ಕನ್ನಡ ಮಾಹಿತಿಯ ಕಣಜ ‘ಸಿತಿಮಾ’ ಅವರ ಮಾದರಿ ಕನ್ನಡ ಕಾರ್

0
133

ಕಲಬುರಗಿ: ಸಿತಿಮಾ ಕಾವ್ಯ ನಾಮದಿಂದ ಪ್ರಸಿದ್ಧರಾದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಸಿದ್ದಪ್ಪ ತಿಮ್ಮಪ್ಪ ಮಾದರ ಅವರ ಕನ್ನಡ ಪ್ರೇಮ ಮಾದರಿಯಾಗಿದೆ.

ಈ ಬಾರಿ ಕಲಬುರಗಿಯಲ್ಲಿ ನಡೆಯಲಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ಕಾಲಿಟ್ಟ ಈತ ತನ್ನ ಕಾರ್ ನ ಮುಂಭಾಗ, ಎಡ- ಬಲದಲ್ಲಿ ಕನ್ನಡದ ಒಕ್ಕಣಿಕೆ, ಕವಿಗಳ ಫೋಟೊ ಅಂಟಿಸುವ ಮೂಲಕ ಕನ್ನಡ ಪ್ರಜ್ಞೆ ಬಿತ್ತುತ್ತಿದ್ದಾನೆ.

Contact Your\'s Advertisement; 9902492681

ಈ ಹಿಂದೆ ಮಂಗಳೂರು, ಶ್ರವಣ ಬೆಳಗೋಳ, ಮೈಸೂರು, ರಾಯಚೂರು, ಧಾರವಾಡ ಸೇರಿದಂತೆ ಈವರೆಗೆ ತನ್ನ ಸ್ವಂತ ಖರ್ಚಿನಲ್ಲೇ ತನ್ನ ಸಂಗಡಿಗರ ಜೊತೆ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ತಾವು ಬರುವ ಮಾರ್ಗ ಮಧ್ಯೆ ಕನ್ನಡದ ಕಂಪು ಬೀರುತ್ತ ಬಂದಿರುವ ಇವರ ವಾಹನದ ಮೇಲಿನ ಒಕ್ಕಣಿಕೆ ಓದಲು ಸುಮಾರು ಒಂದು ಗಂಟೆ ಬೇಕಾಗುತ್ತದೆ.

ಕನ್ನಡದ ಮೊಟ್ಟ ಮೊದಲ ಹಲ್ಮಿಡಿ ಶಾಸನದ ಚಿತ್ರದಿಂದ ಹಿಡಿದು ಬದಾಮಿ, ಮಸ್ಕಿ, ಕೊಪ್ಪಳ ಶಾಸನಗಳಿವೆ. ಹಳೆಗನ್ನಡ, ನಡುಗನ್ನಡ ಹೊಸ ಗನ್ನಡ, ಪ್ರಗತಿಶೀಲ, ದಲಿತ- ಬಂಡಾಯ ಘಟ್ಟದ ಪ್ರಮುಖ ಕವಿಗಳ ಭಾವಚಿತ್ರವೂ ಇವೆ.

ಪಂಪ, ರನ್ನ, ಜನ್ನ, ಬಸವಣ್ಣ, ಕುವೆಂಪು ತೇಜಸ್ವಿ, ಅರವಿಂದ ಮಾಲಗತ್ತಿ, ಸಬರದ, ದೇವನೂರ ಮಹಾದೇವ, ಬಸವರಾಜ ಕಟ್ಟಿಮನಿ ಮುಂತಾದವರ ಭಾವಚಿತ್ರಗಳಿವೆ.

ಕನ್ನಡ ಅಂಕಿ ಸಂಖ್ಯೆ, ಕನ್ನಡ ವರ್ಣ ಮಾಲೆ ಮೂಲಕ ಕನ್ನಡ ಪ್ರೇಮ, ಕನ್ನಡ ಜಾಗೃತಿ ಮೂಡಿಸುವ ಅನೇಕ ನಾಮ ಫಲಕಗಳಿವೆ. ಒಟ್ಟಾರೆ ಯಾಗಿ ಹೇಳಬೇಕಾದರೆ ಇವರ ಈ ವಾಹನ ಮಾಹಿತಿಯ ಕಣಜವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here