ಸುರಪುರ: ಬಹಳಷ್ಟು ಜನರು ಇತಿಹಾಸವನ್ನು ಓದಿದರೆ ಸಾಕು ಎಂದುಕೊಳ್ಳುತ್ತಾರೆ ಇದು ಸರಿಯಾದುದಲ್ಲಾ ಬರಿ ಓದುವುದರಿಂದ ಅದರ ಪ್ರಾಮುಖ್ಯತೆಯ ಕುರಿತು ಅರ್ಥವಾಗುವುದಿಲ್ಲ ಇತಿಹಾಸ ಸ್ಥಳಗಳನ್ನು ಪ್ರಾತ್ಯಕ್ಷಿಕ ದರ್ಶನ ಅಗತ್ಯವಾಗಿದೆ ಎಂದು ಉಪನ್ಯಾಸಕಿ ಸುವರ್ಣ ಅಂಟೋಳಿ ಹೇಳಿದರು.
ತಾಲೂಕಿನ ವಾಗಣಗೇರಾ ಗ್ರಾಮದಲ್ಲಿರುವ ಕೋಟೆಗೆ ಐತಿಹಾಸಿಕ ಸ್ಮಾರಕಗಳ ಪ್ರಾತ್ಯಕ್ಷಿಕ ಕಾರ್ಯಗಾರದ ನೇತೃತ್ವ ವಹಿಸಿ ಇಲ್ಲಿಯ ವಸ್ತುಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಮಾತನಾಡಿದ ಅವರು ಈ ಕೋಟೆಯ ನಿರ್ಮಾಣ ಹಾಗೂ ಪ್ರಥಮ ಸ್ವಾತಂತ್ರ ಹೋರಾಟದಲ್ಲಿ ಗೋಸಲ ವಂಶದ ಅರಸರ ಪಾತ್ರವನ್ನು ಕುರಿತು ವಿವರಿಸಿದರು. ದೇಶ ಸುತ್ತು ಕೋಶ ಓದು ಎನ್ನುವ ನಾಣ್ಣುಡಿಯಂತೆ ಇತಿಹಾಸವನ್ನು ಓದಿ ಅರ್ಥೈಸಿಕೊಳ್ಳುವುದಕ್ಕಿಂತ ಸ್ಮಾರಕಗಳನ್ನು ಪ್ರತ್ಯಕ್ಷವಾಗಿ ಕಂಡು ಇತಿಹಾಸವನ್ನು ತಿಳಿದುಕೊಳ್ಳುವುದು ಹೆಚ್ಚು ಪರಿಣಾಮಕಾರಿ ವಿಶ್ವದ ಇತಿಹಾಸವನ್ನು ಅಭ್ಯಸಿಸುವ ನಾವುಗಳು ನಮ್ಮ ಸ್ಥಳೀಯ ಇತಿಹಾಸವನ್ನು ಕಡೆಗಣಿಸಿರುತ್ತೇವೆ ಆದ್ದರಿಂದ ಮೊದಲು ನಮ್ಮ ಇತಿಹಾಸವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿನಿಯರು ಪಾಲ್ಗೊಂಡು ಕಾರ್ಯಗಾರವನ್ನು ಯಶಸ್ವಿಗೊಳಿಸಿದರು. ಪ್ರಾಂಶುಪಾಲರಾದ ಬಸವರಾಜೇಶ್ವರಿ ಘಂಟಿ, ಉಪನ್ಯಾಸಕರಾದ ವೆಂಕಟೇಶ ಜಾಲಗಾರ, ಡಾ.ಮಲ್ಲಿಕಾರ್ಜುನ ಕಮತಗಿ, ಅಂಬ್ರೇಶ ರುಕ್ಮಾಪುರ, ಮಹೇಶ ಸಿ.ಗಂಜಿ, ಮರೆಮ್ಮ ಕಟ್ಟಿಮನಿ, ಶ್ರೀದೇವಿ, ಶಿವುಕುಮಾರ ಕ್ವಾಟಿ ಉಪಸ್ಥಿತರಿದ್ದರು