ಕಲಬುರಗಿ: ನಮಗೆ ಆಧಾರ್ ಕೇಳುವ ನಿಮ್ಮ ಶಾಸ್ತ್ರಕ್ಕೆ ಯಾವ ಆಧಾರ? ಎಂದು ಕೇಳಿದ ಶಹಾಪುರದ ಹಿರಿಯ ಕವಿ ಶಿವಣ್ಣ ಇಜೇರಿ ಅವರ ಆಧಾರ್ ಕವಿತೆ ಸೇರಿದ್ದ ಕವಿ ಮನಸುಗಳ ಕರತಾಡನಗಿಟ್ಟಿಸಿತು ಮಾತ್ರವಲ್ಲ ಎಲ್ಲ ಸಭಿಕರು ‘ಹೌದು ಹುಲಿಯಾ’ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದ ಸಮಾನಾಂತರ ವೇದಿಕೆಯಲ್ಲಿ ನಡೆದ ೫೮ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಇಂದು ತಮ್ಮ ಸ್ವ ರಚಿತ ಕವನ ವಾಚನ ಮಾಡಿ ಸಭಿಕರಿಂದ ಮೆಚ್ಚುಗೆ ಪಡೆದುಕೊಂಡರು.
ಯುವ ಕವಿ ಶಂಕರ ಅಂಕನಶೆಟ್ಟಿಪುರ, ಕಲಬುರಗಿಯ ಎಸ್.ಪಿ. ಸುಳ್ಳದ ಅವರ ಕವಿತೆಗಳು ಪ್ರೇಕ್ಷಕರಿಂದ ಕರತಾಡನ ಪಡೆದವು, ಸುರಪುರದ ನಬಿಲಾಲ್ ಮಕಾನದಾರ್ ಕವಿತೆ ಕೂಡ ಚೆಪ್ಪಾಳೆ ಗಿಟ್ಟಿಸಿಕೊಂಡಿತು, ಕವಿಯತ್ರಿ ಅಂಜಲಿ ಓದಿದ ರೈತರ ಸಾವಿನ ಕವಿತೆ ಅಪಾರ ಚಪ್ಪಾಳೆ ಗಿಟ್ಟಿಸಿತು, ಡಾ. ಲತಾ ಗುತ್ತಿ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಬಡಿಗೇರ ನಿರೂಪಿಸಿದರು. ಶಂಕರ ಬಿರಾದಾರ ಇತರರು ಇದ್ದರು.
Super