವಾದಿ ಹಾಗು ೨೦೧೯ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಿಟ್ಲಕಟ್ಟೆ ವೀರಾಚಾರಿ ಮಾತನಾಡಿ, ಮನೆಗೊಂದು ಮರವಿರಲಿ ಊರಿಗೊಂದು ವನವಿರಲಿ ಅವೆ ಸಮಾಜಕ್ಕೆ ನಾವು ಕೊಡುವ ಕೊಡುಗೆಯಾಗಲಿ. ಸಮಾಜ ನಮಗೇನು ಕೊಟ್ಟಿತು ಎಂಬುವುದು ಮುಖ್ಯವಲ್ಲ ಸಮಾಜಕ್ಕೆ ನಾವು ಏನು ಕೊಟ್ಟಿದ್ದೆವೆ ಎಂಬುದು ಮುಖ್ಯ.ಆದ್ದರಿಂದ ಎಲ್ಲರೂ ಮರಗಳನ್ನು ಬೆಳೆಸಿ ಪರಿಸರ ಸ್ವಚ್ಛವಾಗಿಡಿ,ಯಾವುದೆ ಕಾರ್ಯಕ್ರಮಗಳಲ್ಲಿ ಹಾರ ತುರಾಯಿಗಳ ಬದಲು ಒಂದು ಸಸಿಯನ್ನು ಕೊಡುವ ಮೂಲಕ ಪರಿಸರ ಪ್ರೇಮವನ್ನು ಮೆರೆಯುವಂತೆ ಕರೆ ನೀಡಿದರು.

ನಾನು ಸದಾಕಾಲ ಪರಿಸರ ಜಾಗೃತಿ ಬಗ್ಗೆ ಅನೇಕ ಹೋರಾಟಗಳನ್ನು ಮಾಡಿದೆ,ಅದರಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪರಿಸರ ಪ್ರೇಮಿಗಳಾಗಿ ಸ್ವಚ್ಛ ಭಾರತ ಅಭಿಯಾನ ಎಂಬ ಯೋಜನೆಯನ್ನೆ ಆರಂಭಿಸಿದ್ದಾರೆ ಅವರಿಗೆ ಅಭಿನಂಧನೆ ಸಲ್ಲಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಜಾಥಾದಲ್ಲಿದ್ದ ಶಿಕ್ಷಕ ನಾಗರಾಜ,ವೀರಭದ್ರಪ್ಪ ಹಾಗು ಬಸವರಾಜ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೂಗುರೇಶ ವಾರದ,ತಾಲೂಕು ಕುಂಬಾರ ಸಂಘದ ಅಧ್ಯಕ್ಷ ರಾಜಶೇಖರ ಕುಂಬಾರ,ಉಪಾಧ್ಯಕ್ಷ ಸಾಹೇಬಗೌಡ ಕುಂಬಾರ,ಪ್ರಧಾನ ಕಾರ್ಯದರ್ಶಿ ಭೀಮರಾಯ ಕುಂಬಾರ ಮುಖಂಡರಾದ ಈರಣ್ಣ ಕುಂಬಾರ,ವೀರಭದ್ರಪ್ಪ ಕುಂಬಾರ,ಅಮರೇಶ ಕುಂಬಾರ,ಆದಪ್ಪ ಕುಂಬಾರ,ಮಡಿವಾಳ ಕುಂಬಾರ,ಶರಣು ಅರಕೇರಿ,ನಿಂಗಣ್ಣ ಕುಂಬಾರ,ಮಡಿವಾಳಪ್ಪ ಕುಂಬಾರ,ಬಸವರಜ ಕುಂಬಾರ,ನಾಗರಾಜ ರುಮಾಲ,ಇಂದುಧರ ಜಾಕಾ,ಮಂಜುನಾಥ ಸ್ವಾಮಿ,ಶ್ರೀನಿವಾಸ ಯಾದವ್,ಮುರಳಿಧರ ಅಂಬುರೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here