ಆಳಂದ: ತಾಲೂಕಿನ ಸುಂಟನೂರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಗುದ್ದಲಿ ಪೂಜೆ ನೇರವೇರಿಸಿದರು.
ಸುಂಟನೂರ ಗ್ರಾಮದಿಂದ ಬಾಬಾ ಫಕ್ರೋದ್ದೀನ್ ದರ್ಗಾದವರೆಗಿನ ೧ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ, ೨೦ ಲಕ್ಷ ವೆಚ್ಚದ ೨ ಶಾಲಾ ಕೋಣೆ, ೨೦ ಲಕ್ಷ ವೆಚ್ಚದ ಹಿರಿಯ ಪ್ರಾಥಮಿಕ ಶಾಲೆಯ ತಡೆಗೊಡೆ, ಬನಶಂಕರಿ ದೇವಾಲಯದ ೧೫ ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ಹರಿಜನ ಓಣಿಯಲ್ಲಿ ಎಸ್‌ಸಿಪಿ ಯೋಜನೆಯ ೧೦ ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ೬ ಲಕ್ಷ ರೂ ವೆಚ್ಚದ ರಸ್ತೆ ಸೇರಿದಂತೆ ಸುಮಾರು ೧.೯೬ ಲಕ್ಷ ರೂ ವೆಚ್ಚದ ವಿವಿಧ
ಕಾಮಗಾರಿಗಳಿಗೆ ಮಂಗಳವಾರ ಗುದ್ದಲಿ ಪೂಜೆ ನೇರವೇರಿಸಿ ಮಾತನಾಡಿದರು.
೨೦೧೯-೨೦ನೇ ಸಾಲಿನ ಅನುದಾನದಲ್ಲಿ ಸುಂಟನೂರ ಗ್ರಾಮಕ್ಕೆ ವಿಶೇಷ ಕಾಳಜಿ ವಹಿಸಿದ್ದು ಕೇವಲ ಈ ಸಾಲಿನ ಅನುದಾನದಲ್ಲಿಯೇ ೧.೯೬ಲಕ್ಷದ ಕಾಮಗಾರಿಗೆ ಅನುಮೋದನೆ ಕೊಡಿಸಿ ಕೆಲಸ ಜಾರಿಗೊಳಿಸುತ್ತಿದ್ದೇನೆ. ಸುಂಟನೂರ ಗ್ರಾಮದ ಬಗ್ಗೆ ನನಗೆ ಬಹಳಷ್ಟು ಒಲವಿದೆ ಇಲ್ಲಿಯ ಜನರು ನನ್ನನ್ನು ಯಾವತ್ತೂ ಕೈಬಿಟ್ಟಿಲ್ಲ ಗ್ರಾಮದ ಮತ್ತು ಕ್ಷೇತ್ರದ ಜನರ ವಿಶ್ವಾಸದಿಂದ ೪ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರವಿರುವುದರಿಂದ ಇನ್ನಷ್ಟೂ ಅಭಿವೃದ್ಧಿ ಮಾಡುತ್ತೇನೆ. ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಸದಸ್ಯ ವೀರಣ್ಣ ಮಂಗಾಣೆ, ಹಣಮಂತರಾವ ಮಲಾಜಿ, ಮಹೇಬೂಬ್ ಪಟೇಲ, ಸಂಗಯ್ಯಸ್ವಾಮಿ ಮಠಪತಿ, ದತ್ತಾತ್ರೇಯ ಹುಲ್ಮನಿ, ಬಾಬುರಾವ ಪಟ್ಟಣ, ವೈಜನಾಥ ತೆಲ್ಲೂರ, ಬಾಬುರಾವ ದಣ್ಣೂರ, ಸುರೇಶಬಾಬು ಚಿಂಚೋಳಿ, ಅರ್ಜುನ ವಗ್ಗನ, ಬಾಬುರಾವ ಮಂಟಗಿ, ಧನರಾಜ ಗುಂಡದ, ಅಧಿಕಾರಿಗಳಾದ ಈರಣ್ಣ ಕುಣಗೇರಿ, ಮಲ್ಲಿನಾಥ ಕಾರಭಾರಿ, ಕರಬಸಪ್ಪ ಪರಸಗಿ, ಲಿಂಗರಾಜ ಪೂಜಾರಿ, ಸಲೀಂ ಪಟೇಲ, ಫಕ್ರೋದ್ದೀನ್ ಜಮಾದಾರ ಸೇರಿದಂತೆ ಇತರರು ಹಾಜರಿದ್ದರು.