ಶಾಹೀನ್ ಶಾಲೆಯ ಪ್ರಕರಣ : ವಿದ್ಯಾರ್ಥಿಗಳಿಗೆ ಪೋಲಿಸರಿಂದ ಮಾನಸಿಕ ಕಿರುಕುಳ : ಪೀಪಲ್ಸ್ ಫೋರಂ ಆರೋಪ

0
185

ಬೀದರ್ : ಇಲ್ಲಿನ ಪ್ರತಿಷ್ಟಿತ ಶಾಹೀನ್ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ CAA-NRC ವಿರುದ್ದ ನಡೆದ ಕಾರ್ಯಕ್ರಮದ ವಿಷಯದಲ್ಲಿ ಪೋಲೀಸರು ಶಾಲಾ ಮಕ್ಕಳೊಡನೆ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಮಕ್ಕಳ ಹಕ್ಕು ಕಲ್ಯಾಣ ಸಮಿತಿಯವರೂ ಕಣ್ಮುಚ್ಚಿ ಕುಳಿತಿದ್ದಾರೆಂದು ಕರ್ನಾಟಕ ಪೀಲ್ಸ್ ಫೋರಂ ಸಂಸ್ಥಾಪಕ, ಕಲಬುರಗಿ ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಡಾ. ಅಜಗರ್ ಚುಲಬುಲ್ ಆರೋಪಿಸಿದ್ದಾರೆ.

ಮುಖಂಡರೊಂದಿಗೆ ಬೀದರ್ ಜಿಲ್ಲೆಗೆ ನಿಯೋಗ ತೆರಳಿ ಅಲ್ಲಿನ ಸ್ಥಿತಿಗತಿ ಬಗ್ಗೆ ಅವಲೋಕನದ ನಂತರ ಇ- ಮೀಡಿಯಾ ಲೈನ್ ಜೊತೆ ಮಾತನಾಡಿ, ಘಟನೆಯ ಬಗ್ಗೆ ಇಡಿ ಇಡಿಯಾಗಿ ತಿಳಿಸಿದ್ದಾರೆ.

Contact Your\'s Advertisement; 9902492681

Juvenile Act ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪೋಲೀಸರು ಐದು ಬಾರಿ ಎಂಬತ್ತಕ್ಕೂ ಹೆಚ್ಚಿನ ಮಕ್ಕಳನ್ನು ವಿಚಾರಣೆ ನಡೆಸಿರುವ ಬಗ್ಗೆ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿ, ಇಂಥ ಪ್ರಕರಣಗಳಲ್ಲಿ ಪೊಲೀಸರು ತಮ್ಮ ಯೂನಿಫಾರಂನಲ್ಲಿಯೇ ಮಕ್ಕಳನ್ನು ವಿಚಾರಿಸುತಿದ್ದು ಮಕ್ಕಳ ಮತ್ತು ಪೋಷಕರ ವಿರುದ್ಧ ಪೊಲೀಸರ ನಡುವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಟಕದಲ್ಲಿ ಪಾತ್ರ ನಿರ್ವಹಿಸಿದ ವಿದ್ಯಾರ್ಥಿಗಳ ಕುರಿತು ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ಕೊಡದೆ ಮತ್ತು ಪೋಷಕರು ಇಲ್ಲದೇ, ತನಿಖಾ ತಂಡ ಯೂನಿಫಾರಂನಲ್ಲಿ ಹೇಗೆ ವಿಚಾರಣೆ ಮಾಡುತ್ತಿದ್ದಾರೆ.? ಒಂಬತ್ತು ವರುಷದ ಮಗುವಿನ ವಿಧವೆ ತಾಯಿಯನ್ನು ಜೈಲಿಗಟ್ಟಿದ್ದಾರೆ. ಆಕೆಯ ಒಂಬತ್ತು ವರುಷದ ಮಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ, ಆ ಮಗು ತಾಯಿಯಿಲ್ಲದೆ, ಶಾಲೆಯ ಶಿಕ್ಷಕರ ಜೊತೆಯಿದ್ದಾಳೆ. ಕಳೆದ ಒಂದು ವಾರದಿಂದ ಪೊಲೀಸರು ಮಕ್ಕಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೇ ಬಿಜೆಪಿ ಕೆಲವು ರಾಜಕೀಯ ಮತ್ತು ಸಂಸ್ಥೆಯ ವಿರುದ್ಧ ವೈಯಕ್ತಿಕ ದ್ವೇಷಕ್ಕಾಗಿ ದೇಶ ದ್ರೋಹದ ಆರೋಪ ಮಾಡಿ ತನ್ನ ರಾಜಕೀಯ ಬೇಳೆಬೇಯಿಸಲು ಹೊರಟಿದ್ದಾರೆ ಎಂದು ದೂರಿದರು.

ಅಭಿನಯ ಪಾತ್ರ ಮಾಡಿ ಪ್ರಧಾನಿ ಅವರನ್ನು ಟೀಕಿಸುವುದು ದೇಶದ್ರೋಹ ಹೇಗಾಗುತ್ತದೆ.? ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿದಕ್ಕೆ ಇಡೀ ಶಾಲೆಯನ್ನೇ ದೇಶ ದ್ರೋಹಿ ಎಂದು ಬಿಂಬಿಸಲಾಗುತ್ತಿದ್ದು, ಈ ಮೂಲಕವೇ ಒಂದು ಅಲ್ಪಸಂಖ್ಯಾತರ ಸಮುದಾಯದ ಪ್ರತಿಷ್ಟಿತ ಶಾಲೆ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ. ಇಂತಹ ನೀಚ ಮನಸ್ಥಿತಿ ಹೊಂದಿದ ಕೆಲವು ವ್ಯಕ್ತಿಗಳು ಇದರ ಹಿಂದೆ ಸಂಚು ರೂಪಿಸಿ ವಿದ್ಯಾರ್ಥಿ ಸಮುದಾಯದ ದನಿಯನ್ನ ಹತ್ತಿಕ್ಕುವ ಷಡ್ಯಂತ್ರ ಹೆಣೆಯುತ್ತಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಸಿಎಎ, ಎನ್.ಪಿ.ಆರ್ ಮತ್ತು ಎನ್.ಆರ್.ಸಿ ಕಾಯ್ದೆಗಳು ಜನರ ಆಕ್ರೋಶಕ್ಕೆ ಗುರಿಯಾಗಿದ್ದು, ನಮ್ಮ ದೇಶದ ಆರ್ಥಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯ ಬಗ್ಗೆ ಚಿಂತಿಸದ ಪ್ರಧಾನಿಯ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ಕೂಗು ಕೇಳಿಬರುತ್ತಿದೆ. ಆದರೆ ಬಿಜೆಪಿ ನಾಯಕರು ಮತ್ತು ಅವರ ಐಟಿ ಸೇಲ್ ಮುಖಂಡರು ಇಂತಹ ಹೋರಾಟಗಳನ್ನು ಎದುರಿಸಲಾಗಿದೆ, ತಿರುಚಿ ಪ್ರಜೆಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಈ ಮೂಲಕ ದೇಶದ ಪ್ರಜಾ ಸ್ವಾತಂತ್ರ್ಯಕ್ಕೆ ಅವಮಾನ ಮಾಡುತಿದ್ದು, ಪ್ರಜೆಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಈ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಶಾಹೀನ್ ಸಂಸ್ಥೆಯ ಮೇಲೆ ನಡೆಯುತ್ತಿರುವ ಆಧಾರ ರಹಿತ ಆರೋಪ ರದ್ದು ಪಡಿಸಿ, ಬಂಧಿತ ಪೋಷಕರು ಮತ್ತು ಮಕ್ಕಳನ್ನು ಬಿಡುಗಡೆಗೆ ಒತ್ತಾಯಿಸಿ, ಸರಕಾರ, ಪೊಲೀಸರು ವಿದ್ಯಾರ್ಥಿ ಮತ್ತು ಪೋಷಕರೊಂದಿಗೆ ನಡೆದುಕೊಳುತ್ತಿರುವ ರೀತಿಯನ್ನು ತೀವ್ರವಾಗಿ ಖಂಡಿಸಿದರು. ಸರಕಾರ ಪ್ರಕರಣ ರದ್ದು ಪಡಿಸದಿದ್ದರೆ, ಕಲ್ಯಾಣ ಕರ್ನಾಟಕ ಬಂದ್ ಗೆ ಕರೆ ನೀಡುವುದು ಹಾಗೂ ಉಗ್ರ ಹೋರಾಟ ಕರೆ ನೀಡುವ ಬಗ್ಗೆ ಚಿಂತಸಬೇಕಾಗುತ್ತಿದೆ ಎಂದು ಚುಲಬುಲ್ ತಿಳಿಸಿದರು. ಮಾರುತಿ ಮಾನ್ಪಡೆ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here